ಪುಟ್ಟ ಮಗುವಿಗೆ 'ಐ ಲವ್ ಯೂ' ಹೇಳಿದ ನಾಯಿ: ವೈರಲ್ ವಿಡಿಯೋ
ಸಾಕು ಪ್ರಾಣಿಗಳಲ್ಲಿ ಅತ್ಯಂತ ಜನಪ್ರಿಯವಾದ ಪ್ರಾಣಿ ಅಂದರೆ ಅದು ನಾಯಿ. ಬಹುತೇಕ ಜನರಿಗೆ ನಾಯಿ ಅಂದರೆ ತುಂಬಾ ಪ್ರೀತಿ. ಅದರ ತುಂಟಾಟ, ಮಾಲೀಕರಿಗೆ ತೋರಿಸುವ ಪ್ರೀತಿ ಎಲ್ಲವೂ ಚಂದವೇ. ಅದರಲ್ಲೂ ನಾಯಿ ಬುದ್ಧಿವಂತ ಹಾಗೂ ನಿಯತ್ತಿನ ಪ್ರಾಣಿ ಕೂಡ ಹೌದು... ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ನಾಯಿಯೊಂದು ಪುಟ್ಟ ಮಗುವಿಗೆ 'ಐ ಲವ್ ಯೂ' ಹೇಳಿದೆ. ಅಷ್ಟಕ್ಕೂ ನಾಯಿ ಮಾತನಾಡುತ್ತಾ? ನಾಯಿ ಹೇಗೆ 'ಐ ಲವ್ ಯೂ' ಹೇಳಲು ಸಾಧ್ಯ ಎನ್ನುವ ಪ್ರಶ್ನೆ ನಿಮಗೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಪಡೆಯಲು ನೀವು ಈ ವಿಡಿಯೋ ನೋಡಲೇಬೇಕು.

ವೈರಲ್ ವಿಡಿಯೋದಲ್ಲಿ ಸಾಕು ನಾಯಿಯೊಂದು ಮಗುವೊಂದನ್ನು ಆಡಿಸುತ್ತಿದ್ದ ಮಹಿಳೆ ಕರೆ ತಕ್ಷಣ ಬರುತ್ತದೆ. ಅದರ ಮುಂದೆ ಸಣ್ಣ ಸ್ಪೀಕರ್ ತರಹದ ಕೆಲ ಬಾಕ್ಸ್ ಗಳನ್ನು ಇಡಲಾಗಿದೆ. ಆ ಬಾಕ್ಸ್ ಮೇಲೆ ನಾಯಿ ಕಾಲಿಟ್ಟರೆ ಅಕ್ಷರಗಳು ಹೊರಹೊಮ್ಮುತ್ತವೆ. ಮಗುವನ್ನು ಆಡಿಸುತ್ತಿದ್ದ ಮಹಿಳೆ ಕೇಳುವ ಪ್ರಶ್ನೆಗೆ ನಾಯಿ ಆ ಸೌಂಡ್ ಬಾಕ್ಸ್ ಮೇಲೆ ಕಾಲುಡುವ ಮೂಲಕ ಉತ್ತರ ನೀಡುತ್ತದೆ.
ನಾಯಿ ಬಾಕ್ಸ್ ಮೇಲೆ ಕಾಲಿಡುವ ಮೂಲಕ ಮೊದಲಿಗೆ 'ಹಾಯ್' ಎಂದು ಹೇಳುತ್ತದೆ. ಬಳಿಕ 'ಐ ಲವ್ ಯೂ ಟು' ಎಂದು ಪುಟ್ಟ ಮಗುವಿಕೆ ಹೇಳುತ್ತದೆ. ವಿಡಿಯೋದಲ್ಲಿ ಮಹಿಳೆ ಪುಟ್ಟ ಮಗುವಿನೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಪ್ರಾಣಿಪ್ರಿಯರ ಮನಗೆದ್ದಿದೆ.
ನಾಯಿಯೊಂದಿಗೆ ಸಮಯ ಕಳೆಯುವುದು, ಮುದ್ದಾಡುವುದು, ಆಟವಾಡುವುದು ಅಥವಾ ಅವುಗಳ ಉಪಸ್ಥಿತಿಯಲ್ಲಿ ಇರುವುದು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಅವುಗಳನ್ನು ಸಾಕುವುದು ತುಂಬಾ ಪ್ರಯೋಜನಕಾರಿಯಾಗಿದೆ.
ನಾಯಿಯನ್ನು ಮನೆಯೊಳಗೆ ಸಾಕಲು ಆಹಾರ, ವ್ಯಾಯಾಮ ಮತ್ತು ಸ್ವಚ್ಚತೆಯ ದಿನಚರಿಯನ್ನು ಪಾಲಿಸುವುದು ಅಗತ್ಯವಿದೆ. ಇದನ್ನು ಮಾಡಿದಾಗ ಒಬ್ಬ ವ್ಯಕ್ತಿ ಶಿಸ್ತು ಕಲಿಯುತ್ತಾನೆ. ಇದು ಜೀವನದಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಶಿಸ್ತನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ನಾಯಿಗಳನ್ನು ವಾಕ್ ಅಥವಾ ಡಾಗ್ ಪಾರ್ಕ್‌ಗೆ ಕೊಂಡೊಯ್ಯುವುದು ಇತರ ನಾಯಿ ಮಾಲೀಕರೊಂದಿಗೆ ಸಾಮಾಜಿಕ ಸಂವಹನವನ್ನು ಹೆಚ್ಚಿಸಬಹುದು. ಜ್ಯೋತಿಷ್ಯದ ಪ್ರಕಾರ ಶುಕ್ರ ಗ್ರಹ ಸಂಬಂಧಗಳು ಮತ್ತು ಸಾಮಾಜಿಕ ಸಂವಹನಗಳೊಂದಿಗೆ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಧನಾತ್ಮಕ ಶಕ್ತಿಯಿಂದಾಗಿ ನಾಯಿ ಸಂಬಂಧಿ ಚಟುವಟಿಕೆಗಳ ಮೂಲಕ ಹೊಸ ಸ್ನೇಹವನ್ನು ಬೆಳೆಸುವುದು ನಮ್ಮ ಸಾಮಾಜಿಕ ಜೀವನವನ್ನು ಸುಧಾರಿಸುತ್ತದೆ.
ನಾಯಿಗಳು ಯಾವಾಗಲೂ ತಮ್ಮ ಮಾಲೀಕರಿಗೆ ಬೆಂಬಲ ನೀಡುತ್ತವೆ ಮತ್ತು ಅವರು ಏನು ಹೇಳಿದರೂ ಕೇಳುತ್ತವೆ. ನಾಯಿಗಳು ಯಾವುದೇ ಆಕ್ಷೇಪ ಇಲ್ಲದೆ ಪ್ರೀತಿಯನ್ನು ನೀಡುತ್ತವೆ. ಮನೆಯಲ್ಲಿ ಯಾರಿರಲಿ, ಇಲ್ಲದೇ ಇರಲಿ ಒಂದು ನಾಯಿ ಇದ್ದರೆ ಅದು ಕಾಪಾಡುತ್ತದೆ, ನೂರು ಜನ ನಮ್ಮೊಂದಿಗೆ ಇದಾರೆ ಎನ್ನುವ ಭಾವನೆ ಮೂಡುತ್ತದೆ. ಮಾಲೀಕರಿಗೆ ಭಾವನಾತ್ಮಕ ಚಿಕಿತ್ಸೆ ನೀಡುತ್ತದೆ.












Click it and Unblock the Notifications