Baba Vanga: ಬಾಬಾ ವಂಗಾ ಭವಿಷ್ಯ: 2023 ಟ್ರೈಲರ್ ಮಾತ್ರ! 2024 ರಲ್ಲಿ ಕಾದಿದೆ ಹಲವು ಅಪಾಯ
ತಮ್ಮ ಭವಿಷ್ಯದಿಂದಲೇ ಹೆಸರುವಾಸಿಯಾಗಿರುವ ಬಲ್ಗೇರಿಯಾದ ದಿವಂಗತ 'ಪ್ರವಾದಿ' ಬಾಬಾ ವಂಗಾ 2024ರ ವರ್ಷ ಹೇಗಿರಲಿದೆ ಎನ್ನುವ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. 2022ರ ಬಗ್ಗೆ ಅವರು ಹೇಳಿದ್ದ 2 ಭವಿಷ್ಯವಾಣಿಗಳು ನಿಜವಾಗಿದ್ದವು.
2023ರ ಕುರಿತಂತೆ ಕೂಡ ಅವರು ನುಡಿದಿರುವ ಹಲವು ಭವಿಷ್ಯಗಳು ನಿಜವಾಗಿವೆ. ಅದ್ದರಿಂದ 2024ರ ಬಗ್ಗೆ ಅವರು ಹೇಳಿರುವ ಭವಿಷ್ಯವಾಣಿಗಳು ನಿಜಕ್ಕೂ ಆತಂಕ ಹುಟ್ಟಿಸುವಂತಿವೆ.

2023 ರ ಬಗ್ಗೆ ಬಾಬಾ ವಂಗಾ ಹೇಳಿದ್ದೇನು?
2023ರ ವರ್ಷದ ಕುರಿತಂತೆ ಬಾಬಾ ವಂಗಾ ಭಯಾನಕ ಭವಿಷ್ಯ ಹೇಳಿದ್ದರು. 2023ರ ವರ್ಷದಲ್ಲಿ ವಿಜ್ಞಾನಿಗಳು ಹಲವು ವಿಷಯಗಳನ್ನು ಕಂಡುಹಿಡಿಯುತ್ತಾರೆ ಎಂದು ಹೇಳಿದ್ದರು. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿ ಬೀಸಲಿದೆ ಎಂದು ಹೇಳಿದ್ದರು. ಅಲ್ಲದೆ ಇದೇ ವರ್ಷ ಮೂರನೇ ಮಹಾಯುದ್ಧ ಸಂಭವಿಸುತ್ತದೆ ಎಂದು ಭವಿಷ್ಯ ನುಡಿಯುವ ಮೂಲಕ ಆತಂಕ ಮೂಡಿಸಿದ್ದರು.
ಭೂಮಿಯ ಕಕ್ಷೆ ಬದಲಾಗಲಿದೆ. ಹಲವು ದೇಶಗಳು ಜೈವಿಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡುತ್ತವೆ ಎಂದು ಹೇಳಿದ್ದಾರೆ. 2023ರ ವರ್ಷವನ್ನು ವಿನಾಶ, ಕತ್ತಲೆಯ ವರ್ಷ ಎಂದು ಅವರು ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ.
ನಿಜವಾದ ಭವಿಷ್ಯವಾಣಿ
ಭಾರತದ ಬಗ್ಗೆ ಅವರು ಹೇಳಿರುವ ಭವಿಷ್ಯವಾಣಿ ನಿಜವಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬಿಸಿಲು ತೀವ್ರವಾಗಿದ್ದು ಹಲವು ಜನ ಸಾವನ್ನಪ್ಪಿದ್ದರು. ನಂತರ ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾದ ಕಾರಣ ನೂರಾರು ಜನ ಸಾವನ್ನಪ್ಪಿದ್ದರು. ಮನೆಗಳು, ಕಟ್ಟಡಗಳು ಕುಸಿದು ಸಾವಿರಾರು ಕೋಟಿ ರೂಪಾಯಿ ನಷ್ಟ ಕೂಡ ಸಂಭವಿಸಿದೆ.
ಸೌರ ಚಂಡಮಾರುತ ಕುರಿತಂತೆ ಅವರು ಹೇಳಿದ್ದ ಭವಿಷ್ಯ ಕೂಡ ನಿಜವಾಗಿದೆ. ಭೂಮಿಗಿಂತ 20 ಪಟ್ಟು ದೊಡ್ಡದಾದ ರಂಧ್ರವನ್ನು ಕಂಡುಹಿಡಿದಿದ್ದಾರೆ.
2024ರಲ್ಲಿ ಮತ್ತಷ್ಟು ಭೀಕರ
2023ರಲ್ಲಿ ಹಲವು ದುರಂತಗಳು ನಡೆಯುತ್ತವೆ ಎಂದು ಹೇಳಿದ ಬಳಿಕ, 2024ರ ಬಗ್ಗೆ ವಂಗಾ ನುಡಿದಿರುವ ಭವಿಷ್ಯ ಬಹಿರಂಗವಾಗಿದೆ. ಅವರ ಭವಿಷ್ಯವಾಣಿಯ ಪ್ರಕಾರ 2024ರಲ್ಲಿ ನೆರೆಯ ರಾಷ್ಟ್ರ ಚೀನಾ ವಿಶ್ವದ ಸೂಪರ್ ಪವರ್ ಆಗಲಿದೆ. ಜಗತ್ತಿಗೆ ಡ್ರಾಗನ್ ರಾಷ್ಟ್ರ ತನ್ನ ಶಕ್ತಿಯನ್ನು ತೋರಿಸಲಿದೆ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಮತ್ತು ಹಲವು ಭಾಗಗಳಲ್ಲಿ ಭೂಕಂಪ ಸಂಭವಿಸಲಿದ್ದ ಭೂಮಿಯ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಜಾಗತಿಕ ತಾಪಮಾನ ಭೂಮಿಯ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಂ ಬೀಡಲಿದೆ. ತಂಪಾದ ಸ್ಥಳಗಳು ಬಿಸಿಯಾಗಲಿವೆ, ಬಿಸಿ ಸ್ಥಳಗಳು ತಂಪಾಗಲಿವೆ ಎಂದು ಹೇಳಿದ್ದಾರೆ. ಎಂದರೆ, ಜಾಗತಿಕ ತಾಪಮಾನದಿಂದ ಹಿಮನದಿಗಳು ಕರಗಲಿದ್ದು, ಕರವಾಳಿ ಪ್ರದೇಶಗಳು ಮುಳುಗುವ ಅಪಾಯ ಇದೆ ಎಂದು ಹೇಳಲಾಗಿದೆ. 2024ರಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಲಿದ್ದು, ವಿಶ್ವದಾದ್ಯಂತ ಅಪರಾಧ ಪ್ರಕರಣಗಳು ಕೂಡ ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.











Click it and Unblock the Notifications