ಶುಕ್ರ-ಕೇತು ಸಂಯೋಗದಿಂದ ಕಾಳಸರ್ಪ ಯೋಗ ಅಂತ್ಯ : ಈ ರಾಶಿಯವರಿಗೆ ಇನ್ನು ಕೈ ಹಿಡಿಯಲಿದೆ ಅದೃಷ್ಟ

ವೈದಿಕ ಜ್ಯೋತಿಷ್ಯದ ಪ್ರಕಾರ ಇಂದು ಅಂದರೆ ಜುಲೈ 11 ಅತ್ಯಂತ ಶಕ್ತಿಯುತ ಗ್ರಹಗಳ ಪರಿವರ್ತನೆಯಾಗಲಿದೆ. ಗ್ರಹಗಳ ಸ್ಥಾನದಲ್ಲಿ ಆಗುವ ಬದಲಾವಣೆಗಳು ಮಾನವ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ವಿಶೇಷವಾಗಿ ಆರ್ಥಿಕ ಸ್ಥಿತಿಯ ಮೇಲೆ ಗ್ರಹ ಸಂಚಾರದ ಪ್ರಭಾವ ಕಂಡುಬರುತ್ತದೆ.

ಇಂದು ಮಧ್ಯಾಹ್ನ 12:50 ಕ್ಕೆ, ಶುಕ್ರ ಮತ್ತು ಕೇತು ಸಿಂಹ ರಾಶಿಯಲ್ಲಿ ಮಖ ನಕ್ಷತ್ರದ ಬಳಿ ಹತ್ತಿರಕ್ಕೆ ಬರುತ್ತಾರೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಪ್ರೀತಿ, ಸಂಪತ್ತು ಮತ್ತು ಭೌತಿಕ ಸಂತೋಷಕ್ಕೆ ಕಾರಣವಾದ ಶುಕ್ರನು ಕೇತುವಿನ ಸಾಮೀಪ್ಯಕ್ಕೆ ಬರುತ್ತಾನೆ.ಶುಕ್ರ ಮತ್ತು ಕೇತುವಿನ ಸಂಯೋಗದಿಂದಾಗಿ ಸಂಬಂಧಗಳು, ಆರ್ಥಿಕ ವ್ಯವಹಾರಗಳು ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಕಾಣಬಹುದು.

Venus Ketu Conjunction

ಕಳೆದ ಮಾರ್ಚ್‌ನಲ್ಲಿ ಆರಂಭವಾಗಿದ್ದ ಕಾಳಸರ್ಪ ಯೋಗ ಕೂಡಾ ಇಂದಿಗೆ ಕೊನೆಯಾಗುತ್ತಿದೆ.ಅಪರೂಪದ ಗ್ರಹ ಸ್ಥಾನದಿಂದ 12 ರಾಶಿಯವರ ಮೇಲೆಯೂ ಪರಿಣಾಮ ಬೀರಲಿದೆ.

ಮೇಷ ರಾಶಿ (Aries): ಮೇಷ ರಾಶಿಯವರಿಗೆ, ಐದನೇ ಮನೆಯಲ್ಲಿ ಶುಕ್ರ-ಕೇತುವಿನ ಈ ಸಂಯೋಗವು ಪ್ರೇಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಮಕ್ಕಳ ಮೇಲೆ ಗಂಭೀರ ಪರಿಣಾಮ ಇರುತ್ತದೆ. ಸಂಬಂಧಗಳಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಹಣಕಾಸಿನ ನಿರ್ಧಾರಗಳಿಗೆ, ಹೂಡಿಕೆಗಳಿಗೆ ಇದು ಸೂಕ್ತ ಸಮಯವಲ್ಲ. ಆತುರದ ನಿರ್ಧಾರ ಭಾರೀ ನಷ್ಟಕ್ಕೆ ಕಾರಣವಾಗಬಹುದು.

ಗುರು ಸೂರ್ಯನ ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ :ಒಲಿದು ಬರುವಳು ಲಕ್ಷ್ಮೀ, ಹಣ ಸಿಗುವುದು, ಇಷ್ಟಾರ್ಥ ನೆರವೇರುವುದು
ಗುರು ಸೂರ್ಯನ ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ :ಒಲಿದು ಬರುವಳು ಲಕ್ಷ್ಮೀ, ಹಣ ಸಿಗುವುದು, ಇಷ್ಟಾರ್ಥ ನೆರವೇರುವುದು

ವೃಷಭ ರಾಶಿ (Taurus): ಶುಕ್ರ ವೃಷಭ ರಾಶಿಯ ಅಧಿಪತಿಯಾಗಿರುವುದರಿಂದ, ಈ ಗ್ರಹಗಳ ಸಂಯೋಗದ ಪ್ರಭಾವವು ವೃಷಭ ರಾಶಿಯ ಮೇಲೆ ನೇರವಾಗಿ ಇರುತ್ತದೆ. ಕುಟುಂಬ ವ್ಯವಹಾರಗಳು, ಹಣಕಾಸಿನ ವಹಿವಾಟುಗಳಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತವೆ. ಸಂಬಂಧಗಳಲ್ಲಿ ನಿರಾಸಕ್ತಿ ಮೂಡಬಹುದು. ಎಲ್ಲವನ್ನೂ ಬಿಟ್ಟು ಬಿಡುವ ಎನ್ನುವ ಮನಸ್ಥಿತಿಗೆ ಬರಬಹುದು. ಆತುರ ಪಡಬೇಡಿ. ತಾಳ್ಮೆಯಿಂದ ಇರಿ.

ಮಿಥುನ ರಾಶಿ (Gemini): ಮಿಥುನ ರಾಶಿಯಲ್ಲಿ ಹಿಮ್ಮುಖ ಸಂಚಾರದಲ್ಲಿರುವ ಚಂದ್ರ, ಸೂರ್ಯ ಮತ್ತು ಬುಧರು ಹೆಚ್ಚಿನ ಮಾನಸಿಕ ಒತ್ತಡಕ್ಕೆ ಕಾರಣರಾಗುತ್ತಾರೆ. ಮಾತಿನಿಂದ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸುವುದು ಉತ್ತಮ.

ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯಲ್ಲಿ ಗುರು ಉಚ್ಚ ಸ್ಥಾನದಲ್ಲಿರುವುದರಿಂದ ಆ ರಾಶಿಯವರಿಗೆ ಶುಭ ಫಲ ಸಿಗಲಿದೆ. ಆದರೂ, ಎರಡನೇ ಮನೆಯಲ್ಲಿ ಶುಕ್ರ-ಕೇತುವಿನ ಪ್ರಭಾವದಿಂದಾಗಿ, ಕುಟುಂಬ ಸಂಬಂಧಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯ. ಮಾತಿನಲ್ಲಿ ಸ್ವಲ್ಪ ಸಂಯಮವನ್ನು ಕಾಯ್ದುಕೊಳ್ಳಬೇಕು. ಹಣಕಾಸಿನ ವಿಷಯಗಳಲ್ಲಿ ಜಾಗೃತೆ ವಹಿಸುವುದು ಒಳ್ಳೆಯದು.

ನಿಮ್ಮ ಜನ್ಮರಾಶಿ ಹೇಳುತ್ತೆ ನಿಮ್ಮ ಕ್ರಿಯೇಟಿವಿಟಿಯ ರಹಸ್ಯ! ಯಾವ ರಾಶಿಯವರು ಯಾವ ಕ್ಷೇತ್ರದಲ್ಲಿ ಮಿಂಚುತ್ತಾರೆ?
ನಿಮ್ಮ ಜನ್ಮರಾಶಿ ಹೇಳುತ್ತೆ ನಿಮ್ಮ ಕ್ರಿಯೇಟಿವಿಟಿಯ ರಹಸ್ಯ! ಯಾವ ರಾಶಿಯವರು ಯಾವ ಕ್ಷೇತ್ರದಲ್ಲಿ ಮಿಂಚುತ್ತಾರೆ?

ಸಿಂಹ ರಾಶಿ (Leo): ಕೇತು ಮತ್ತು ಶುಕ್ರರ ಸಂಯೋಗವು ಸಿಂಹ ರಾಶಿಯಲ್ಲಿ ನಡೆಯುತ್ತಿರುವುದರಿಂದ, ಈ ರಾಶಿಯವರಿಗೆ ಇದು ಬಹಳ ನಿರ್ಣಾಯಕ ಸಮಯ. ಅಹಂಕಾರವನ್ನು ಬದಿಗಿಟ್ಟು ವೈವಾಹಿಕ ಸಂಬಂಧಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಜನರ ಬಗೆಗಿನ ನಿರೀಕ್ಷೆಗಳು ಬದಲಾಗುವ ಸಾಧ್ಯತೆಯಿದೆ.

ಕನ್ಯಾ ರಾಶಿ (Virgo): ಆರ್ಥಿಕ ವಿಷಯಗಳು ಮತ್ತು ಖರ್ಚುಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಕನ್ಯಾ ರಾಶಿಯವರಿಗೆ ಅತ್ಯಗತ್ಯ. ದೂರದ ಪ್ರಯಾಣ ಅಥವಾ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೆಲವು ಸವಾಲುಗಳು ಎದುರಾಗುತ್ತವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.

ತುಲಾ ರಾಶಿ (Libra): ಶುಕ್ರನು ತುಲಾ ರಾಶಿಯ ಅಧಿಪತಿಯಾಗಿರುವುದರಿಂದ, ಶುಕ್ರ-ಕೇತು ಸಂಯೋಗದ ಪರಿಣಾಮವು ಈ ರಾಶಿಯವರ ಮೇಲೆ ಸ್ವಲ್ಪ ಹೆಚ್ಚೇ ಇರುತ್ತದೆ. ಸಾಮಾಜಿಕ ಸಂಬಂಧಗಳು, ಸ್ನೇಹ ಮತ್ತು ಆರ್ಥಿಕ ಹೂಡಿಕೆಗಳಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.

ವೃಶ್ಚಿಕ ರಾಶಿ (Scorpio): ವೃತ್ತಿಜೀವನದಲ್ಲಿ ಶುಭ ಫಲ ಸಿಗುವುದು. ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಒಳ್ಳೆಯದು. ಬೇರೆಯವರ ವಿಷಯಕ್ಕೆ ತಲೆ ಹಾಕಲು ಹೋಗಬೇಡಿ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾದಕ್ಕೆ ಇಳಿಯಬೇಡಿ. ವೃತ್ತಿಜೀವನದ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗಬಹುದು.

ಧನು ರಾಶಿ (Sagitarius): ಧನು ರಾಶಿಯವರು ಆಧ್ಯಾತ್ಮಿಕತೆಯತ್ತ ವಾಲುತ್ತಾರೆ. ದೇವರ ಭಕ್ತಿ, ಪೂಜೆ, ಪುನಸ್ಕಾರಗಳಲ್ಲಿ ಕಾಲ ಕಳೆಯುವರು. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆಗಳನ್ನು ಯೋಜಿಸುವ ಸಾಧ್ಯತೆಯಿದೆ. ತಂದೆ ಅಥವಾ ಗುರುಗಳೊಂದಿಗಿನ ವಾದ ಉಂಟಾಗಬಹುದು. ಇದರಿಂದ ಮನಸ್ಸಿನ ಶಾಂತಿ ಕದಡಬಹುದು.

ಮಕರ ರಾಶಿ (Capricorn): ಆರೋಗ್ಯದತ್ತ ವಿಶೇಷ ಗಮನ ಅಗತ್ಯ. ವಿಶೇಷವಾಗಿ ಮಾನಸಿಕ ಆರೋಗ್ಯದತ್ತ ಕಾಳಜಿ ವಹಿಸುವುದು ಒಳ್ಳೆಯದು. ಕೈ ಸೇರಬೇಕಾದ ಪಿತ್ರಾರ್ಜಿತ ಆಸ್ತಿ ಕ್ಯ ತಪ್ಪವ ಭಯ ಕಾಡಬಹುದು. ಪಾಲುದಾರಿಕೆಯಲ್ಲಿ ಮಾಡುತ್ತಿರುವ ವ್ಯವಹಾರಗಳಲ್ಲಿ ಸಮಸ್ಯೆ ಎದುರಾಗಬಹುದು. ಮುಚ್ಚಿಟ್ಟಿದ್ದ ಸತ್ಯಗಳು ಹೊರ ಬರುವುದು.

ಕುಂಭ ರಾಶಿ (Aquarius): ದಾಂಪತ್ಯ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಸಂಗಾತಿ ಜೊತೆಗೆ ಸಣ್ಣ ಸಣ್ಣ ವಿಷಯಗಳಿಗೂ ಜಗಳವಾಗಬಹುದು. ಸಂಗಾತಿಯಿಂದ ಯಾವುದೇ ವಿಚಾರ ಮುಚ್ಚಿಡಬೇಡಿ. ತಪ್ಪು ತಿಳುವಳಿಕೆಗೆ ಅವಕಾಶ ನೀಡಬೇಡಿ.

ಮೀನ ರಾಶಿ (Pisces): ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಸಾಲ ತೆಗೆದುಕೊಳ್ಳುವುದು, ಸಾಲ ನೀಡುವುದು ಎರಡೂ ವಿಷಯದಿಂದ ದೂರ ಇರಿ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಎದುರಾಗಬಹುದು.ಕಾಳಸರ್ಪ ಯೋಗದ ಅಂತ್ಯವು ಕೆಲಸದಲ್ಲಿ ನಿಧಾನಗತಿಯ ಪ್ರಗತಿಗೆ ಕಾರಣವಾಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+