Kannada: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದಿ ಯಾಕಿಲ್ಲ ಎಂದ ತೆಲುಗು ಯುವತಿ, ಕನ್ನಡಿಗರು ಹೇಳಿದ್ದೇನು

Kannada: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಸುದ್ದಿ ಆಗುತ್ತಿರುವುದು ಬೇರೆಯದೇ ಕಾರಣಕ್ಕೆ. ಮೊದಲೆಲ್ಲ ಕೆಲವು ನಾರ್ಥಿಗಳು ಕರ್ನಾಟಕದ ವಿವಿಧ ಸಾರಿಗೆ ಹಾಗೂ ಸರ್ಕಾರಿ ಸೇವೆಯಲ್ಲಿ ಹಿಂದಿ ಬಳಕೆ ಮಾಡುತ್ತಿಲ್ಲ ಎಂದು ದೂರುತ್ತಿದ್ದರು. ಆದರೆ, ಇದೀಗ ದಕ್ಷಿಣ ಭಾರತದ ಕೆಲವರು ರಾಜ್ಯದವರೂ ಸಹ ಇದೇ ತಕರಾರು ತೆಗೆದಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ದೇವನಹಳ್ಳಿಯ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಬಳಸಲಾಗುತ್ತಿದೆ. ಹಿಂದಿ ಬಳಕೆ ಮಾಡಿಲ್ಲ ಎಂದು ತೆಲುಗು ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ವಿವರಣೆ ಮತ್ತು ಮಾಹಿತಿ ಪ್ರಕಟಿಸಲಾಗುತ್ತಿದೆ. ಈ ಹಿಂದೆಯೂ ಕೆಲವರು ಈ ವಿಷಯವಾಗಿ ತಕರಾರು ತೆಗೆದಿದ್ದರು. ಆದರೆ ಇದಕ್ಕೆ ಆಗಲೇ ವಿವರಣೆ ನೀಡಲಾಗಿತ್ತು. ಇದೀಗ ಕೆಲವರು ಮತ್ತೆ ತಕರಾರು ಶುರು ಮಾಡಿದ್ದಾರೆ. ಹೈದರಾಬಾದ್ ಮೂಲದ ಆಶಿವಾನಿ (@Ashiwani_kr) ಎನ್ನುವ ಖಾತೆಯಿಂದ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಪೋಸ್ಟ್‌ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಹಿತಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ. ಹಿಂದಿಯಲ್ಲಿ ಅಲ್ಲ. ದಯವಿಟ್ಟು ಈ ವಿಷಯದ ಬಗ್ಗೆ ನೋಡಿ ಎಂದು ಬೆಂಗಳೂರು ಏರ್‌ಪೋರ್ಟ್ ಸೇರಿದಂತೆ ವಿವಿಧ ಇಲಾಖೆಗಳಿಗೆ ಟ್ಯಾಗ್ ಮಾಡಲಾಗಿದೆ.

Kannada

Kannada: ನೆಟ್ಟಿಗರು ಹೇಳಿದ್ದೇನು ?

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಟ್ವೀಟ್‌ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕನ್ನಡ ಹೇಗೆ ಲಭ್ಯವಿಲ್ಲವೋ ಹಾಗೆಯೇ ಅಲ್ಲವೇ ಇದು ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕದಲ್ಲಿ ನೀವು ಹಿಂದಿ ಭಾಷೆಯನ್ನು ಏಕೆ ಪ್ರದರ್ಶಿಸಬೇಕೆಂದು ಬಯಸುತ್ತೀರಿ. ನಿಮಗೆ ಇಂಗ್ಲಿಷ್ ಓದಲು ಬರದಿದ್ದರೆ ನೀವು ಚೈನಾ, ಜಪಾನ್, ಫ್ರಾನ್ಸ್‌ಗೆ ಪ್ರಯಾಣಿಸುವಾಗ ಬಳಸುವ ಟ್ರಾನ್ಸ್‌ಲೇಟರ್ ಅನ್ನು ಬಳಸಬಹುದು ಎಂದು ಕನ್ನಡಿಗರು ತಿರುಗೇಟು ಕೊಟ್ಟಿದ್ದಾರೆ.

ಎಲ್ಲಾ ಸಾರ್ವಜನಿಕ ಮೂಲಸೌಕರ್ಯ ಸಂಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಗೆ ಪ್ರತ್ಯೇಕ ವಿಭಾಗ ಇರುತ್ತದೆ. ಅಮೆರಿಕದಲ್ಲೂ ಸಹ ಕರ್ನಾಟಕದ ಮಾಹಿತಿ ಇಂಗ್ಲಿಷ್‌ನಲ್ಲೇ ಪ್ರಕಟವಾಗುತ್ತದೆಯೇ ಹೊರತು ಹಿಂದಿಯಲ್ಲಿ ಅಲ್ಲ ಎಂದು ಕನ್ನಡಿಗರು ತಿರುಗೇಟು ನೀಡಿದ್ದಾರೆ. ರಾಜ್ಯ ಭಾಷೆ ಮತ್ತು ಅಧಿಕೃತ ಭಾಷೆ. ಅದು ಸರಿ ಅಂತ ನನಗನ್ನಿಸುತ್ತೆ. ಹಿಂದಿ ಪರ್ಯಾಯ ಅಧಿಕೃತ ಭಾಷೆ, ಆದ್ದರಿಂದ ಅದು ಐಚ್ಛಿಕವಾಗಿದೆ ಎಂದು ಕೆಲವರು ಹೇಳಿದ್ದಾರೆ.

ಬಾತ್ ತೋ ಸಹಿ ಹೈ. ಆದರೆ ಪರವಾಗಿಲ್ಲ. ನಿಮಗೆ ಅರ್ಥವಾಗದಿದ್ದರೆ, ಯಾವುದೇ AI ಅನುವಾದಕನನ್ನು ಬಳಸಿ. ಯಾರಾದರೂ ಯುಪಿಗೆ ಹೋಗಿ, "ಇದು ಕನ್ನಡದಲ್ಲಿ ಏಕೆ ಇಲ್ಲ?" ಎಂದು ಕೇಳಿದರೆ, ಯುಪಿ ಎಲ್ಲವನ್ನೂ ಕನ್ನಡದಲ್ಲಿ ಬರೆಯಲು ಪ್ರಾರಂಭಿಸುತ್ತದೆಯೇ.

ನಾವು ಅಂತಹ ಮೂಲಭೂತ ವಿಷಯಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಭಾಯಿ ಎಂದು ಸಚಿನ್ ಎನ್ನುವ ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ನಿಮಗೆ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡುವುದಕ್ಕೆ ಸಾಧ್ಯವಾದರೆ ಇಂಗ್ಲಿಷ್‌ ಓದಲು ಸಾಧ್ಯವಿಲ್ಲವೇ ನಿಮಗೆ ಹಿಂದಿ ಯಾಕೆ ಬೇಕು ಎಂದೂ ಹಲವು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+