ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಇಸ್ರೇಲ್‌ ಅಥವಾ ಪ್ಯಾಲೆಸ್ತೇನ್‌?: ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ?

ಬೆಂಗಳೂರು, ಅಕ್ಟೋಬರ್‌ 10: ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧವನ್ನು ನೋಡುತ್ತಿದ್ದರೆ. ಕಳೆದ ಎರಡು ತಿಂಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಭವಿಷ್ಯ ನಿಜವಾಗುತ್ತಾ ಎನ್ನುವ ಅನುಮಾನ ಹುಟ್ಟು ಹಾಕಿದೆ.

ಹೌದು, ಕೋಡಿ ಮಠದ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆ ನುಡಿದ ಜಗತ್ತಿನಲ್ಲಿ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯ ನುಡಿದಿದ್ದರು. ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು.

kodi-mutt-swamiji-prediction

ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ.

ಯುದ್ಧದ ಭೀತಿಯಿಂದ ಹಾಗೂ ಮಳೆಯಿಂದ ಎರಡು ದೇಶಗಳು ಭೂಪಟದಿಂದ ಕಣ್ಮರೆಯಾಗಲಿವೆ ಎಂದು ಹೇಳಿದ್ದರು. ಶ್ರೀಗಳ ಭವಿಷ್ಯವನ್ನ ಗಮನಿಸಿದರೆ, ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧದಲ್ಲಿ ಒಂದು ದೇಶ ಭೂಪಟದಿಂದ ಕಣ್ಮರೆಯಾಗುವ ಭವಿಷ್ಯವನ್ನು ನಿಜ ಮಾಡುವುದೇ ಎಂಬ ಅನುಮಾನ ಕಾಡುತ್ತಿದೆ.

ಯುದ್ಧದ ಕುರಿತು ಹೇಳಿಕೆ ನೀಡಿದ ಶ್ರೀಗಳು, ಮುಂದೆ ಜಾಗತಿಕ ದೋಷ, ರಾಷ್ಟ್ರೀಯ ದೋಷವೂ ಹೆಚ್ಚಾಗಲಿದೆ. ಎರಡು, ಮನುಷ್ಯರು ದೈವ ಭಕ್ತಿಯಿಂದ ನಂಬಿಕೆಯಿಂದ ಇರುವುದು ಬಹಳ ಮುಖ್ಯ ಎಂದು ಸಲಹೆ ನೀಡಿದ್ದರು. ಅಲ್ಲದೇ 2024 ರ ಲೋಕಸಭೆ ಚುನಾವಣೆ ಫಲಿತಾಂಶ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ಪ್ಯಾಲೆಸ್ತೇನ್‌ ಭಾಗವಾಗಿದ್ದ ಇಸ್ರೇಲ್‌ ಒಕ್ಕೂಟವು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದು 60 ವರ್ಷಗಳೇ ಕಳೆಯುತ್ತಿವೆ. ಆದರೆ, ಇನ್ನೂ ಇಸ್ರೇಲ್‌ ದೇಶವೆಂದು ಒಪ್ಪಿಕೊಳ್ಳಲು ನೆರೆಹೊರೆ ದೇಶಗಳು ಸಿದ್ಧವಾಗಿಲ್ಲ. ಏಕಾಏಕಿ ಹಮಾಸ್‌ ಉಗ್ರರು ದಾಳಿ ಮಾಡಿದ್ದು, ಇಸ್ರೇಲ್‌ ಕೂಡ ಯುದ್ಧವನ್ನು ಸಾರಿದೆ. ಈಗ 1 ಸಾವಿರಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದು, ಇತ್ತ 800ಕ್ಕೂ ಅಧಿಕ ಇಸ್ರೇಲ್‌ ನಾಗರೀಕರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಈ ಹಿಂದೆ ಲೋಕಸಭೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ, ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದೆ. ಅದರಂತೆ ಆಗಿದೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷಾಂತರ ಹೆಚ್ಚಾದರೂ, ಒಂದೇ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದಾರೆ. ಈ ಮೂಲಕ ದೇಶದ ರಾಜಕಾರಣದಲ್ಲಿ ಯಾವುದೇ ಅತಂತ್ರ ಸ್ಥಿತಿಗಳು ಉಂಟಾಗುವುದಿಲ್ಲ ಎಂಬ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+