Viral Video: ಮಾಲೀಕನ ಜೀವ ಉಳಿಸಲು ವಿಷಕಾರಿ ಹಾವಿನೊಂದಿಗೆ ಹೋರಾಡಿ ಪ್ರಾಣಬಿಟ್ಟ ಜಿಮ್ಮಿ! ಕಣ್ಣೀರಾಗಿಸಿದ ಘಟನೆ
Viral Video: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿಗಳು. ಒಂದೊತ್ತು ಊಟ ಹಾಕಿದರೆ ಕೊನೆಯುಸಿರಿನ ತನಕ ನಾಯಿಗಳು ನಿಯತ್ತು ತೋರಿಸುತ್ತವೆ. ಇನ್ನೂ ಮನೆಯ ಸದಸ್ಯನಂತೆ ಸಾಕಿ ಸಲುಹಿದರೆ ಅದರ ನಿಯತ್ತು ಎಷ್ಟಿರಬೇಡ!. ತನ್ನ ಪ್ರಾಣ ಹೋದರೂ ಮಾಲೀಕನ ಜೀವ ಕಾಪಾಡುತ್ತವೆ. ಇಂತದ್ದೇ ಘಟನೆ ಹರಿಯಾಣದ ಕರ್ನಾಲ್ ಜಿಲ್ಲೆಯ ನಿಸಿಂಗ್ ಪ್ರದೇಶದಲ್ಲಿ ನಡೆದಿದೆ. ಕಾಳಿಗ ಸರ್ಪದೊಂದಿಗೆ ಹೋರಾಡಿ ಮನೆ ಮಾಲೀಕನ ಪ್ರಾಣ ಉಳಿಸಿದ ನಾಯಿ ಅಸುನೀಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.
ಸಾಕು ನಾಯಿಯೊಂದು ತನ್ನ ಮಾಲೀಕನ ಪ್ರಾಣ ಉಳಿಸಲು ಭೀಕರ ಹಾಗೂ ಅತಿ ವಿಷಕಾರಿ ಕಾಳಿಂಗ ಸರ್ಪದೊಂದಿಗೆ (ಬ್ಲ್ಯಾಕ್ ಕೋಬ್ರಾ) ವೀರಾವೇಶದಿಂದ ಹೋರಾಡಿದೆ. ಹಾವಿನ ಜೊತೆಗಿನ ಹೋರಾಟದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಹೃದಯವಿದ್ರಾವಕ ಘಟನೆ ಇದಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಕಣ್ಣೀರಾಗಿದ್ದಾರೆ. ಯಜಮಾನನ್ನು ರಕ್ಷಿಸಲು ಹೋಗಿ ಜೀವ ಬಿಟ್ಟ ಸಾಕು ನಾಯಿ ಹೆಸರು 'ಜಿಮ್ಮಿ'.

ಭಾನುವಾರ ವಾಕಿಂಗ್ ಹೊರಟಾಗ ಎದುರಾಯ್ತು ಸರ್ಪ
ಕಳೆದ ಭಾನುವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಮನೆಯ ಮಾಲೀಕ ಸುಮಿತ್ ಠಾಕೂರ್ ತಮ್ಮ ಎರಡು ಸಾಕು ನಾಯಿಗಳಾದ 'ಜಿಮ್ಮಿ' ಮತ್ತು 'ಮ್ಯಾಕ್ಸ್' ನನ್ನು ವಾಕಿಂಗ್ ಕರೆದುಕೊಂಡು ಹೋಗಲು ಸಜ್ಜಾಗುತ್ತಿದ್ದರು. ಮನೆಯ ಮುಂದೆ ಕಾಲಿಡುತ್ತಿದ್ದಂತೆ ಅವರ ಮೇಲೆ ಬೃಹತ್ ಕಾಳಿ ಸರ್ಪವೊಂದು ರೋಷಾವೇಶದಿಂದ ಬುಸುಗುಡುತ್ತಾ ಏಕಾಏಕಿ ದಾಳಿಗೆ ಯತ್ನಿಸಿದೆ.
Viral: 35,000 ರೂ,ನ ಮೊಬೈಲ್ ಆರ್ಡರ್ ಮಾಡಿದ ಗ್ರಾಹಕನಿಗೆ ನಿರಾಶೆ! ದಂಗಾದ ಡೆಲಿವರಿ ಬಾಯ್
ಇದೇ ವೇಳೆ ಜೊತೆಗಿದ್ದ 'ಜಿಮ್ಮಿ' ಸರ್ಪದೊಂದಿಗೆ ಹೋರಾಡಿದ ಅದ್ಭುತ ಸಾಹಸದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದರೆ ಪ್ರಾಣಿಪ್ರಿಯರ ಮಾತ್ರವಲ್ಲದೇ ಎಂಥವರ ಕಣ್ಣಾಲೆಗಳು ತುಂಬಿ ಬರುವಂತಿದೆ.
ಹೋರಾಡಿ ಪ್ರಾಣ ಬಿಟ್ಟ 'ಜಿಮ್ಮಿ'
ಸುಮಿತ್ ಅವರ ಮುಂದೆ ವಿಷಕಾರಿ ಕಾಳಿಂಗ ಸರ್ಪ ಬರುತ್ತಿದ್ದಂತೆ 'ಜಿಮ್ಮಿ' ಮತ್ತು 'ಮ್ಯಾಕ್ಸ್' ತಕ್ಷಣವೇ ಸರಪಳಿಯಿಂದ ಬಿಡಿಸಿಕೊಂಡು ಹಾವಿನ ಮೇಲೆ ಎರಗಿವೆ. ದಾಳಿಗೆ ಸಜ್ಜಾಗಿದ್ದ ಹಾವಿನ ಮೇಲೆ ಜಿಮ್ಮಿ ಪ್ರತಿದಾಳಿ ನಡೆಸಿದೆ. ಮಾಲೀಕನಿಗೆ ಎದುರಾಗಿದ್ದ ಅಪಾಯ ಅರಿತು ಹಾವಿನೊಂದಿಗೆ ಸೆಣಸಾಡಿದೆ. ಈ ವೇಳೆ ಹಾವು ಜಿಮ್ಮಿಯ ಮುಖ ಮತ್ತು ಕಾಲಿನ ಭಾಗಕ್ಕೆ ತೀವ್ರವಾಗಿ ಕಚ್ಚಿದೆ. ಆದರೂ ಹಿಂದೆ ಸರಿಯದೇ ಹೋರಾಡಿದೆ.
ಈ ವೇಳೆ ಕೋಬ್ರಾ ವಿಷ ಬಿಟ್ಟ ಪರಿಣಾಮ ಜಿಮ್ಮಿಯ ದೇಹವನ್ನೆಲ್ಲ ವಿಷ ಆವರಿಸಿದೆ. ಕೇವಲ 8 ನಿಮಿಷಗಳಲ್ಲಿ ನಾಯಿಯ ದೇಹದಾದ್ಯಂತ ವಿಷ ಹರಡಿದೆ. ಕೂಡಲೇ ಜಿಮ್ಮಿಯ ಆರೋಗ್ಯ ಪರಿಸ್ಥಿತಿ ಕ್ಷೀಣಿಸಲು ಆರಂಭಿದೆ. ಇದೆಲ್ಲ ನೋಡಿದ ಜಿಮ್ಮಿ ಮಾಲೀಕ ಸುಮಿತ್ ಅವರು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆ ಯಜಮಾನನ ಮುಂದೆಯೇ ಜಿಮ್ಮಿ ಪ್ರಾಣ ಬಿಟ್ಟಿದೆ.
A nine-year-old pet dog named Jimmy sacrificed his life while protecting his family from a black cobra in Haryana's Karnal district.
— The Sentinel (@Sentinel_Assam) July 1, 2026
CCTV footage showed the loyal dog repeatedly attacking the venomous snake after it appeared near his owner's home.#TheSentinel #Dog #Haryana pic.twitter.com/SNORDXNGfP
ಜಿಮ್ಮಿ ಕಳೆದುಕೊಂಡ ಮನೆಯವರು ಕಣ್ಣೀರು
ಇದೆಲ್ಲ ಘಟನೆಯ ಬಳಿಕ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಉರಗ ರಕ್ಷಕರನ್ನು ಕರೆಯಿಸಿದ್ದಾರೆ. ಜಿಮ್ಮಿ ಪ್ರಾಣ ತೆಗೆದು ಮನೆಯ ಗೋಡೆಯ ಮರೆಯಲ್ಲಿ ಅಡಗಿದ್ದ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ಒಂಬತ್ತು ವರ್ಷಗಳ ಕಾಲ ಮನೆಯಲ್ಲೇ ಮಗನಂತಿದ್ದ ಜಿಮ್ಮಿಯ ಸಾವು ಕುಟುಂಬವನ್ನು ಅತೀವವಾಗಿ ಕಾಡಿದೆ. ಮನೆ ಮಾಲೀಕನ ಜೀವ ಉಳಿಸಿ ಪ್ರಾಣ ಬಿಟ್ಟ ಜಿಮ್ಮಿಗಾಗಿ ಇಡೀ ಕುಟುಂಬಸ್ಥರು ಕಣ್ಣೀರಿಟ್ಟಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications