Meta: ವಾಟ್ಸಾಪ್ 'ಯೂಸರ್‌ನೇಮ್' ಫೀಚರ್ ಸುರಕ್ಷತೆ ಕೇಳಿದ ಕೇಂದ್ರ ಸರ್ಕಾರ: ಮೆಟಾಗೆ ನೋಟಿಸ್ ಜಾರಿ

ನವದೆಹಲಿ: ಮೆಟಾ (Meta) ಒಡೆತನದಲ್ಲಿರುವ ವಾಟ್ಸಾಪ್‌ ಜಾಗತಿಕವಾಗಿ ಅತೀ ಹೆಚ್ಚು ಬಳಸಲ್ಪಡುವ ಮೆಸೆಜಿಂಗ್ ಆಪ್ ಆಗಿದೆ. ಈ ವಾಟ್ಸಾಪ್ ಬಳಕೆದಾರರಿಗೆ 'ಯೂಸರ್‍ನೇಮ್' (Username) ವೈಶಿಷ್ಟ್ಯ ಪರಿಚಯಿಸಿದ್ದ ಮೆಟಾ ಕಂಪನಿಗೆ ಕೇಂದ್ರ ಸರ್ಕಾರ ಬುಧವಾರ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಮೂರೇ ದಿನಗಳ ಗುಡುವು ನೀಡಿದೆ. ಈ ಮೂಲಕ ವಾಟ್ಸಾಪ್ ಯೂಸರ್‍‌ನೇಮ್ ವೈಶಿಷ್ಟ್ಯ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಮಾಡುವುದು, ಪೋಸ್ಟ್ ಹಾಕುವಂತೆ ವಾಟ್ಸಾಪ್‌ನಲ್ಲಿ ಯೂಸರ್‍‌ನೇಮ್ ಬೇಸ್ ವೈಶಿಷ್ಟ್ಯ ಪರಿಚಯಿಸಿದೆ. ಇದರಿಂದಾಗಿ ನೀವು ಯಾವುದೇ ಮೊಬೈಲ್ ಸಂಖ್ಯೆ ಇಲ್ಲದೇ ಚಾಟ್ ಮಾಡಬಹುದಾಗಿದೆ. ಆದರೆ 'ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ. ಬಳಕೆದಾರರಿಗೆ ಏನೆಲ್ಲ ಸುರಕ್ಷತೆ ನೀಡುತ್ತದೆ, ದುರ್ಬಳಕೆ ತಡೆಗೆ ಕ್ರಮಗಳು ಯಾವುವು? ಎಂಬಿತ್ಯಾದಿ ಮಾಹಿತಿಯ ವರದಿ'ಯನ್ನು ಮುಂದಿನ ಮೂರು ದಿನದಲ್ಲಿ ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರ ಮೆಟಾಗೆ ನೋಟಿಸ್ ನೀಡಿದೆ.

India

ಟೆಲಿಗ್ರಾಮ್ ತಂದ ಭೀತಿ: ಕೇಂದ್ರ ಕಾಳಜಿ

ಏಕೆಂದರೆ ಈ ಹಿಂದೆ ಟೆಲಿಗ್ರಾಮ್ ಆಪ್ ನೀಟ್ ಪರೀಕ್ಷೆ ವಿಚಾರದಲ್ಲಿ ಹಾಗೂ ಮಕ್ಕಳ ಭವಿಷ್ಯದಲ್ಲಿ ವಿಚಾರದಲ್ಲಿ ಕೆಟ್ಟದಾಗಿ ಪರಿಣಾಮ ಬೀರಿದೆ. ಅಶ್ಲೀಲ ಆಪ್ ರೀತಿಯಲ್ಲಿ, ಅಪರಾಧ ಚುವಟಿಕೆಗಳಿಗೆ ಕುಮ್ಮಕ್ಕು ನೀಡಲು ಬಳಕೆ ಆಗಿದ್ದರ ಕುರಿತು ಸಾಕಷ್ಟು ದೂರು ಬಂದಿವೆ. ಇದೀಗ ಜಾಗತಿಕವಾಗಿ ಬಿಲಿಯನ್ ಗಟ್ಟಲೇ ಜನ ಬಳಕೆ ಮಾಡುವ ವಾಟ್ಸಾಪ್ ಗೆ ಅಂಥದ್ದೇ ಯೂಸ್‌ನೇಮ್ ವೈಶಿಷ್ಟ್ಯ ನೀಡುವುದು ಎಷ್ಟು ಸರಿ? ಎಂಬುದು ಸರ್ಕಾರದ ಕಾಳಜಿಯಾಗಿದೆ. ಒಂದು ವೇಳೆ ಮೊಬೈಲ್ ಸಂಖ್ಯೆ ಇಲ್ಲದೇ ಹೋದರೆ ಯಾರು ಬೇಕಾದರೂ ನಕಲಿ ಯೂಸರ್ ನೇಮ್ ಮೂಲಕ ವಂಚನೆ ಮಾಡಲೂ ಬಹುದು. ಈ ಕಾರಣದಿಂದ ಸುರಕ್ಷತಾ ಕ್ರಮಗಳ ಕುರಿತು ಮೆಟಾಗೆ ನೊಟೀಸ್ ಜಾರಿಗೊಳಿಸಲಾಗಿದೆ.

WhatsApp: ಇನ್ಮುಂದೆ ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಚಾಟ್ ಮಾಡಬಹುದು, ಇಲ್ಲಿದೆ ಹೊಸ ಅಪ್‌ಡೇಟ್‌
WhatsApp: ಇನ್ಮುಂದೆ ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಚಾಟ್ ಮಾಡಬಹುದು, ಇಲ್ಲಿದೆ ಹೊಸ ಅಪ್‌ಡೇಟ್‌

ಜೂನ್ 29ರಿಂದ ಹೊಸ ವೈಶಿಷ್ಟ್ಯ ಪರಿಚಯ

ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಗೌಪ್ಯತೆಯನ್ನು ಹೆಚ್ಚಿಸುವ ಉದ್ದೇಶದ ಮೆಟಾ ಸಂಸ್ಥೆಯು ಕ್ರಾಂತಿಕಾರಿ 'ಯೂಸರ್‌ನೇಮ್' (Username) ಫೀಚರ್ ಅನ್ನು ಕಳೆದ ಜೂನ್ 29ರಿಂದ ಅನ್ವಯವಾಗುವಂತೆ ಪರಿಚಯಿಸಿದೆ. ಈ ಮೂಲಕ ನೀವು ಮೊಬೈಲ್ ಸಂಖ್ಯೆ ಇಲ್ಲದೇ ಇತರರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ವಾಟ್ಸಾಪ್ ಯೂಸರ್‍‌ನೇಮ್ ಎಂದರೆ ಎಕ್ಸ್ (ಟ್ವಿಟ್ಟರ್) ಖಾತೆಯ ಯೂಸರ್‍‌ನೇ @ಹೆಸರಿನಿಂದ ಶುರುವಾಗುವಂತೆ ವಾಟ್ಸಾಪ್‌ನಲ್ಲೂ ಅದೇ ರೀತಿ ಬರಲಿದೆ. ಈಗಾಗಲೇ ಈ ಫೀಚರ್‍‌ ಅನೇಕರ ವಾಟ್ಸಾಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಕೆಲವರು ಅಪ್ಡೇಟ್ ಸಹ ಮಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯ ದುರ್ಬಳಕೆಗೆ ಇದೊಂದು ರಾಮಬಾಣವಾಗಲಿದೆ ಎಂದು ಮೆಟಾ ನಂಬಿದೆ.

ಯೂಸರ್‌ನೇಮ್ ಕೀ ಮೂಲಕ ಹೆಸರು ಸೆಟ್‌ ಮಾಡಿ

ಸದ್ಯ ವಾಟ್ಸಾಪ್ ಬಳಕೆದಾರರಿಗೆ 'ಯೂಸರ್‌ನೇಮ್ ಕೀ' ಎಂಬ ರಹಸ್ಯ ಕೋಡ್ ಸೆಕ್ಯೂರಿಟಿ ಲೇಯರ್ ನೀಡುತ್ತಿದೆ. ಇದನ್ನು ಯಾವಾಗ ಬೇಕಾದರೂ ಬದಲಾಯಿಸಿಕೊಳ್ಳಬಹುದು. ಇಲ್ಲಿ ನೀವು ನಿಮಗಿಷ್ಟವಾದ ಹೆಸರನ್ನು ರಿಸರ್ವ್ ಮಾಡಬಹುದು, ವಾಟ್ಸಾಪ್ ಲೇಟೆಸ್ಟ್ ವರ್ಷನ್‌ಗೆ ಅಪ್‌ಡೇಟ್ ಮಾಡಿ, Settings > Account > Username ಆಪ್ಷನ್ ಕ್ಲಿಕ್ ಮಾಡಿ ವಿಶಿಷ್ಟ ಹೆಸರನ್ನು ಸೆಟ್ ಮಾಡಿಕೊಳ್ಳಬಹುದು.

ಒಂದು ವೇಳೆ ಆ ಹೆಸರು ಈಗಾಗಲೇ ಬುಕ್ ಆಗಿದ್ದರೆ, ಆ್ಯಪ್ ಕೆಲವು ಪರ್ಯಾಯ ಹೆಸರುಗಳನ್ನು ಸೂಚಿಸುತ್ತದೆ. ಈ ಫೀಚರ್ ಹಂತ-ಹಂತವಾಗಿ ರೋಲ್-ಔಟ್ ಆಗುತ್ತಿದ್ದು, ಲಭ್ಯವಾದ ತಕ್ಷಣ ನೋಟಿಫಿಕೇಶನ್ ಬರಲಿದೆ. ಹಳೆಯ ಶೈಲಿಯಲ್ಲೇ ಫೋನ್ ನಂಬರ್ ಬಳಸಿ ಮುಂದುವರಿಯಲು ಇಚ್ಛಿಸುವವರಿಗೂ ಇಲ್ಲಿ ಮುಕ್ತ ಅವಕಾಶವಿದೆ ಎಂದು ಮೆಟಾ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+