ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ಸಾಕಬೇಕಂದ್ರೆ 10,000 ರೂ ಠೇವಣಿ & ಶಿಫ್ಟ್ ಚಾರ್ಟ್‌ ಫಿಕ್ಸ್‌

ಬೆಂಗಳೂರು, ನವೆಂಬರ್‌ 08: ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದರೇ ಬೇರೆ. ಆದರೆ ಬಾಡಿಗೆ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿದ್ದು, ನಾಯಿ ಸಾಕಬೇಕು ಅಂದರೆ ಅದು ಅಷ್ಟು ಸುಲಭದ ಮಾತಲ್ಲ. ಪ್ರತಿನಿತ್ಯ ಹೊಸ ಹೊಸ ನಿಯಮಗಳು ಬರುತ್ತಲೇ ಇರುತ್ತದೆ. ಆದರೆ ಸಾಕು ನಾಯೊಗಳ ಮೇಲಿನ ಪ್ರೀತಿಯಿಂದ ಮಾಲೀಕರು ಅವುಗಳನ್ನು ಸಹಿಸಿಕೊಂಡು ಮನೆ ಮಾಲೀಕರ ಮಾತು ಕೇಳುತ್ತಾರೆ.

ಇದೇ ರೀತಿ ನಾಯಿ ಸಾಕಬೇಕು ಎಂದರೆ ಹಾಕಿರುವ ಹೊಸ ನಿಯಮವೊಂದು ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹಾಕಿರುವ ಶಿಫ್ಟ್ ಚಾರ್ಟ್ ಜೊತೆಗೆ ಒಂದಿಷ್ಟು ರೂಲ್ಸ್‌ ನೋಡಿ ನಾಯಿ ಸಾಕುವವರು ದಂಗಾಗಿದ್ದಾರೆ.

Rs 10,000 Deposit For Keeping Pet In Bengaluru Apartments

ಪೆಟ್ಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರಾಣಿಗಳಲ್ಲಿ ಅತಿಯಾಗಿ ಮನುಷ್ಯರೊಂದಿಗೆ ಹೊಂದಿಕೊಂಡು ಕನೆಕ್ಟ್ ಆಗುವುದೇ ಮುದ್ದಾದ ಶ್ವಾನಗಳು. ಹೀಗಾಗಿ ಪ್ರೀತಿಯ ಶ್ವಾನಗಳಿಗಾಗಿ ಎಂತೆಂತಹ ಸವಾಲುಗಳನ್ನು ತೆಗೆದುತೆಗೆದುಕೊಳ್ಳುವುದ್ಕೂ ಶ್ವಾನ ಪ್ರೇಮಿಗಳು ಸಿದ್ಧರಿರುತ್ತಾರೆ. ಆದರೆ ಇದೀಗ ಕಂಡು ಬಂದಿರುವ ಹೊಸ ನಿಯಮ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶ್ವಾನ ಸಾಕಲು ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ. ಇನ್ಮುಂದೆ ಅಪಾರ್ಟ್‌ಮೆಂಟ್‌ನಲ್ಲಿ ನಾಯಿಗಳನ್ನು ಸಾಕಲು 10 ಸಾವಿರ ಠೇವಣಿ ಇಡಬೇಕು. ಅಷ್ಟೇ ಅಲ್ಲ ಜೊತೆಗೆ ಶಿಫ್ಟ್ ಚಾರ್ಟ್‌ ಕೂಡ ಪಾಲಿಸಬೇಕು. ಠೇವಣಿ ಜೊತೆ ನಿಗದಿತ ಸಮಯದಲ್ಲಿ ಮಾತ್ರ ಶ್ವಾನವನ್ನು ಆಚೆ ತರಬೇಕು ಎಂದು ನಿಮಯಗಳನ್ನು ಮಾಡಿ, ನಿವಾಸಿಗಳಿಗೆ ಕಳುಹಿಸಲಾಗಿದೆ.

Rs 10,000 Deposit For Keeping Pet In Bengaluru Apartments

ಇನ್ನು 10 ಸಾವಿರ ಠೇವಣಿಯ ಈ ಹಣ ಅಪಾರ್ಟ್‌ಮೆಂಟ್‌ನಲ್ಲಿ ಶ್ವಾನ ಕಚ್ಚಿದವರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ. ಮತ್ತೆ ಶ್ವಾನದಿಂದ ಏನಾದರೂ ಹಾನಿ ಆದರೆ ಸ್ವಚ್ಛತೆಗಾಗಿ ಬಳಕೆ ಮಾಡಲಾಗುತ್ತದೆ. ಇನ್ನು ಶಿಫ್ಟ್ ಚಾರ್ಟ್‌ ಬಗ್ಗೆ ನೋಡುವುದಾದರೆ ಬೆಳಗ್ಗೆ 6 ರಿಂದ 7, ಮಧ್ಯಾಹ್ನ 1 ರಿಂದ 2 ಮತ್ತು ರಾತ್ರಿ10 ರಿಂದ 11ರವರೆಗೆ ಮಾತ್ರ ಶ್ವಾನವನ್ನು ಮನೆಯಿಂದ ಆಚೆ ತರಲು ಅವಕಾಶ ನೀಡಲಾಗಿದೆ. ಇದೇ ಅವಧಿಯಲ್ಲಿ ನಾಯಿ ಆಚೆ ತರಲು ಅನುಮತಿ ಕೊಡಲಾಗಿದೆ. ಶಿಫ್ಟ್ ಚಾರ್ಟ್ ಎಲ್ಲಾರಿಗೂ ಕಡ್ಡಾಯವಾಗಿದೆ. ನವೆಂಬರ್‌ 15ರೊಳಗೆ ಡೆಪಾಸಿಟ್ ಮಾಡಿಲ್ಲ ಅಂದ್ರೆ ದಿನಕ್ಕೆ 100 ರೂಪಾಯಿಯಂತೆ ದಂಡ ವಿಧಿಸಲು ಸಹ ನಿರ್ಧರಿಸಲಾಗಿದೆ. ಒಟ್ಟಾರೆ ಅಪಾರ್ಟ್‌ಮೆಂಟ್‌ಗಳಲ್ಲಿನ ಹೊಸ ಹೊಸ ನಿಯಮಗಳಿಂದ ಶ್ವಾನ ಪ್ರಿಯರು ತಲೆ ಕೆಡಿಸಿಕೊಳ್ಳುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+