Gold: ಚಿನ್ನದ ಬೆಲೆ ಇಳಿದರೂ ಭಾರತೀಯರು ಯಾಕೆ ಬಂಗಾರ ಮಾರಲು ಮುಂದಾಗುತ್ತಿದ್ದಾರೆ ? ಇಲ್ಲಿದೆ ಅಚ್ಚರಿಯ ಕಾರಣ
Gold: ಕರ್ನಾಟಕ ಹಾಗೂ ಭಾರತ ಸೇರಿದಂತೆ ವಿಶ್ವದಾದ್ಯಂತ ಚಿನ್ನದ ಬೆಲೆಯು ಈಗಾಗಲೇ ಭಾರೀ ಹೆಚ್ಚಳವಾಗಿದೆ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಬಹುದು ಎನ್ನುವ ಆತಂಕವು ಭಾರತೀಯರಲ್ಲಿ ಹೆಚ್ಚಳವಾಗಿದೆ. ಆದರೆ ಹಲವು ಭಾರತೀಯ ಕುಟುಂಬಗಳು ತಮ್ಮ ಬಳಿ ಇರುವ ಚಿನ್ನವನ್ನು ಉಳಿಸಿಕೊಳ್ಳುವ ಬದಲು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಭಾರತವು ಚಿನ್ನದ ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಕಂಡುಬಂದಿದೆ.
2025-26ನೇ ಹಣಕಾಸು ವರ್ಷದಲ್ಲಿ ಭಾರತವು ಸುಮಾರು 72.4 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. 2025ರಲ್ಲಿ ಮರುಬಳಕೆಯ ಚಿನ್ನದ ಪ್ರಮಾಣ 125-150 ಟನ್‌ಗಳಷ್ಟಿದ್ದು, ಇದೇ ಪ್ರವೃತ್ತಿ ಮುಂದುವರಿದರೆ 2026ರಲ್ಲಿ ಅದು 200-250 ಟನ್‌ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಇದರ ನಡುವೆ ಭಾರತೀಯರು ಭಾರೀ ದೊಡ್ಡ ಮಟ್ಟದಲ್ಲಿ ಬಂಗಾರವನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಇದು ಅಚ್ಚರಿಯ ಬೆಳವಣಿಗೆಯಾಗಿದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಅಂಕಿ ಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗೆ ಸುಮಾರು 50 ಟನ್ ಹಳೆಯ ಚಿನ್ನ ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.43ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ₹1.40 ಲಕ್ಷಕ್ಕೆ ಇಳಿದಿದ್ದು, ಅದು ₹1.20 ಲಕ್ಷದವರೆಗೆ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅನೇಕ ಗ್ರಾಹಕರು ಹಳೆಯ ಆಭರಣಗಳನ್ನು ಹೊಸ ಆಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಬದಲು, ತಮ್ಮ ಚಿನ್ನವನ್ನು ಮಾರಾಟ ಮಾಡಿ ಲಾಭ ಪಡೆಯಲು ಮುಂದಾಗಿದ್ದಾರೆ.
ಚಿನ್ನದ ವ್ಯವಹಾರದಲ್ಲಿ ತೀವ್ರ ಏರಿಕೆ
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನದ ವ್ಯವಹಾರದಲ್ಲೂ ಭಾರೀ ಏರಿಕೆ ಕಂಡು ಬಂದಿದೆ. ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಜನ ಚಿನ್ನದ ಮಾರಾಟವನ್ನು ಮಾಡುತ್ತಾರೆ. ಚಿನ್ನದ ಬೆಲೆ ಇಳಿಕೆಯಾದಾಗ ಚಿನ್ನವನ್ನು ಖರೀದಿ ಮಾಡುತ್ತಾರೆ. ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾದರೆ ಭವಿಷ್ಯದಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎನ್ನುವ ಕಾರಣಕ್ಕೆ ಚಿನ್ನವನ್ನು ಮಾರಾಟ ಮಾಡದೆ ಉಳಿಸಿಕೊಳ್ಳುವುದು ಇದೆ. ಆದರೆ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ.
ಬೆಲೆ ಏರಿಕೆಯು ಭಾರತದ ಸಂಘಟಿತ ಚಿನ್ನದ ಮರುಬಳಕೆ ಉದ್ಯಮಕ್ಕೂ ವೇಗವನ್ನು ನೀಡಿದೆ. ಹೆಚ್ಚಿರುವ ಚಿನ್ನದ ಬೆಲೆಯು ಭಾರತೀಯ ಮನೆಗಳಲ್ಲಿ ಬಳಸದೆ ಉಳಿಸಿಕೊಂಡಿರುವ ಚಿನ್ನವನ್ನು ಮಾರುಕಟ್ಟೆಗೆ ತರಲು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಗ್ರಾಹಕರು ಚಿನ್ನವನ್ನು ಆರ್ಥಿಕ ಆಸ್ತಿಯಾಗಿ ಹೆಚ್ಚಾಗಿ ನೋಡುತ್ತಿದ್ದಾರೆ ಎಂದು ಉದ್ಯಮದ ಕಾರ್ಯನಿರ್ವಾಹಕರು ಹೇಳಿದ್ದಾರೆ. ಬೆಲೆಗಳು ಅನುಕೂಲಕರವಾದಾಗ ಅದನ್ನು ನಗದು ರೂಪದಲ್ಲಿ ಪರಿವರ್ತಿಸಬಹುದು.
ಹಳೆಯ ಚಿನ್ನವನ್ನು ಖರೀದಿಸುವಲ್ಲಿ ತೊಡಗಿರುವ ಸಂಸ್ಥೆಗಳು ವ್ಯವಹಾರದಲ್ಲಿ ತೀವ್ರ ಏರಿಕೆಯನ್ನು ಕಾಣುತ್ತಿವೆ. ದೇಶಾದ್ಯಂತ 100 ಕ್ಕೂ ಹೆಚ್ಚು ಚಿನ್ನದ ಫ್ರಾಂಚೈಸಿಗಳನ್ನು ಹೋಂದಿರುವ ಮುತ್ತೂಟ್ ಚಿನ್ನದ ಸಂಗ್ರಹದಲ್ಲಿ ಶೇಕಡಾ 40 ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ಎಕ್ಸಿಮ್ ವರದಿ ಮಾಡಿದೆ. "ಬಳಕೆಯಲ್ಲಿ ಇಲ್ಲದ" ಚಿನ್ನವನ್ನು ಚಲಾವಣೆಗೆ ತರಲಾಗುತ್ತಿರುವುದರಿಂದ, ಸಂಸ್ಕರಣಾಕಾರರು ಮತ್ತು ಆಭರಣ ವ್ಯಾಪಾರಿಗಳಿಗೆ ಹೆಚ್ಚುವರಿ ದೇಶೀಯ ಪೂರೈಕೆಯ ಮೂಲವನ್ನು ಸೃಷ್ಟಿಸುವುದರಿಂದ ಈ ಏರಿಕೆಯು ದೇಶದ ಚಿನ್ನದ ಮರುಬಳಕೆ ಉದ್ಯಮಕ್ಕೆ ಉತ್ತೇಜನ ನೀಡಿದೆ ಎಂದು ಉದ್ಯಮ ವರದಿಗಳು ಹೇಳಿವೆ.
ಚಿನ್ನದ ಬೆಲೆಯಲ್ಲಿ ವ್ಯತ್ಯಾಸಗಳು ಆಗುತ್ತಿರುವುದು ಏಕೆ
ಇತ್ತೀಚೆಗೆ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರದ ಬಗ್ಗೆ ಹೂಡಿಕೆದಾರರು ತಮ್ಮ ನಿರೀಕ್ಷೆಗಳನ್ನು ಮರುಪರಿಶೀಲಿಸಿರುವುದು, ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಕಚ್ಚಾ ತೈಲದ ಬೆಲೆ ಏರಿಳಿತಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಮೆಕ್ಸ್ ಚಿನ್ನದ ಭವಿಷ್ಯದ ಬೆಲೆ ಪ್ರತಿ ಔನ್ಸ್‌ಗೆ 4,044.80 ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ, ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಮುಂದುವರಿಸುವುದಾಗಿ ಇರಾನ್ ಪುನರುಚ್ಚರಿಸಿರುವುದರಿಂದ ಮಾರುಕಟ್ಟೆಯಲ್ಲಿ ಆತಂಕವೂ ಮುಂದುವರಿದಿದೆ.
ಭಾರತವು ಚಿನ್ನದ ಆಮದು ಮೇಲೆ ಹೆಚ್ಚು ಅವಲಂಬಿತವಾಗಿದೆ. 2025-26ನೇ ಹಣಕಾಸು ವರ್ಷದಲ್ಲಿ ಸುಮಾರು 72.4 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. 2025ರಲ್ಲಿ ಮರುಬಳಕೆಯ ಚಿನ್ನದ ಪ್ರಮಾಣ 125-150 ಟನ್‌ಗಳಷ್ಟಿತ್ತು. ಇದೇ ರೀತಿಯ ಮರುಮಾರಾಟದ ಪ್ರವೃತ್ತಿ ಮುಂದುವರಿದರೆ, 2026ರಲ್ಲಿ ಮರುಬಳಕೆಯ ಚಿನ್ನದ ಪ್ರಮಾಣ 200-250 ಟನ್‌ಗೆ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.












Click it and Unblock the Notifications