Kodi Mutt Swamiji: ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ಬಗ್ಗೆ ಕೋಡಿಶ್ರೀ ಭವಿಷ್ಯ
ಹುಬ್ಬಳ್ಳಿ, ಸೆಪ್ಟೆಂಬರ್, 11: ರಾಜ್ಯದಲ್ಲಿ ಪ್ರಸ್ತುತವಾಗಿ ನಡೆಯುತ್ತಿರುವ ಘಟನೆಗಳ ಬಗ್ಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ವಿಸ್ತ್ರೃತವಾಗಿ ವಿವರಿಸಿ ಹೇಳಿದ್ದಾರೆ. ಹಾಗಾದರೆ ಶ್ರೀಗಳು ಯಾವ ವಿಚಾರಗಳ ಬಗ್ಗೆ ಹೇಳಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಕಾಡಲಿದೆ. ಯುಗಾದಿವರೆಗೂ ಸಮಯ ಇದ್ದು, ನಂತರ ಏನಾಗುತ್ತೋ ಕಾದುನೋಡಿ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಬರಗಾಲದ ಛಾಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮಿಸುತ್ತಾನೆ. ಆದರೆ ಮನುಷ್ಯ ಮಾಡಿದ ಪಾಪ ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯನ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಈ ರೀತಿಯ ಭಾದೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಯನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ. ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರವರ ವಿಚಾರ. ಅದರ ಬಗ್ಗೆ ಹೇಳಲು ಆಗುವುದಿಲ್ಲ.
ದೇಶದ ಬಗ್ಗೆ ಈ ಹಿಂದೆಯೂ ಹೇಳಿದ್ದೆ ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಕಾದಿದೆ ಅಂತಾ. ಇದೀಗ ರಾಜ್ಯ ಹಾಗೂ ರಾಷ್ಟ್ರೀಯ ರಾಜಕೀಯದಲ್ಲೂ ಅಸ್ಥಿರತೆ ಕಾಡಲಿದೆ ಎಂದು ಭವಿಷ್ಯ ನುಡಿದರು.
ಸನಾತನ ಧರ್ಮದ ವಿಚಾರ ಬಗ್ಗೆ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಅವರವರ ಧರ್ಮದವರ ಹೇಳಿಕೆಯಾಗಿದೆ. ಎಲ್ಲಾ ಜನಾಂಗದಲ್ಲಿಯೂ ಅವರವರ ನೋವು ಇರುತ್ತದೆ. ಅದನ್ನು ಈ ರೀತಿ ನೋವಿನ ಮೂಲಕ ಹೊರಹಾಕುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ಉದಯನಿಧಿ ಸ್ಟಾಲಿನ್ ಅವರಿಗೆ ಯಾವ ನೋವಿನಿಂದ ಹೇಳಿದ್ದಾರೋ ಗೊತ್ತಿಲ್ಲ. ಆಯಾ ಧರ್ಮದಲ್ಲಿರೋರು ತಮಗಾಗಿರುವ ನೋವಿನಿಂದಾಗಿ ಈ ರೀತಿಯಾಗಿ ತೋಡಿಕೊಳ್ಳುತ್ತಾರೆ ಎಂದರು.
ಜನರಲ್ಲಿ ಪೂರ್ಣವಾದ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ. ಧರ್ಮ ಎಂದರೆ ನೆಮ್ಮದಿ, ಶಾಂತಿ ನಿಜವಾದ ಜ್ಞಾನ ಮೂಡಿಸುತ್ತದೆ. ಆದರೆ ಅದರಲ್ಲಿ ನೆಮ್ಮದಿ, ಶಾಂತಿ ಕಂಡುಕೊಳ್ಳದವರಿಂದ ಈ ರೀತಿ ಅಸಮಾಧಾನ ಮೂಡುತ್ತದೆ ಎಂದರು.












Click it and Unblock the Notifications