IIT ಪದವಿ ಇಲ್ಲದಿದ್ದರೇನಂತೆ.. ಎನ್‌ವಿಡಿಯಾದಲ್ಲಿ 2.6 ಕೋಟಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡ ಚಿತ್ರದುರ್ಗ ಯುವಕನ ಯಶಸ್ಸಿನ ಕಥೆ

ಸಾಧನೆ ಮಾಡಲು ಮನಸ್ಸಿರಬೇಕೇ ಹೊರತು ಯಾವುದೇ ಶ್ರೀಮಂತ ಮನೆತನ ಹಿನ್ನೆಲೆ ಅಥವಾ ಮಹಾನಗರಗಳಲ್ಲಿ ಹುಟ್ಟಿರಬೇಕೆಂದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಯಾವುದೇ ಒಂದು ದೊಡ್ಡ ಸಾಧನೆ ಮಾಡಿದರೆ ಅವರು ಬೆಂಗಳುರಿನಂತಹ ಮೆಟ್ರೋ ಸಿಟಿಗಳಲ್ಲಿ ಹುಟ್ಟಿರಬೇಕು. ಇಲ್ಲಾ ಪ್ರತಿಷ್ಠಿತ ಐಐಟಿ ಪದವಿಗಳೇ ಇರಬೇಕು ಎಂದು ಜನ ನಂಬಿರುತ್ತಾರೆ.ಆದರೆ ಹೀಗೆ ಅಂದಕೊಂಡವರೆಲ್ಲರ ನಂಬಿಕೆಯನ್ನು ನಮ್ಮ ಕರ್ನಾಟಕದ ಯುವಕನೊಬ್ಬ ಸುಳ್ಳು ಎಂದು ಸಾಧಿಸಿ ತೋರಿಸಿದ್ದಾನೆ.

ಹೌದು, ಇದು ಚಿತ್ರದುರ್ಗದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ, ಇಂದು ಜಗತ್ತಿನ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ 'ಎನ್‌ವಿಡಿಯಾ' ಕಂಪನಿಯ ಪ್ರಧಾನ ಕಚೇರಿಯವರೆಗೆ ತಲುಪಿರುವ ಇಂಜಿನಿಯರ್ ಪೃಥ್ವಿರಾಜ್ ಅವರ ಯಶೋಗಾಥೆ. ಇವರ ಈ ಯಶಸ್ಸಿನ ಕಥೆ ಲಿಂಕ್ಡ್‌ಇನ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದೆ. ಒಂದು ಕಾಲದಲ್ಲಿ ಎತ್ತಿನ ಬಂಡಿಗಳನ್ನ ಹೊರತು ಬೇರೆ ಯಾವುದೇ ಸಾರಿಗೆ ವ್ಯೌಸ್ಥೆಯೇ ಇಲ್ಲದ ಹಳ್ಳಿಯಲ್ಲಿ ಬೆಳೆದು ಬಂದ ಈ ಯುವಕನ ಶ್ರಮ ಮತ್ತು ಆತನಲ್ಲಿರುವ ವಿಶ್ವಾಸ ಇಂದು ಕೋಟ್ಯಂತರ ಯುವ ಜನರಿಗೆ ಸ್ಪೂರ್ತಿ.

Inspiring Story

ಪ್ರತಿಷ್ಠಿತ ಐಐಟಿ ಪದವಿ ಇಲ್ಲದಿದ್ದರೂ ಕೈಹಿಡಿದ ತಾಂತ್ರಿಕ ಕೌಶಲ್ಯ

ಶಾಲಾ ಶಿಕ್ಷಣವನ್ನು ತಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಮುಗಿಸಿದ ಪೃಥ್ವಿರಾಜ್, ನಂತರ ಪದವಿಗಾಗಿ ಬೆಂಗಳೂರಿಗೆ ಕಾಲಿಟ್ಟು ಅಲ್ಲಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ದೇಶದ ಯಾವುದೇ ಪ್ರಮುಖ ಐಐಟಿ ಅಥವಾ ಎನ್‌ಐಟಿ ಸಂಸ್ಥೆಗಳ ಟ್ಯಾಗ್ ಇಲ್ಲದಿದ್ದರೂ, ಪೃಥ್ವಿರಾಜ್ ಎಂದಿಗೂ ಇದರ ಬಗ್ಗೆ ಆಲೋಚಿಸಲೇ ಇಲ್ಲ. ಬದಲಿಗೆ ಪಠ್ಯ ಪುಸ್ತಕದಾಚೆಗೆ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಿದರು. ನಿರಂತರ ಶ್ರಮ ಕಲಿಕೆ, ಇಂಟರ್ನ್‌ಶಿಪ್‌ಗಳು, ಪ್ರಾಜೆಕ್ಟ್‌ಗಳು ಹಾಗೂ ತಾಂತ್ರಿಕ ಕೌಶಲ್ಯಗಳನ್ನು ನಿರಂತರವಾಗಿ ಕಲಿಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಹೆಚ್ಚಿಸಿಕೊಂಡರು. ಅವರು ಅಂದು ಹಾಕಿರುವ ಈ ಪರಿಶ್ರಮವು ಅವರನ್ನು ಇಂದು ಜಾಗತಿಕ ಮಟ್ಟದ ಉನ್ನತ ಉದ್ಯೋಗಕ್ಕೆ ಸಿದ್ಧಪಡಿಸಿತು.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಚಿಪ್ ವಿನ್ಯಾಸದಲ್ಲಿ ಕನ್ನಡಿಗನ ಪಾತ್ರ

ಪೃಥ್ವಿರಾಜ್ ಅವರ ಈ ನಿರಂತರ ಪರಿಶ್ರಮಕ್ಕೆ ಕೊನೆಗೂ ಜಾಗತಿಕ ಮನ್ನಣೆ ಸಿಕ್ಕಿತು. ಇಂದು ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಎನ್‌ವಿಡಿಯಾ ಸಂಸ್ಥೆಯಲ್ಲಿ ಒಂದು ಒಳ್ಳೆಯ ಸಿಕ್ಕಿ. ವರ್ಷಕ್ಕೆ ಸುಮಾರು 2.6 ಕೋಟಿ ರೂಪಾಯಿಗಳ ಸ್ಯಾಲರಿ ಪ್ಯಾಕೇಜ್ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇಂದು ಜಗತ್ತನ್ನೇ ಆಳುತ್ತಿರುವ ಎಐ ತಂತ್ರಜ್ಞಾನಗಳಿಗೆ ಶಕ್ತಿ ತುಂಬುವ ಅತ್ಯಾಧುನಿಕ ಮೈಕ್ರೋಚಿಪ್‌ಗಳ ಅಭಿವೃದ್ಧಿ ಹಾಗೂ ಸಂಶೋಧನಾ ವಿಭಾಗದಲ್ಲಿ ಪೃಥ್ವಿರಾಜ್ ಕೆಲಸ ಮಾಡುತ್ತಿದ್ದಾರೆ. ಈ ರೀತಿ ವಿದೇಶದಲ್ಲಿ ನಮ್ಮ ಕನ್ನಡಿಗನೊಬ್ಬ ಮುಂಚೂಣಿಯಲ್ಲಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಯುವ ಇಂಜಿನಿಯರ್ ಕಥೆ

ಈ ಪೋಸ್ಟ್‌ ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, "ಇಂದಿಗೂ ಸಾಮಾನ್ಯ ವರ್ಗದ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಗುಣಮಟ್ಟದ ಕಲಿಕೆಯ ಮಹತ್ವ ಬದಲಾಗುವುದಿಲ್ಲ" ಎಂದಿದ್ದಾರೆ. ಮತ್ತೊಬ್ಬರು, " ನಮ್ಮ ಹಿನ್ನೆಲೆಗಿಂತ , ನಮ್ಮಲ್ಲಿರುವ ಶಿಸ್ತು ಮತ್ತು ಕಠಿಣ ಪರಿಶ್ರಮವೇ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದಕ್ಕೆ ಪೃಥ್ವಿರಾಜ್ ಅವರೇ ಸಾಕ್ಷಿ" ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಸರಿಯಾದ ಮೂಲಭೂತ ಸೌಕರ್ಯ ಇಲ್ಲದಿದ್ದರೂ ಕೂಡ ಇದರ ನಡುವೆಯೂ ದೊಡ್ಡ ಕನಸು ಕಾಣುವ ಭಾರತದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪೃಥ್ವಿರಾಜ್ ಅವರ ಈ ಸಾಧನೆಯೇ ಸ್ಫೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+