ಪೊಲೀಸರ ಕರ್ತವ್ಯಕ್ಕೆ ಕಪ್ಪು ಚುಕ್ಕೆ! ಅಪ್ರಾಪ್ತ ಬಾಲಕ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ PSI ಬಂಧನ

ಬೆಂಗಳೂರು: ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸರೇ ಗಂಭೀರ ಅಪರಾಧ ಕೃತ್ಯದಲ್ಲಿ ತೊಡಗಿಕೊಂಡ ಪರಿಣಾಮ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪ್ರವೀಣ್ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ಜೊತೆಗೆ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.

ಬಂಧಿತ ಪೊಲೀಸ್ ಅಧಿಕಾರಿ ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ಅಪ್ರಾಪ್ತ ಬಾಲಕನನ್ನು ಅಕ್ರಮವಾಗಿ ವಶಕ್ಕೆ ಪಡೆದು, ಆತನ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ. ಈ ಅಮಾನವೀಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅಧಿಕಾರಿಯನ್ನು ಬಂಧಿಸಲಾಗಿದೆ. ಈ ಮೂಲಕ ರಾಜ್ಯ ಪೊಲೀಸ್ ಇಲಾಖೆ ತಲೆ ತಗ್ಗಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

Bengaluru PSI

ವಿಚಾರಣೆಗೆಂದು ಬಾಲಕನನ್ನು ಲಾಡ್ಜ್‌ಗೆ ಕರೆದೊಯ್ದ ಪಿಎಸ್‌ಐ

ಬಾಲಕನ ಮೇಲಿನ ಲೈಂಗಿಕ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂಧಿತ ಪಿಎಸ್ ಐ ಪ್ರವೀಣ್‌ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಕಾನ್‌ ಸ್ಟೇಬಲ್ ರಾಘವೇಂದ್ರ ಎಂಬಾತನನ್ನೂ ಅಮಾನತು ಮಾಡಲಾಗಿದೆ. ವರ್ಷದ ಹಿಂದೆ ಅಮೃತಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ಬಂಧಿತ ಪಿಎಸ್‌ ಐ ಅಪ್ರಾಪ್ತ ಬಾಲಕನನ್ನು ವಿಚಾರಣೆ ನಡೆಸುತ್ತಿದ್ದ. ನಿಯಮಗಳ ಪ್ರಕಾರ ವಿಚಾರಣೆ ನಡೆಸದೇ ಬಾಲಕನನ್ನು ಲಾಡ್ಜ್‌ಗೆ ಕರೆದೊಯ್ದು ತೀವ್ರ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಲವಂತವಾಗಿ ಬಾಲಕನ ಬಟ್ಟೆ ಬಿಚ್ಚಿಸಿ ದುರ್ವತನೆ ತೋರಿದ್ದಾನೆ. ಜೊತೆಗೆ ಅಂದಿನ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಆ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

SIR ಮೊದಲ ದಿನವೇ 60,000 ಗಣತಿ ನಮೂನೆ ವಿತರಣೆ: ಸೆಲೆಬ್ರೆಟಿಗಳಿಂದ ಪರಿಷ್ಕರಣೆ ಜಾಗೃತಿ ಮೂಡಿಸಿದ ಜಿಬಿಎ
SIR ಮೊದಲ ದಿನವೇ 60,000 ಗಣತಿ ನಮೂನೆ ವಿತರಣೆ: ಸೆಲೆಬ್ರೆಟಿಗಳಿಂದ ಪರಿಷ್ಕರಣೆ ಜಾಗೃತಿ ಮೂಡಿಸಿದ ಜಿಬಿಎ

ಮೊಬೈಲ್ ಜಪ್ತಿ, ತನಿಖೆ ತೀವ್ರಗೊಳಿಸಿದ ಖಾಕಿ

ದೌರ್ಜನ್ಯ ಎಸಗಿದ ವಿಡಿಯೋ ಕ್ಲಿಪ್‌ಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೂಡಲೇ ಬೆಂಗಳೂರು ಈಶಾನ್ಯ ವಿಭಾಗದ ಪೊಲೀಸರು ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಆರೋಪಿ, ಆರೋಪಿ ಪಿಎಸ್‌ಐ ಪ್ರವೀಣ್ ಬಳಸುತ್ತಿದ್ದ ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಆ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನಿಸಿದ್ದಾರೆ. ಶೀಘ್ರವೇ ಮೊಬೈಲ್‌ನಲ್ಲಿ ಡಿಲಿಟ್ ಆದ ವಿಡಿಯೋ, ಫೋಟೋಗಳು ಲಭ್ಯವಾಗಲಿವೆ. ಇದು ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಒದಗಿಸಲಿವೆ.

ಇನ್ನೂ ಪ್ರಾಥಮಿಕ ತನಿಖೆ ಪ್ರಕಾರ, ಪಿಎಸ್‌ಐ ಪ್ರವೀನ್ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ಈ ವೇಳೆ ಆತನ ಮೊಬೈಲ್‌ನಲ್ಲಿದ್ದ ಬಾಲಕನಿಗೆ ಸಂಬಂಧಿಸಿದ ವಿಡಿಯೋಗಳು ಸೋರಿಕೆ ಆಗಿ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ ಎಂದು ತಿಳಿದು ಬಂದಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ವಿಡಿಯೋ ಹರಿಬಿಟ್ಟವರನ್ನು ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆ ಇದೆ. ಇನ್ನೂ ಬಾಲಕರ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+