ಚಿಕ್ಕಬಳ್ಳಾಪುರವನ್ನು ಯಾವ ಲೆವೆಲ್ಲಿಗೆ ತಗೊಂಡು ಹೋಗ್ತೀನಿ ನೋಡಿ : ಒನ್ ಇಂಡಿಯಾ ಸಂದರ್ಶನದಲ್ಲಿ ರಕ್ಷಾ ರಾಮಯ್ಯ ಹೇಳಿದ್ದೇನು?

ಚಿಕ್ಕಬಳ್ಳಾಪುರ, ಏಪ್ರಿಲ್‌ 23: 2024 ರ ಲೋಕಸಭಾ ಕ್ಷೇತ್ರ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಅಬ್ಬರದ ಪ್ರಚಾರ ಕಾರ್ಯವನ್ನ ರಾಜಕೀಯ ನಾಯಕರು ನಡೆಸುತ್ತಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಕ್ಷೇತ್ರದಾದ್ಯಂತ ಪ್ರಚಾರಕಾರ್ಯದಲ್ಲಿ ತೊಡಗಿದ್ದಾರೆ. ‌

ಚುನಾವಣೆಯಲ್ಲಿ ಯುವಕರಿಗೆ ಟಿಕೆಟ್‌ ಕೊಟ್ರೆ ಮುಂದಿನ ದಿನಗಳಲ್ಲಿ ಯುವಕರು ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆಯಿಂದ ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಯುವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಇನ್ನೂ ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.

Interview With Chikkaballapur Lok Sabha Constituency Congress Candidate Raksha Ramaiah

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಕುರಿತು ನಿಮ್ಮ ಅಭಿಪ್ರಾಯವೇನು?

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಸಮಸ್ಯೆ ಇದೆ. ಅತೀ ವೇಗದಲ್ಲಿ ನಾವು ನೀರಿನ ಸಮಸ್ಯೆಯನ್ನ ಬಗೆಹರಿಸಬೇಕಿದೆ, ನೀರಿನ ಸಮಸ್ಯೆಯಿಂದ ಹಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದೆ. ಇನ್ನೂ ಈ ಕ್ಷೇತ್ರದಲ್ಲಿ ಸಾರಿಗೆ ಸಂಪರ್ಕದ ತೊಂದರೆಯೂ ಇದೆ. ಈಗಾಗಲೇ ದೇವನಹಳ್ಳಿಯವರೆಗೂ ಮೆಟ್ರೋ ಮಾರ್ಗ ಇದೆ. ಇನ್ನೂ ಎರಡ್ಮೂರು ವರ್ಷದಲ್ಲಿ ಹೊಸಕೋಟೆ, ನೆಲಮಂಗಲ, ಚಿಕ್ಕಬಳ್ಳಾಪುರದಲ್ಲಿ ಮೆಟ್ರೋ ತರ್ಬೇಕು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಸ್‌ ನಿಲ್ದಾಣಗಳನ್ನ ಅಭಿವೃದ್ದಿ ಪಡಿಸಬೇಕು.

Interview With Chikkaballapur Lok Sabha Constituency Congress Candidate Raksha Ramaiah

ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ನಿಮ್ಮ ಕೈ ಹಿಡಿಯಲಿಯೇ?

ಕೊರೋನಾ, ಬೆಲೆ ಏರಿಗೆ ಹಾಗೂ ಬರಗಾಲದಿಂದಾಗಿ ಜನ ಬಳಿ ಹಣವಿಲ್ಲ. ಜಿಎಸ್ ಟಿ ಯಿಂದಾಗಿ ಜನರಿಗೆ ಕಷ್ಟವಾಗಿದೆ, ಜನರ ಕೈಯಲ್ಲಿ ಜೀವನ ನಡೆಸಲು ಕಷ್ಟವಾಗಿದೆ. ಹಿಂದಿನ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನ ನೀಡಿದ್ವಿ. ಈ ಐದು ಯೋಜನೆಯಿಂದಾಗಿ ಸಾಕಷ್ಟು ಫಲಾನುಭವಿಗಳಿಗೆ ಅನುಕೂಲವಾಗಿದೆ. ಫ್ರೀ ಯೋಜನೆಗಳು ಅಂತ ಬಿಜೆಪಿಯವರು ಟೀಕೆ ಮಾಡುತ್ತಾರೆ. ಆದ್ರೆ, ಹೊಟ್ಟೆ ತುಂಬಿದವರಿಗೆ ಈ ಯೋಜನೆ ಪ್ರಮುಖ್ಯತೆ ಗೊತ್ತಾಗುವುದಿಲ್ಲ. ಆದರೆ, ಗ್ರಾಮೀಣ ಭಾಗದ ಜನರಿಗೆ ಈ ಯೋಜನೆಗಳಿಂದ ತುಂಬಾ ಉಪಯೋಗವಾಗಿದೆ.

ಶಕ್ತಿ ಯೋಜನೆಯಿಂದ ಸಾಕಷ್ಟು ಬಡ ಮಹಿಳೆಯರು ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳೆಯವರಿಗೂ ಸಹ ಶಕ್ತಿ ನೀಡುತ್ತಿದ್ದೇವೆ. ಮನ್‌ ಮೋಹನ್‌ ಸಿಂಗ್‌ ಕಾಲದಿಂದಲೂ ನಾವು ರೈತದ ಸಾಲ ಮನ್ನಾ ಮಾಡಿದ್ದೇವೆ. ಆದರೆ, ಹತ್ತು ವರ್ಷ ಬಿಜೆಪಿ ಸರ್ಕಾರದಲ್ಲಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿಯವರ ರೆಡಿ ಮಾಡಿರುವ ಪ್ರಣಾಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು?

ಅದು ನ್ಯಾಯ ಕಾರ್ಯಕ್ರಮ. ನಾವು ರೈತರಿಗೆ, ಮಹಿಳೆಯರಿಗೆ ಹಾಗೂ ಯುವರಿಗೆ ನ್ಯಾಯ ನೀಡುವ ಕೆಲಸ ಮಾಡ್ಬೇಕು. ಯುವಕರ ಶಕ್ತಿ ದೇಶದ ಶಕ್ತಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಕೆಲಸ ಆಗಿಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಉದ್ಯೋಗವನ್ನ ಯುವಕರಿಗೆ ಕೆಲಸ ನೀಡುವ ಕಾರ್ಯವನ್ನ ನಾವು ಮಾಡುತ್ತೇವೆ. ನಿರುದ್ಯೋಗ ಸಮಸ್ಯೆ ಹೆಚ್ಚಾದಂತೆ ಕ್ರೈಂ ರೇಟ್‌ ಸಹ ಜಾಸ್ತಿಯಾಗುತ್ತಿದೆ. ಯುವಕರು ತಪ್ಪು ದಾರಿ ಹಿಡಿಯಬಾರದು ಅಂತ ನಾವು ಅವರಿಗೆ ಉದ್ಯೋಗ ನೀಡುವ ಕೆಲಸವನ್ನ ನಾವು ಮಾಡುತ್ತೇವೆ.

ಗ್ರಾಮೀಣ ಭಾಗದ ಎಲ್ಲಾ ಕಾಲೇಜುಗಳಲ್ಲಿ ಯುವಕರಿಗೆ ಫ್ರೀ ಇಂಟರ್‌ ನೆಟ್‌ ಸೌಲಭ್ಯವನ್ನ ನೀಡುತ್ತೇವೆ.ದೇಶವನ್ನ, ರಾಜ್ಯವನ್ನ ಕಟ್ಟುವುದುಮ ಬೆಳೆಸುವುದು ಮಹಿಳೆಯರು ಹೀಗಾಗಿ ವರ್ಷಕ್ಕೆ ಒಂದು ಲಕ್ಷವನ್ನ ನಾವು ಕೇಂದ್ರದಿಂದ ನೀಡುತ್ತೇವೆ.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದಿಯಾ?

2023 ರ ವಿಧಾನಸಭಾ ಚುನಾವಣೆಯಲ್ಲಿ 22 ಬಾರಿ ಮೋದಿ ರಾಜ್ಯಕ್ಕೆ ಬಂದರು. ಆದರೆ, ಯಾವುದೇ ಅಲೆ ವರ್ಕೌಂಟ್‌ ಆಗಲಿಲ್ಲ. 2019 ರ ಚುನಾವಣೆಯಲ್ಲಿ ಜನ ನಂಬಿ ಮೋಸ ಹೋಗಿ. ಜನಪರವಿರುವ ಸರ್ಕಾರ ನಮಗೆ ಬೇಕು ಎಂದು ಜನ ಹೇಳುತ್ತಿದ್ದಾರೆ. ಚಿಕ್ಕಬಳ್ಳಾಪುರ ಅಭಿವೃದ್ಧಿಗಾಗಿ ನಾವು ಕೆಲಸ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+