Kodi Mutt Sri Prediction: ಶ್ರಾವಣದಲ್ಲಿ ಅಲ್ಲೋಲ-ಕಲ್ಲೋಲ: ಚಂದ್ರಯಾನ 3, ಜನಜೀವನ ಬಗ್ಗೆ ಕೋಡಿಶ್ರೀಗಳ ಸ್ಪೋಟಕ ಭವಿಷ್ಯ
ಬೆಳಗಾವಿ, ಆಗಸ್ಟ್ 20: ಮೊನ್ನೆಯಷ್ಟೇ ರಾಜ್ಯ ರಾಜಕಾರಣ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರಿ ಶಿವಾನಂದ ಸ್ವಾಮೀಜಿ ಅವರು ಇದೀಗ ಪ್ರಕೃತಿ ಕುರಿತು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಸೃಷ್ಟಿಯಾಗಲಿರುವ ತಲ್ಲಣಗಳ ಕುರಿತು ಅವರು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಗಡಿನಾಡು ಜಿಲ್ಲೆ ಬೆಳಗಾವಿಯಲ್ಲಿ ಮಾತನಾಡಿರುವ ಕೋಡಿಶ್ರೀಗಳು, ಜಾಗತಿಕವಾಗಿ ಶ್ರಾವಣ ಮಾಸದ ಮಧ್ಯದ ಅವಧಿಯಲ್ಲಿ ಕೊಚ್ಚಿಹೋಗುವಂತಹ ವಿಪರೀತ ಮಳೆ ಸುರಿಯಲಿದೆ. ಭೂಕಂಪದಂತಹ ಅನಾಹುತಗಳು ಹೆಚ್ಚಾಗಲಿವೆ. ಸುನಾಮಿ ಎದ್ದು ಸಾವು ನೋವು ಅಧಿಕವಾಗಲಿದೆ. ವಿಶ್ವಮಟ್ಟದಲ್ಲಿ ಯುದ್ಧದ ಸ್ಥಿತಿಗಳು ಸೃಷ್ಟಿಯಾಗಲಿವೆ ಎಂದು ಪ್ರಕೃತಿ ಮುನಿಸು ಬಗ್ಗೆ ಅವರು ನುಡಿದಿದ್ದಾರೆ.

ಕರ್ನಾಟಕ, ದೇಶ ಮಾತ್ರವಲ್ಲದೇ ಜಾಗತಿಕವಾಗಿ ವಿಷಾನೀಲ ಬೀಸುವ ಪ್ರಸಂಗವೂ ಇದೆ ಎಂದಿದ್ದಾರೆ. ಇದನ್ನು ಕೇಳಿದ ಕೆಲವು ಮತ್ತೆ ವೈರಸ್‌ನಂತಹ ಮಾರಕ ಕಾಯಿಲೆಗಳು ವ್ಯಾಪಿಸಬಹುದಾ? ಎಂಬ ಆತಂಕ ವ್ಯಕ್ತವಾಗಿದೆ.
ಭಾರೀ ಮಳೆಗೆ ಕನಿಷ್ಠ ಎರಡು ದೇಶಗಳಿಗೆ ಸಾಕಷ್ಟು ತೊಂದರೆ ಇದೆ. ಭಾರತವು ಮುಂದಿನ ಕೆಲವೇ ದಿನಗಳಲ್ಲಿ ಜಲಪ್ರಳಯಕ್ಕೆ ಸಾಕ್ಷಿಯಾಗುವ ಲಕ್ಷಣಗಳು ಇವೆ. ಇದಕ್ಕೆ ವಿರುದ್ಧವಾಗಿ ಭಾರತದ ದಕ್ಷಿಣ ಭಾಗದಲ್ಲಿ ಸಮೃದ್ಧಿಯು ಆಗಲಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ವಿಷಾನೀಯಲ ಭಾರತದ ಮೇಲೂ ದುಷ್ಪರಿಣಾಮ
ಬೃಹತ್ ನಗರಗಳು ಭೂಕಂಪನಕ್ಕೆ ತುತ್ತಾಗಲಿವೆ. ಸುಖಾಸುಮ್ಮನೆ ಜನರ ಸಾವುಗಳ ನಡೆಯಲಿವೆ. ಜಾಗತಿಕ ಮಟ್ಟದಲ್ಲಿ ವಿಷಾನೀಲದ ಪರಿಣಾಮ ಭಾರತದ ಮೇಲೂ ಆಗಲಿದ್ದು, ಮಳೆ, ಜಲಕಂಟಕ, ಭೂಕಂಪನ, ಪ್ರವಾಹ, ಸಾವು ನೋವುಗಳಿಂದ ಭಾರತ ಮಾತ್ರವಲ್ಲದೇ ಜಗತ್ತೇ ತಲ್ಲಣಗೊಳ್ಳಲಿದೆ. ಆದಷ್ಟು ಎಚ್ಚರಿಕೆ ವಹಿಸುವುದು ಒಳಿತು ಎಂದು ಅವರು ಹೇಳಿದ್ದಾರೆ.

ವಿದೇಶಗಳ ಬಳಿಕ ಚಂದ್ರಮೇಲೆ ಕಾಲಿಡುತ್ತಿರುವ ನಾಲ್ಕನೇ ದೇಶವಾಗಲು ಸಜ್ಜಾಗಿರುವ ಭಾರತದ ಮಹತ್ವಪೂರ್ಣದ ಚಂದ್ರಯಾನ-3 (Chandrayaan 3) ಯಶಸ್ವಿಯಾಗಲಿದೆ ಎಂದು ಹೇಳಿರುವ ಕೋಡಿಶ್ರೀ ಭವಿಷ್ಯವಾಣಿ ಇಸ್ರೋ ವಿಜ್ಞಾನಿಗಳಿಗೆ ಮತ್ತಷ್ಟು ನೆಮ್ಮದಿ ತಂದಿದೆ. ಚಂದ್ರನ ಕಕ್ಷೆ ಸೇರಿರುವ ಉಪಗ್ರಹ, ಮುಂದಿನ 48 ಗಂಟೆಗಳಲ್ಲಿ ಚಂದ್ರನನ್ನು ಇನ್ನಷ್ಟು ಸಮೀಪಿಸಲಿದೆ. ಈ ಮೂಲಕ ಚಂದ್ರನ ದಕ್ಷಿಣ ಭಾಗಕ್ಕೆ ಇಳಿಯಲಿರುವ ಮೊದಲ ದೇಶ ಭಾರತವಾಗಲಿದೆ.
ದೈವಬಲ ನಂಬದವರಿಗೆ ಕಾದಿದೆ ಸಂಕಷ್ಟ
2024ರ ಲೋಕಸಭೆ ಚುನಾವಣೆ ಫಲಿತಾಂಶ ಕುರಿತು ಸದ್ಯಕ್ಕೆ ಶ್ರೀಗಳು ಯಾವುದೇ ಮಾತ ಆಡಿಲ್ಲ ಎಂದು ತಿಳಿದು ಬಂದಿದೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಬೇಕು. ದೇವರು ನಂಬುವವರಿಗೆ ಯಾವ ತೊಂದರೆ ಆಗದು, ನಂಬದವರಿಗೆ ಕಾದಿದೆ ಆಪತ್ತು. ಕೆಲವರಿಗೆ ದೈವಬಲವಿದ್ದರೂ ಪ್ರಕೃತಿ ನಿಯಮದಂತೆ ತೊಂದೆರಗಳು ಆಗಲಿವೆ.
ಪ್ರಕೃತಿ ಮುನಿಸಿನ ಕುರಿತು ಶ್ರೀಗಳ ಭವಿಷ್ಯ ವಾಣಿಯು, ಈ ಕಾರಣದಿಂದಲೇ ಅಧಿಕ ಸಾವು-ನೋವು ಸಂಭವಿಸುತ್ತದೆ. ಉತ್ತಮ ಆಹಾರದಿಂದ ನಾವು ರಸಾಯನಿಕ ಮಿಶ್ರಿತ ಆಹಾರ ತಿನ್ನುತ್ತಿದ್ದೇವೆ. ಈ ಆಹಾರ ಬದಲಾವಣೆಯು ತೊಂದರೆ ನೀಡುವ ಸಾಧ್ಯತೆ ಇದೆ. ಆಹಾರ ಉತ್ಪನ್ನಗಳ ಮೇಲೆ ರಸಾಯನಿಕಗಳ ಸಿಂಪಡಣೆ ಹೆಚ್ಚಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವಿಷವನ್ನು ಬಿತ್ತಿ ಬೆಳೆದು ತಿಂದರೆ ಆರೋಗ್ಯ ಹೇಗೆ ಸಾಧ್ಯ?. ಅಂತರ್ಜಲ ಕೊರತೆಯಿಂದ ಜಲಪ್ರಳಯ ಸಂಭವಿಸುತ್ತದೆ ಎಂದರು.
ರಾಜಕೀಯ ಅಸ್ಥಿರತೆ- ಮಹಿಳಾ ಸಿಎಂ ಯೋಗ
ಹಣದ ಹಿಂದೆ ಬಿದ್ದಿರುವ ಮನುಷ್ಯ ದೇವರನ್ನು ಮರೆತಿದ್ದಾರೆ. ದೇವರನ್ನು ನಂಬಿ ಬದುಕಬೇಕು. ಈ ನಂಬಿಕೆ ಕಳೆದುಕೊಂಡ ಪರಿಣಾಮವನ್ನು ನಾವು ನೋಡುತ್ತಿದ್ದೇವೆ. ರಾಜಕಾರಣ ಕುರಿತ ಪ್ರಶ್ನೆಗೆ ಶ್ರೀಗಳು ಏನು ಹೇಳಲಿಲ್ಲ. ಪಕ್ಷಾಂತರ, ಅಸ್ಥಿರತೆಯ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದರು.
ಜನರು ಹಣದ ಹಿಂದೆ ಹೋಗದೇ ದೈವದ ಹಿಂದೆ ಹೋಗಬೇಕಿದೆ. ಈಗಿನದ್ದು ಮುಗಿದರೆ, ಮುಂದೆ ಒಮ್ಮೆ ಈ ರಾಜ್ಯ ಮಹಿಳಾ ಮುಖ್ಯಮಂತ್ರಿಯನ್ನು ಕಾಣುವ ಯೋಗವಿದೆ ಎಂದು ಅವರು ನುಡಿದರು. ಮಾನವರಾದ ನಾವು ಭಗವಂತನನ್ನು ನಂಬಬೇಕು ಎಂದು ಅವರು ಸಲಹೆ ನೀಡಿದರು.












Click it and Unblock the Notifications