'ಮೋದಿ ಗೆದ್ದರೂ ರಾಜೀನಾಮೆ ಕೊಡ್ತಾರೆ, ಅವರಿಗಿದೆ ಗಂಡಾಂತರ' ಬ್ರಹ್ಮಾಂಡ ಗುರೂಜಿ ಶಾಕಿಂಗ್ ಭವಿಷ್ಯ

ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದರೂ ರಾಜೀನಾಮೆ ಕೊಡ್ತಾರೆ, ಯಾಕೆಂದರೆ ಅವರಿಗೆ ಗಂಡಾಂತರ ಇದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಪ್ರಬಲ ಪಕ್ಷಗಳು ತಯಾರಿ ನಡೆಸುತ್ತಿರುವ ಈ ವೇಳೆ ಬ್ರಹ್ಮಾಂಡ ಗುರೂಜಿ ರಾಜಕೀಯ ಭವಿಷ್ಯ ನುಡಿದಿದ್ದಾರೆ.

ಒನ್‌ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಯಾವೆಲ್ಲಾ ವಿಚಾರಗಳನ್ನು ಬ್ರಹ್ಮಾಂಡ ಗುರೂಜಿ ಪ್ರಸ್ತಾಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಜಯ ಸಿಗುವುದೇ? ಸಿಕ್ಕರೂ ಅವರಿಗಿರುವ ಗಂಡಾಂತರದಿಂದಾಗಿ ಆಗುವ ಸಮಸ್ಯೆಗಳೇನು? ಇವೆಲ್ಲಾದರ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು ಎಂದು ನೋಡೋಣ.

Narendra Modi is in danger: Brahmanda Guruji Shocking Astrology Prediction on PM Modi: Know More

*ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲ್ತಾರಾ?

ಹನ್ನೆರೆಡು ವರ್ಷ ಮಾತ್ರ ಮೋದಿ ಅವರಿಗೆ ಶುಭ ಯೋಗವಿದೆ. ಹೀಗಾಗಿ ನರೇಂದ್ರ ಮೋದಿ ಮುಂಬರುವ ಎಲೆಕ್ಷನ್‌ ಅಲ್ಲೂ ಗೆಲ್ತಾರೆ. ಮೋದಿ ಕೆಳಗಡೆ ಒಂದಿಷ್ಟು ಜನ ಲಂಚ ತಿನ್ನದ ಜನ ಇದ್ದರು. ಕ್ಲೀನ್ ಹ್ಯಾಂಡ್‌ಗಳು ಇದ್ದವು. ಆದರೆ ಇತ್ತೀಚೆಗೆ ಅವರೇ ಬೇಕು ಅಂತ ಕರಪ್ಷನ್ ಮಾಡಿಕೊಂಡು ಬರುತ್ತಿದ್ದಾರೆ.

ಯಾಕೆ ಹೀಗೆ ಮಾಡ್ತಾಯಿದ್ದಾರೆ ಅಂದರೆ- ಒಬ್ಬ ರಾಜನನ್ನು ಹಾಳಮಾಡಬೇಕು ಅಂತ ಹಲವಾರು ಜನ ಕಾಯುತ್ತಿರುತ್ತಾರೆ. ಅದು ವಿರೋಧ ಪಕ್ಷದವರೇ ಆಗಬೇಕು ಅಂತಿಲ್ಲ. ರಾಜನನ್ನು ಒಬ್ಬ ಮಂತ್ರಿ, ಸೈನಿಕ ಕೂಡ ಹಾಳು ಮಾಡಬಹುದು. ಇವರು ಮಾಡೋ ಕೆಟ್ಟ ಕೆಲಸಗಳಿಂದ ಮೋದಿಗೆ ಕೆಟ್ಟ ಹೆಸರು ಬರಬಹುದು. ಇಂಥಹ ಬಹಳಷ್ಟು ಗಂಡಾಂತರಗಳು ಮೋದಿಗೆ ಇವೆ. ಉದಾ: ಕೆಟ್ಟುಹೋದ ಹಣ್ಣುಗಳು ತಮ್ಮ ನಡುವೆ ಇರುವ ಚೆನ್ನಾಗಿರುವ ಹಣ್ಣುಗಳನ್ನು ಕೆಡಿಸಿಬಿಡುತ್ತವೆ. ಹೀಗೆ ಮೋದಿ ಕೆಳಗೆ ಕೆಲ ಜನ ಲಂಚ ತಿನ್ನದೇ ಇರುವವರು ಇದ್ದರು. ಆದರೆ ಅವರು ಇತ್ತೀಚಿಗೆ ಹಾಳು ಮಾಡ್ತಾಯಿದ್ದಾರೆ ಎಂದು ಬ್ರಹ್ಮಾಂಡ್ ಗುರೂಜಿ ಹೇಳಿದರು.

Narendra Modi is in danger: Brahmanda Guruji Shocking Astrology Prediction on PM Modi: Know More

*ಮೋದಿ ಕಾಂಗ್ರೆಸ್ಸಿಗೆ ಸೇರಿದರೂ ಮೋದಿನೇ ಗೆಲ್ಲೋದು..!

ಇನ್ನೂ ಒಳ್ಳೆ ರಾಜರು ಇದ್ದಾಗ ಅವರನ್ನು ಹಾಳು ಮಾಡುವ, ಅವರ ಹೆಸರು ಹಾಳು ಮಾಡುವ ಮಂತ್ರಿಗಳು ಇರುತ್ತಾರೆ. ಹಾಗಾಗಿ ನರೇಂದ್ರ ಮೋದಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಸೇರಿದರೂ ಮೋದಿನೇ ಗೆಲ್ಲುತ್ತಾರೆ. ಎಲ್ಲಾ ಕಾಂಗ್ರೆಸ್ ನವರು ನರೇಂದ್ರ ಮೋದಿ ಅವರ ಬಳಿಯೇ ಬರುತ್ತಾರೆ. ಅಂದರೆ ಮೇನ್ ಅಟ್ರ್ಯಾಕ್ಷನ್ ಮೋದಿ ನೌ... ಹೊರಗಡೆಯಿಂದ ಸಪೋರ್ಟ್ ಮಾಡುವವರು ಇದ್ದಾರೆ. ಉದಾಹರಣೆ ಹೆಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸಪೋರ್ಟ್ ಮಾಡ್ತೀನಿ ಅಂತ ಬಂದರು.

ಹೀಗಾಗಿ ಕಾಂಗ್ರೆಸ್‌ನವರು ದೆಹಲಿಯಲ್ಲಿ ಸಾವಿರಾರು ಜನ ಸೇರಿಕೊಳ್ಳಲಿ, ನರೇಂದ್ರ ಮೋದಿ ಅವರನ್ನ ಏನು ಮಾಡ್ಲಿಕ್ ಆಗಲ್ಲ. ಯಾಕೆಂದರೆ ಅವರ ಯೋಗ ಇನ್ನೂ ಚೆನ್ನಾಗಿದೆ. ಹೀಗಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ತಾರೆ.

*ಚುನಾವಣೆಯಲ್ಲಿ ಮೋದಿ ಗೆದ್ದರೂ ರಾಜೀನಾಮೆ ಕೊಡ್ತಾರೆ..!

ಆದರೆ ಮೋದಿ ಅವರು ಗೆದ್ದರೂ ಸಹ ಅವರಿಗೆ ವೈರಾಗ್ಯ ಬಂದು ತಾವಾಗೇ ಈ ಪಟ್ಟವನ್ನು ಬಿಟ್ಟು ಕೊಡ್ತಾರೆ. ಯಾಕೆಂದರೆ ಹನ್ನೆರಡು ವರ್ಷ ಮಾತ್ರ ಮೋದಿಗೆ ಶುಭ ಯೋಗವಿದೆ.

ಒಂದು ವೇಳೆ ಅವರು ವೈರಾಗ್ಯ ಬಂದು ರಾಜೀನಾಮೆ ನೀಡದೇ ಇದ್ದಲ್ಲಿ ಅವರಿಗೆ ಗಂಡಾಂತರವಿದೆ. ಅಂದರೆ ಇಂದ್ರಾಗಾಂಧಿ ತರ ಅವರನ್ನು ಏನಾದರೂ ಮಾಡಿ ಬಿಡಬಹುದು. ರಾಜೀವ್ ಗಾಂಧಿ ಥರ ಮೋದಿ ಅವರಿಗೆ ಏನಾದರೂ ಮಾಡಬಹುದು. ಅವರ ಜನರೇ ಅವರಿಗೆ ಕುತಂತ್ರದಿಂದ ಏನಾದ್ರು ಮಾಡಬಹುದು. ಇದೆಲ್ಲಾ ಗಂಡಾಂತರಗಳು ಇವೆ. ಹೀಗಾಗಿ ಮೋದಿ ಅವರನ್ನು ಕಾಪಾಡಿಕೊಳ್ಳಬೇಕಾಗಿದ್ದು ನಮ್ಮ ಧರ್ಮ ಎಂದು ಗುರೂಜಿ ಮೋದಿ ಪರ ಬ್ಯಾಟಿಂಗ್ ಮಾಡಿದರು.

* ಮೋದಿ ದೇವರು ಇದ್ದಹಾಗೆ...!

ಮೋದಿಗೆ ಚೆನ್ನಾಗಿ ಗೊತ್ತು ಅವರ ಕ್ಯಾಬಿನೆಟ್‌ ಅಲ್ಲಿ ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು. ಮೋದಿ ಒಂದು ರೀತಿ ದೇವರು ಇದ್ದಹಾಗೆ. ದೇವರು ಯಾರು ತನ್ನನ್ನು ನಂಬುತ್ತಾರೋ ಅವರ ಬಳಿ ಹೋಗುವುದಿಲ್ಲ. ಯಾರು ತನ್ನನ್ನು ನಂಬುವುದಿಲ್ಲವೋ ಅವರ ಬಳಿಗೆ ಅವರನ್ನು ತನ್ನ ಹತ್ತಿರಕ್ಕೆ ತರಲು ಹೋಗುತ್ತಾನೆ. ಮೋದಿ ಕೂಡನೂ ಹಾಗೆ ಮೋದಿ ಬೇರೆ ಪಕ್ಷದ ದೀದಿ(ಮಮತಾ ಬ್ಯಾನರ್ಜಿ)ಗೆ ಸೀರೆ ಉಡುಗೊರೆಯಾಗಿ ನೀಡುವುದು, ಶ್ಯಾಲ್- ಸ್ವೀಟ್ ಕಳುಹಿಸ್ತಾರೆ. ಯಾಕೆಂದರೆ ಇದು ಒಂದಾಲ್ಲ ಒಂದು ಬಾರಿ ಯೂಸ್ ಆಗುತ್ತದೆ ಎಂದು. ಒಂದು ಕಡೆ ಸಂಬಂಧ ಇನ್ನೊಂದು ಕಡೆ ಪಕ್ಷದಲ್ಲಿ ಯಾವುದೇ ರೀತಿ ಇದ್ದರೂ ನಡೆಯುತ್ತದೆ ಎನ್ನುವ ಅರ್ಥದಲ್ಲಿ ಅವರು ನೋಡಿಕೊಳ್ಳುತ್ತಾರೆ ಅಂತ ಗುರೂಜಿ ಮೋದಿಯನ್ನು ಕೊಂಡಾಡಿದರು.

* ಕಾಂಗ್ರೆಸ್‌ನವರು ನೂರು ಜನ ಬಂದರೂ ಮೋದಿಗೆ ಏನೂ ಮಾಡಲಾಗದು..!

ಕಾಂಗ್ರೆಸ್‌ನವರು ನೂರು ಜನ ಬಂದರೂ ಮೋದಿಗೆ ಏನೂ ಮಾಡಲಾಗದು. ಯಾಕೆಂದರೆ ಅವರೊಂದಿಗೆ ಪಕ್ಷದ ಹೊರಗಿನವರು ಜೊತೆಗಿದ್ದಾರೆ ದೇವೇಗೌಡರೂ ಇದಾರೆ, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೋದಿ ಬಗ್ಗೆ ರಾಜ್ಯದಲ್ಲಿ ಮಾತ್ರ ವಿರೋಧ ಅಷ್ಟೇ ದೆಹಲಿ ಹೋದ್ರೆ ಆಲ್ ಪಾರ್ಟಿ ಮೀಟಿಂಗ್‌ ಅಲ್ಲಿ ಅವರೂ ಬಾಯಿ ಮುಚ್ಚಿಕೊಂಡು ಕುಳಿತಿರುತ್ತಾರೆ. ಯಾಕೆಂದರೆ ಮೋದಿ ಯಾರು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಹಾಗೇ ದೇವರು ಹೇಗೆ ಅಂದರೆ ಯಾರು ಅವರನ್ನು ನಂಬೋದಿಲ್ಲವೋ ಅಂಥಹ ಶಾಲಾ ವಿದ್ಯಾರ್ಥಿಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತಾರೆ. ನಮ್ಮೆಲ್ಲರಿಗೂ ಈ ದೇವರು ಪರ್ಮನೆಂಟು. ಬಿಟ್ಟು ಹೋಗೋ ಮಾತಿಲ್ಲ. ಹಾಗಂತ ಅವರು ಬೇರೆ ಪಕ್ಷಕ್ಕೆ ಅಧಿಕಾರ ಕೊಡುವುದಿಲ್ಲ ಯೋಗಿ ಆದಿತ್ಯನಾಥ್ ಅವರನ್ನೇ ಪಿಎಂ ಮಾಡಬಹುದು ಎಂದು ಬ್ರಹ್ಮಾಂಡ ಗುರೂಜಿ ಕುತೂಹಲ ಕಾರಿಯಾಗಿ ಭವಿಷ್ಯ ನುಡಿದಿದ್ದಾರೆ.

ಇದ್ಯ ಈ ಭವಿಷ್ಯ ನಿಜವಾಗುತ್ತಾ? ಮುಂಬರುವ ಚುನಾವಣೆಯಲ್ಲಿ ಮೋದಿ ಗೆಲ್ತಾರಾ? ರಾಜ್ಯದಲ್ಲಿ ಬಿಜೆಪಿ ಪಕ್ಷ ನರೇಂದ್ರ ಮೋದಿಗೆ ಎಷ್ಟು ಕ್ಷೇತ್ರಗಳನ್ನು ಗೆಲ್ಲಿಸಿ ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+