ಹೊಸವರ್ಷದಲ್ಲಿ ಕೋಡಿಮಠದ ಶ್ರೀಗಳು ನುಡಿದ ಮೊದಲ ಭವಿಷ್ಯ

Posted By:
Subscribe to Oneindia Kannada

2016ರಲ್ಲಿ ಮಕರಸಂಕ್ರಾಂತಿಯ ನಂತರ ಅರಸೀಕೆರೆ ಕೋಡಿಮಠ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಕೋಲಾರದಲ್ಲಿ ವರ್ಷದ ಮೊದಲ ಭವಿಷ್ಯ ನುಡಿದಿದ್ದಾರೆ.

ನಗರದ ವಕ್ಕಲೇರಿಯಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನೆಗೊಳಿಸಿ ಮಾತನಾಡುತ್ತಿದ್ದ ಶ್ರೀಗಳು, ಕೋಲಾರ ಜಿಲ್ಲೆಯ ನಾಗರೀಕರು ನೀರಿಗಾಗಿ ಇನ್ನೂ ಪರದಾಡ ಬೇಕಾಗಿದೆಯೆಂದು ಕಾರ್ಣಿಕ ನುಡಿದಿದ್ದಾರೆ. (2015ರಲ್ಲಿ ಕೋಡಿ ಶ್ರೀಗಳ ಭವಿಷ್ಯದ ಹಿನ್ನೋಟ)

ತಾಳೇಗರಿ ಮೂಲಕ ಭವಿಷ್ಯ ನುಡಿಯುವಲ್ಲಿ ಪ್ರಸಿದ್ದಿ ಪಡೆದಿರುವ ಕೋಡಿಮಠದ ಶ್ರೀಗಳು, ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನೆ, ಧಾರ್ಮಿಕ ಪೂಜಾ ವಿದಿವಿಧಾನ ಪೂರೈಸಿ ವಾಪಸ್ ಆಗುತ್ತಿದ್ದಾಗ, ಭಕ್ತಾದಿಗಳ ಒತ್ತಾಸೆಯಂತೆ ನುಡಿದ ಭವಿಷ್ಯ ಕೋಲಾರ ಜನತೆ ಇನ್ನಷ್ಟು ತಲೆಬಿಸಿ ಮಾಡಿಕೊಳ್ಳುವಂತಾಯಿತು.

ಕಳೆದ ವರ್ಷವೂ ಕೋಡಿಮಠದ ಶ್ರೀಗಳು ಬಹಳಷ್ಟು ಭವಿಷ್ಯ ನುಡಿದಿದ್ದರು. ಮೋದಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎನ್ನುವ ಭವಿಷ್ಯ ಸುಳ್ಳಾದರೆ, ದಕ್ಷಿಣದಲ್ಲಿ ಪ್ರಾಕೃತಿಕ ವಿಕೋಪ ಎದುರಾಗಲಿದೆ ಎನ್ನುವ ಅವರ ಭವಿಷ್ಯ ನಿಜವಾಗಿತ್ತು. (2016ರ ವರ್ಷ ಭವಿಷ್ಯ : ನಿಮ್ಮ ರಾಶಿಗೆ ಏನಿದೆ)

ಕೋಲಾರ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ 'ಗಂಗಾ ಭಾಗೀರಥಿ'ಯಾಗಲಿದೆ ಎನ್ನುವ ಆಶಯದಲ್ಲಿರುವ ಕೋಲಾರದ ಜನತೆಗೆ ಶ್ರೀಗಳ ಭವಿಷ್ಯ ಸಹಜವಾಗಿ ನಿರಾಶೆ ತಂದಿದೆ.

ಗುಜರಾತ್ ನಲ್ಲಿ ಬಿಜೆಪಿ ಪಾರುಪತ್ಯ ಮುಂದುವರಿಯಲಿದೆಯೇ, ಕೋಡಿಶ್ರೀಗಳ ಭವಿಷ್ಯ ಏನನ್ನುತ್ತೆ, ಮುಂದಿನ ಪುಟದಲ್ಲಿ ಕ್ಲಿಕ್ಕಿಸಿ..

ಕೋಲಾರ ನೀರಿನ ಸಮಸ್ಯೆ

ಕೋಲಾರ ನೀರಿನ ಸಮಸ್ಯೆ

ಕಳೆದ ಶನಿವಾರ (ಜ16) ಕೋಲಾರದ ವಕ್ಕಲೇರಿಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಜಿಲ್ಲೆಗೆ ನೀರು ಬರಲು ಇನ್ನೂ ಎರಡು ವರ್ಷ ಕಾಯುವುದು ಅನಿವಾರ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ದೇಶಕ್ಕೆ ಉಗ್ರಗಾಮಿಗಳಿಂದ ತೊಂದರೆ

ದೇಶಕ್ಕೆ ಉಗ್ರಗಾಮಿಗಳಿಂದ ತೊಂದರೆ

ಭರತಖಂಡಕ್ಕೆ ಉಗ್ರಗಾಮಿಗಳ ಉಪಟಳ ತಪ್ಪಿದ್ದಲ್ಲ, ಸರಕಾರದ ಎಷ್ಟೇ ಕಟ್ಟುನಿಟ್ಟಿನ ಕ್ರಮದ ನಡುವೆಯೂ ದೇಶಕ್ಕೆ ಉಗ್ರರಿಂದ ಗಂಢಾಂತರ ಮುಂದಿನ ದಿನಗಳಲ್ಲಿದೆ ಎಂದು ಕೋಡಿಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ನೈಸರ್ಗಿಕ ಪ್ರಕೋಪ ಜಾಸ್ತಿ

ನೈಸರ್ಗಿಕ ಪ್ರಕೋಪ ಜಾಸ್ತಿ

ಕಳೆದ ವರ್ಷದಂತೆ ಈ ಮನ್ಮಥ ಮತ್ತು ದುರ್ಮುಖ ನಾಮ ಸಂವತ್ಸರದಲ್ಲೂ ನೈಸರ್ಗಿಕ ಪ್ರಕೋಪ ಹೆಚ್ಚಾಗಲಿದೆ. ಭೂಕಂಪ ಮತ್ತು ಜಲಪ್ರಳಯ ದೇಶದ ಪ್ರಮುಖ ಭಾಗದಲ್ಲಿ ಸಂಭವಿಸಲಿದೆ.

ಭವಿಷ್ಯ ನುಡಿಯುವ ಪಯಣ ನಿರಾಂತಕ

ಭವಿಷ್ಯ ನುಡಿಯುವ ಪಯಣ ನಿರಾಂತಕ

ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯ ನುಡಿಯುವ ಪಯಣ 2015ರಲ್ಲೂ ನಿರಾಂತಕವಾಗಿ ಸಾಗಿತ್ತು. ಹಲವು ತೊಂದರೆಗಳ ನಡುವೆ ಸಿದ್ದು ಸರಕಾರಕ್ಕೆ ನೋ ಪ್ರಾಬ್ಲಂ ಎಂದಿದ್ದ ಶ್ರೀಗಳು, ಬಿಬಿಎಂಪಿ ಗದ್ದುಗೇರಲು ಮೈತ್ರಿ ಬೇಕೇಬೇಕು ಎಂದಿದ್ದರು.

ಗುಜರಾತ್ ನಲ್ಲಿ ಬಿಜೆಪಿಗೆ ಮುಖಭಂಗ

ಗುಜರಾತ್ ನಲ್ಲಿ ಬಿಜೆಪಿಗೆ ಮುಖಭಂಗ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಚುನಾವಣೆ ಸೋತಿರುವ ಮೋದಿ, ಗುಜರಾತಿನಲ್ಲೂ ಸೋಲು ಅನುಭವಿಸಲಿದ್ದಾರೆಂದು ಕೋಡಿಶ್ರೀಗಳು ಹೇಳುವ ಮೂಲಕ ಬಿಜೆಪಿಯನ್ನು ಎಚ್ಚರಿಸಿದ್ದಾರೆ. ಗುಜರಾತ್ ಚುನಾವಣೆ ಬರುವ ವರ್ಷಾಂತ್ಯದಲ್ಲಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Shivananda Shivayogi Rajendra Seer of Kodimath first prediction in 2016 at Kolar district.
Please Wait while comments are loading...