Dog Astrology: ಕಪ್ಪು ನಾಯಿ ನಿಮ್ಮ ಬಳಿ ಇದಿಯಾ? ಹಾಗಾದರೆ ನೀವು ಸಾವನ್ನೇ ಗೆಲ್ಲಬಹುದು...!

ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳನ್ನು ಗೌರವಿಸಲಾಗುತ್ತದೆ. ಪ್ರತಿಯೊಂದು ಜೀವಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರಕೃತಿಯಲ್ಲಿರುವ ಮರ, ಗಿಡ, ಪ್ರಾಣಿ, ಪಕ್ಷಿಗಳಿಗೆ ಪೂಜೆ ಮಾಡಿ ಗೌರವಿಸಲಾಗುತ್ತೆ. ಇವುಗಳ ಪೂಜೆ ಆರಾಧನೆ ಮೂಲಕ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲಾಗುತ್ತದೆ.

ಜೊತೆಗೆ ಅವುಗಳ ಆಶೀರ್ವಾದವನ್ನು ಸಹ ಪಡೆಯಲಾಗುತ್ತದೆ. ಹೀಗೆ ಕಪ್ಪು ನಾಯಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಅಳವಡಿಸಿಕೊಂಡರೂ ಜೀವನದಲ್ಲಿನ ಸಮಸ್ಯೆಗಳನ್ನು ಕ್ಷಣದಲ್ಲಿ ತೊಡೆದುಹಾಕಬಹುದು. ಹಾಗಾದರೆ ಕಪ್ಪು ನಾಯಿಗೆ ಸಂಬಂಧಿಸಿದ ಕೆಲವು ಪರಿಹಾರಗಳ ಬಗ್ಗೆ ತಿಳಿಯೋಣ.

black-dog-know-what-are-the-benefits

ಶನಿ ದೋಷ ನಿವಾರಣೆಗೆ ಪರಿಹಾರ

ಶನಿ ದೋಷವನ್ನು ತೊಡೆದುಹಾಕಲು ಕಪ್ಪು ನಾಯಿಗೆ ತಿನ್ನಲು ಆಹಾರವನ್ನು ನೀಡುವುದು ಒಳ್ಳೆದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಕಪ್ಪು ನಾಯಿಗೆ ಆಹಾರ ತಿನ್ನಿಸಿ ಮತ್ತು ಅದನ್ನು ಚೆನ್ನಾಗಿ ನೋಡಿಕೊಂಡರೆ ಇದು ಕಾಲ ಭೈರವನನ್ನು ಮೆಚ್ಚಿಸುತ್ತದೆ ಮತ್ತು ಹಠಾತ್ ಮರಣವನ್ನು ತಪ್ಪಿಸುತ್ತದೆ ಎನ್ನಲಾಗುತ್ತದೆ. ಕಪ್ಪು ನಾಯಿ ಕೂಡ ಕಾಲ ಭೈರವನ ಸವಾರಿ. ಕಪ್ಪು ನಾಯಿ ಜೀವನದ ಮೇಲೆ ಇನ್ನೂ ಯಾವ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ತಿಳಿಯೋಣ.

ಕಾಲಸರ್ಪ ದೋಷ

ನೀವು ಕಪ್ಪು ನಾಯಿಗೆ ಆಹಾರ ನೀಡಿದರೆ ಅದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಿಶೇಷವಾಗಿ ನೀವು ಕಾಲ ಸರ್ಪ ದೋಷವನ್ನು ತೆಗೆದುಹಾಕಲು ಬಯಸಿದರೆ ಕಪ್ಪು ನಾಯಿಯನ್ನು ಸಾಕಿ, ಅದನ್ನು ನಿತ್ಯ ಚೆನ್ನಾಗಿ ನೋಡಿಕೊಳ್ಳಬೇಕು. ಇದು ಉತ್ತಮ ಪ್ರಯೋಜನವನ್ನು ನೀಡುತ್ತದೆ. ಈ ಪರಿಹಾರ ಕಾಲ ಸರ್ಪ ದೋಷವನ್ನು ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳಿಂದ ನಿಮ್ಮನ್ನು ದೂರ ಮಾಡುತ್ತದೆ.

black-dog-know-what-are-the-benefits

ಮಗುವಿನ ಸಂತೋಷ

ಮಕ್ಕಳ ಸಂತೋಷಕ್ಕಾಗಿ ಕಪ್ಪು ನಾಯಿಗೆ ಸಂಬಂಧಿಸಿದ ಕೆಲವು ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ನೀವು ಮಗುವನ್ನು ಗರ್ಭಧರಿಸುವಲ್ಲಿ ತೊಂದರೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಮಗುವಿನ ಆರೋಗ್ಯವು ಉತ್ತಮವಾಗಿಲ್ಲ ಅಥವಾ ಮಗುವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ, ಕಪ್ಪು ನಾಯಿಯನ್ನು ಸಾಕುವುದು ಪ್ರಯೋಜನಕಾರಿಯಾಗಿದೆ.

ಶನಿ ದೋಷ

ಕಪ್ಪು ನಾಯಿಗೆ ಸಾಸಿವೆ ಎಣ್ಣೆಯಿಂದ ಮಾಡಿದ ಆಹಾರ ತಿನ್ನಲು ಕೊಡುವುದರಿಂದ ಶನಿ ದೋಷದಿಂದ ದೂರವಾಗಬಹುದು. ನೀವು ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕಿದರೆ ಶನಿ ಮತ್ತು ಕೇತು ಗ್ರಹಗಳು ಶಾಂತವಾಗಿರುತ್ತಾರೆ. ಕಪ್ಪು ನಾಯಿಯನ್ನು ಸಾಕುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ. ಮನೆಯ ಮೇಲೂ ಕೆಟ್ಟ ದೃಷ್ಟಿ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+