Viral: 35,000 ರೂ,ನ ಮೊಬೈಲ್ ಆರ್ಡರ್ ಮಾಡಿದ ಗ್ರಾಹಕನಿಗೆ ನಿರಾಶೆ! ದಂಗಾದ ಡೆಲಿವರಿ ಬಾಯ್

Viral News: ಇತ್ತೀಚಿನ ದಿನಗಳಲ್ಲಿ ಏನೇ ಬೇಕಾದರೂ ನಾವು ಶಾಪ್‌ಗಳಿಗೆ ಹೋಗದೇ ಆನ್‌ಲೈನ್ ನಲ್ಲಿ ಆರ್ಡರ್ ಮಾಡುತ್ತೇವೆ. ಅಗತ್ಯ ವಸ್ತು, ಆಹಾರ, ತರಕಾರಿ, ಮೊಬೈಲ್, ಬಟ್ಟೆ-ಬರೆ ಹೀಗೆ ಎಲ್ಲವು ಮನೆ ಬಾಗಿಲಿಗೇ ಬಂದು ಬಿಡುತ್ತವೆ. ಆದರೆ ಆನ್‌ಲೈನ್ ಆರ್ಡರ್‍‌ನಲ್ಲಿ ಅದೆಷ್ಟು ಪಾರದರ್ಶಕತೆ ಇರುತ್ತದೆ? ಮೇಲ್ವಿಚಾರಣೆ ಮಾಡುವವರು ಯಾರು? ಹೆಚ್ಚು ಕಡಿಮೆ ಆದರೆ ನಮ್ಮ ಹಣಕ್ಕೆ ಹೊಣೆ ಯಾರು ಎಂದು ಯೋಚಿಸದೇ ಆರ್ಡರ್ ಮಾಡಿಬಿಡುತ್ತೇವೆ. ಇದೇ ರೀತಿ ಹೊಸ ಮೊಬೈಲ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬರಿಗೆ ಮೊಬೈಲ್ಲೇ ಬಂದಿಲ್ಲ. ಅನ್‌ಬಾಕ್ಸ್ ಮಾಡಿದ ಡೆಲಿವರಿ ಬಾಯೇ ಒಂದು ಕ್ಷಣ ದಂಗಾದ ಘಟನೆ ನಡೆದಿದ್ದು, ಇಂಟರ್‍‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ತಂತ್ರಜ್ಞಾನ ಬೆಳೆದಂತೆಲ್ಲ ಎಲ್ಲವು ಆನ್‌ಲೈನ್ ಆಗಿದೆ. ಬೇಕಾದ ವಸ್ತುಗಳನ್ನು ಕೂತಲ್ಲೇ ತರಿಸಿಕೊಳ್ಳಬಹುದು. ಲಕ್ಷಾಂತರ ಜನ ಈ ಡಿಜಿಟಲ್, ಇ-ಕಾಮರ್ಸ್‌ ವೇದಿಕೆಗಳಿಂದ ಸೇವೆ ಪಡೆಯುತ್ತಾರೆ. ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 35,000 ರೂಪಾಯಿ ಮೌಲ್ಯದ ವಿವೋ ಕಂಪನಿಯ ಮೊಬೈಲ್ ಅನ್ನು ಆನ್‌ಲೈನ್ ಆರ್ಡರ್ ಮಾಡಿದ್ದರು. ಆದರೆ ಮೊಬೈಲ್ ಡೆಲಿವರಿ ಆಗದೇ ಆತನಿಗೆ ಬಟ್ಟೆಗೆ ಹಚ್ಚುವ ಸೋಪುಗಳ ಬಾರ್‍‌ಗಳನ್ನು ಕಳುಹಿಸಲಾಗಿದೆ.

Customer

ಇಂತಹ ಘಟನೆಗಳು ಇತ್ತೀಚೆಗೆ ಕಡಿಮೆ ಆಗಿವೆ ಎನ್ನುವಷ್ಟರಲ್ಲಿ ಅಂಥದ್ದೇ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ಬದಲಾಗಿ ಸೋಪುಗಳ ಬಾಕ್ಸ್ ಇರುವ ಫೋಟೋ ಸಖತ್ ವೈರಲ್ ಆಗುತ್ತಿದೆ.

ಗ್ರಾಹಕನಿಗೆ ಭಾರೀ ನಿರಾಶೆ

ಕಷ್ಟಪಟ್ಟು ದುಡಿದ ಹಣದಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ ವ್ಯಕ್ತಿ ಹೊಸ ಮೊಬೈಲ್ ಬಳಕೆಗೆ ತುಂಬಾ ಉತ್ಸುಕನಾಗಿದ್ದ. ತನ್ನ ಆರ್ಡರ್ ಡೆಲಿವರಿ ಆಗುವುದನ್ನೇ ಕಾಯುತ್ತಿದ್ದ. ಅಂತು ಡೆಲಿವರಿ ದಿನ ಬಂದಿತ್ತು. ಮನೆ ಬಾಗಿಲಿಗೆ ಬಂದ ಇ-ಕಾಮರ್ಸ್ ವೇದಿಕೆಯ ಡೆಲಿವರಿ ಬಾಯ್ ಗ್ರಾಹಕನ ಮುಂದೆ ಮೊಬೈಲ್ ಅನ್ನು ಅನ್‌ಬಾಕ್ಸ್ ಮಾಡಿದ್ದಾನೆ. ಬಾಕ್ಸ್‌ನಲ್ಲಿ ಮೊಬೈಲ್ ಇರದೇ ಮೂರು ಬಟ್ಟೆ ಸೋಪ್‌ಗಳನ್ನು ಕಂಡು ಹೌಹಾರಿದ್ದಾನೆ. ಇತ್ತ ಗ್ರಾಹಕನಿಗೆ ಬಾಯಿಂದ ಮಾತೇ ಬಂದಿಲ್ಲ, ಆತನಿಗೆ ಭಾರೀ ನಿರಾಶೆ ಆಗಿದೆ.

Video: ಬೆಂಗಳೂರು ಆಟೋ ಡ್ರೈವರ್
Video: ಬೆಂಗಳೂರು ಆಟೋ ಡ್ರೈವರ್ "ಅಂಕಲ್' AI ಜ್ಞಾನಕ್ಕೆ ನೆಟ್ಟಿಗರು ಫಿದಾ: ಕನ್ನಡದಲ್ಲೇ ಪ್ರತಿಕ್ರಿಯಿಸಿದ OpenAI

ಸ್ಮಾರ್ಟ್ ಫೋನ್‌ ಬದಲಾಗಿ ಸೋಪ್ ಕಳುಹಿಸಿರುವುದು ಗ್ರಾಹಕನಿಗೆ ಭಾರೀ ನಿರಾಶೆ ಮೂಡಿಸಿದೆ. ಅವರ ಉತ್ಸಾಹಕ್ಕೆ ತಣ್ಣೀರೆರಚಿದಂಗಾಗಿದೆ. ಆಘಾತಗೊಂಡ ಗ್ರಾಹಕನಿಗೆ ಕ್ಷಣದಲ್ಲಿ ಕೋಪ ನೆತ್ತಿಗೇರಿದೆ. ಸದ್ಯ ಈ ಸುದ್ದಿ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮುಂದಿನ ಪ್ರಕ್ರಿಯೆ ಏನೆಂದು ಕಾತರದಿಂದ ಕಾಯುತ್ತಿದ್ದಾರೆ.

ಆನ್‌ಲೈನ್ ವಂಚನೆ: ಜನ ಕೇಳುತ್ತಿರುವ ಪ್ರಶ್ನೆಗಳಿವು?

ಈ ಘಟನೆಯು ಆನ್‌ಲೈನ್ ಶಾಪಿಂಗ್ ಹೇಗೆ ಅಪಾಯಕಾರಿ ಎಂಬುದನ್ನು ಸೂಚಿಸುತ್ತದೆ. ಆರ್ಡರ್ ಬಳಿಕ ಪ್ಯಾಕೇಜಿಂಗ್ ಅನ್ನು ಪರಿಶೀಲಿಸಲು ಜವಾಬ್ದಾರಿ ಯಾರದ್ದು? ವಿತರಣೆಯ ಸಮಯದಲ್ಲಿ ಸರಿಯಾದ ಪರಿಶೀಲನೆ ಯಾಕಾಗಿಲ್ಲ? ಎಂದು ಅನೇಕ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ. ಕಂಪನಿಯು ಮೊಬೈಲ್ ಕಳುಹಿಸಿಲ್ಲವಾ? ಅಥವಾ ಬಂದ ಮೊಬೈಲ್ ತೆಗೆದು ಸೋಪ್‌ಗಳನ್ನು ಇ-ಕಾಮರ್ಸ್ ಕಂಪನಿ ಇಟ್ಟು ಕಳುಹಿಸಿತಾ? ಹೀಗೆ ಅನೇಕ ಪ್ರಶ್ನೆಗಳು ಎದ್ದಿವೆ.

ಮುಂದೆ ಕಂಪನಿಯು ಯಾವ ಕ್ರಮ ತೆಗೆದುಕೊಳ್ಳುತ್ತದೆ. ಹಣ ಪಡೆದ ಕಂಪನಿಯು ಗ್ರಾಹಕರಿಗೆ ಆರ್ಡರ್ ಮಾಡಿದ ಫೋನ್ ನೀಡುತ್ತದಯೇ?. ಅಥವಾ ಗ್ರಾಹಕನಿಗೆ ಹಣವನ್ನು ಮರುಪಾವತಿ ಮಾಡುತ್ತಾರೆಯೇ? ಹಣ ಕಳೆದುಕೊಂಡು ವಂಚನೆಗೆ ಒಳಗಾದವರಿಗೆ ನ್ಯಾಯ ಸಿಗುತ್ತದೆಯೇ? ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.

ಒಂದು ಸಣ್ಣ ತಪ್ಪು ಕೆಲವರ ಕನಸುಗಳನ್ನು ಕ್ಷಣಾರ್ಧದಲ್ಲಿ ಮುರಿಯಬಹುದು. ಆದ್ದರಿಂದ ಆನ್‌ಲೈನ್ ಆರ್ಡರ್ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಇ-ಕಾಮರ್ಸ್ ವೇದಿಕೆಗಳು, ಆನ್‌ಲೈನ್ ಮೊಬೈಲ್ ಪೂರೈಕೆದಾರರು ಎಚ್ಚರ ವಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+