ಬಂಬಲ್ ಡೇಟಿಂಗ್ ಆಪ್‌ನಲ್ಲಿ ವ್ಯಕ್ತಿ ಪರಿಚಯ; 4 ವರ್ಷದ ಬಳಿಕ ಯುವತಿಯ ಖಾಸಗಿ ವಿಡಿಯೋ ವೈರಲ್

ಬೆಂಗಳೂರು: ಆನ್‌ಲೈನ್ ಡೇಟಿಂಗ್ ಆಪ್ ಮೂಲಕ ವ್ಯಕ್ತಿಯೊಬ್ಬನೊಂದಿಗೆ ಪರಿಚಯವಾಗಿ ಡೇಟಿಂಗ್ ಮುಗಿಸಿದ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಯುವತಿಯೊಬ್ಬಳಿಗೆ ಆಘಾತ ಎದುರಾಗಿದೆ. ತನ್ನದೇ ಖಾಸಗಿ ವಿಡಿಯೋಗಳನ್ನು ಮೊಬೈಲ್‌ನಲ್ಲಿ ನೋಡಿದ ಯುವತಿ ದಿಗ್ಬ್ರಮೆಗೊಂಡಿದ್ದಾಳೆ. ದಾರಿ ಕಾಣದೇ ಸೈಬರ್ ಪೊಲೀಸರ ಮೊರೆ ಹೋದ ಘಟನೆ ನಡೆದಿದೆ.

ಬೆಂಗಳೂರಿನ 28 ವರ್ಷದ ಯುವತಿ 2022ರಲ್ಲಿ ಆನ್‌ಲೈನ್ ಡೇಟಿಂಗ್ ಆಪ್ ಮೂಲಕ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡಿದ್ದಳು. ನಾಲ್ಕು ವರ್ಷಗಳ ಬಳಿಕ ಆತನೇ ಆಕೆಯ ಖಾಸಗಿ ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆಕೆಯ ವಿಡಿಯೋಗಳು ರೆಡ್ಡಿಟ್ ಹಾಗೂ ಅಡಾಲ್ಟ್ ಕಂಟೆಂಟ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ಆನ್‌ಲೈನ್‌ನಲ್ಲಿ ತನ್ನದೇ ಖಾಸಗಿ ವಿಡಿಯೋ ನೋಡಿ ಗಾಬರಿಯಾಗಿ ಪೊಲೀಸ್‌ ಠಾಣೆ ಮಟ್ಟಿಲೇರಿದ್ದಾಳೆ. ಅಂದು ಡೇಟ್ ಮಾಡಿದ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾಳೆ ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

Bengaluru Woman

ವ್ಯಕ್ತಿ ಭೇಟಿಗೆ ಅಪಾರ್ಟ್‌ಮೆಂಟ್‌ಗೆ ತೆರಳಿದ್ದ ಯುವತಿ, ಪಾರ್ಟಿ

ಯುವತಿ ಮತ್ತು ಆರೋಪಿತ ವ್ಯಕ್ತಿ 'ಬಂಬಲ್' (Bumble) ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದರು. ಬಳಿಕ ಇವರಿಬ್ಬರು ಪರಸ್ಪರ ಇನ್‌ಸ್ಟಾಗ್ರಾಮ್ ನಲ್ಲಿ ಚಾಟ್ ನಡೆಸಿದ್ದರು. ಅಲ್ಲಿ ಇವರಿಬ್ಬರ ಮೊಬೈಲ್ ಸಂಖ್ಯೆಗಳು ಬದಲಾಗಿದೆ. ಕೆಲವು ಫೇಕ್ ಐಡಿಯಿಂದ, ವಂಚನೆಗಾಗಿ ಮೆಸೆಜ್ ಮಾಡುವವರಿತ್ತಾರೆ ಎಂದು ತಿಳಿದ ಯುವತಿ ಆತನ ನಿಖರ ಗುರುತು ಪತ್ತೆಯಾದ ಬಳಿಕವೇ ಭೇಟಿ ಮಾಡಲು ಮುಂದಾಗಿದ್ದಾಳೆ. ಅದರಂತೆ ನಾಲ್ಕು ವರ್ಷಗಳ ಹಿಂದೆಯೇ ಆತನ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಳು. ಅಲ್ಲಿ ಇಬ್ಬರು ಡ್ರಿಂಕ್ಸ್ ಪಾರ್ಟಿ ಮಾಡಿದ್ದು, ನಂತರ ಇಬ್ಬರ ನಡುವೆ ದೈಹಿಕ ಸಂಪರ್ಕ ಸಹ ಏರ್ಪಟ್ಟಿತ್ತು. ಆದರೆ ಆರೋಪಿಯು ಯುವತಿಯೊಂದಿಗೆ ಕೆಲಸ ಮುಗಿದ ನಂತರ ಯುವತಿಯನ್ನು ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿದ್ದ.

Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ
Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ

ವಿಡಿಯೋ ನೋಡಿ ಯುವತಿಗೆ ಶಾಕ್; ತನಿಖೆ ಆರಂಭ

ವ್ಯಕ್ತಿ ಬ್ಲಾಕ್ ಮಾಡಿದ ಬಳಿಕ ಯುವತಿ ಸುಮ್ಮನಾಗಿದ್ದಳು. ಇದೀಗ ಘಟನೆ ನಡೆದು ಸುಮಾರು ನಾಲ್ಕು ವರ್ಷದ ನಂತರ 2026 ಜೂನ್‌ನಲ್ಲಿ ಇಂಟರ್‌ನೆಟ್‌ನಲ್ಲಿ ತನ್ನದೇ ಖಾಸಗಿ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾಳೆ. ತನ್ನ ಒಪ್ಪಿಗೆಯಿಲ್ಲದೆ ಡೇಟಿಂಗ್ ವೇಳೆ ರಹಸ್ಯವಾಗಿ ಚಿತ್ರೀಕರಿಸಿದ ವಿಡಿಯೋಗಳು ಇವಾಗಿವೆ ಎಂದು ಅರಿತ ಯುವತಿ ಕಳೆದ ಜೂನ್ 19 ರಂದು ಬೆಂಗಳೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸದ್ಯ ಇಂಟರ್ನೆಟ್‌ನಲ್ಲಿದ್ದ ಯುವತಿಯ ವಿಡಿಯೋಗಳನ್ನು ಯಶಸ್ವಿಯಾಗಿ ತೆಗೆಸಿದ್ದಾರೆ. ಈ ವಿಡಿಯೋಗಳನ್ನು ಹೇಗೆ ಚಿತ್ರೀಕರಿಸಲಾಗಿದೆ ಮತ್ತು ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ.

ಇವೆಲ್ಲವು ಗಂಭೀರ ಸೈಬರ್ ಅಪರಾಧ

ಸೈಬರ್ ಪೊಲೀಸರು ಹೇಳುವಂತೆ, ಯಾವುದೇ ಒಬ್ಬ ವ್ಯಕ್ತಿಯ ಇತರರ ಒಪ್ಪಿಗೆಯಿಲ್ಲದೆ ಖಾಸಗಿ ಚಿತ್ರ ಅಥವಾ ವಿಡಿಯೋ ಸೆರೆ ಹಿಡಿಯುವುದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅಪರಾಧವಾಗಿದೆ. ಫೋಟೊ-ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುವುದು ಸಹಿತ "ನಾನ್-ಕನ್ಸೆನ್ಶುಯಲ್ ಇಂಟಿಮೇಟ್ ಇಮೇಜರಿ" (NCII) ಅಥವಾ ರಿವೆಂಜ್ ಪೋರ್ನ್ ಎನ್ನುವ ಗಂಭೀರ ಸೈಬರ್ ಅಪರಾಧವಾಗಿದೆ. ತಂತ್ರಜ್ಞಾನ ಯುಗ, ಹೆಚ್ಚಿದ ಇಂಟರ್‌ನೆಟ್ ಬಳಕೆ ಯುವದಲ್ಲಿ ಇಂತಹ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+