India vs Pakistan Match: ಜ್ಯೋತಿಷ್ಯದ ಪ್ರಕಾರ ಈ ಬಾರಿ ಗೆಲ್ಲುವ ಅದೃಷ್ಟ ಯಾರಿಗೆ?
2023ರ ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ರೋಚಕ ಪಂದ್ಯ ಇಂದು ಆರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಅಖಾಡಕ್ಕಿಳಿದಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಯಾವುದೇ ಪಂದ್ಯವನ್ನು ಸೋತಿಲ್ಲ. ಹೀಗಾಗಿ ಈ ಬಾರಿಯೂ ಭಾರತ ತಂಡ ಈ ಗೆಲುವಿನ ಸಾಹಸವನ್ನು ಮುಂದುವರಿಸಬಹುದು ಎನ್ನಲಾಗುತ್ತಿದೆ. ಹಾಗಾದರೆ ಈ ಬಾರಿ ಭಾರತ ತಂಡ ಗೆಲ್ಲುತ್ತಾ? ಎನ್ನುವ ಪ್ರಶ್ನೆಗೆ ಜ್ಯೋತಿಷ್ಯದಲ್ಲಿ ಉತ್ತರ ಇದೆ.

ಭಾರತ ಮತ್ತು ಪಾಕಿಸ್ತಾನ ಐಸಿಸಿ ವಿಶ್ವಕಪ್‌ನ ಈ ಪಂದ್ಯಕ್ಕಾಗಿ ವಿಶ್ವದಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಅಂತಹ ಮತ್ತೊಂದು ಕದನಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಮತ್ತು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಇದುವರೆಗೆ ಎರಡು ಪಂದ್ಯಗಳನ್ನು ಗೆದ್ದಿದ್ದು, ಇಂದಿನ ಪಂದ್ಯದಲ್ಲಿ ಮೊದಲ ಸೋಲಿನ ರುಚಿಯನ್ನು ಅನುಭವಿಸಲಿದೆ. ಹೌದು... ಜ್ಯೋತಿಷ್ಯದ ಪ್ರಕಾರ ಟ್ಯಾರೋ ಕಾರ್ಡ್‌ಗಳು ಮತ್ತು ಒಟ್ಟಾರೆ ಶಕ್ತಿಗಳನ್ನು ನೋಡಿದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ.
ಪಾಕಿಸ್ತಾನ ತಂಡ
2023ರ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಇಲ್ಲಿಯವರೆಗೆ ಎರಡು ಬ್ಯಾಕ್-ಟು-ಬ್ಯಾಕ್ ಗೆಲುವುಗಳೊಂದಿಗೆ ಉತ್ತಮವಾಗಿ ಆಡುತ್ತಿದೆ. ಈ ಪಂದ್ಯದಲ್ಲಿಯೂ ಗೆಲ್ಲಲು ಪಾಕಿಸ್ತಾನ ತಂಡ ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡುವುದರಲ್ಲಿ ಅನುಮಾನವೇ ಇಲ್ಲ. ಆದರೆ ಜ್ಯೋತಿಷ್ಯದ ಒಟ್ಟಾರೆ ಶಕ್ತಿಗಳು ಅವರನ್ನು ಬೆಂಬಲಿಸದ ಕಾರಣ ಅಂತಿಮವಾಗಿ ನಿರಾಶೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಅದೃಷ್ಟ ಅವರ ಪಾಲಿಗೆ ಇಲ್ಲದಿರಬಹುದು.

ಪಾಕಿಸ್ತಾನ ತಂಡದಲ್ಲಿ ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ಕ್ಯಾಪ್ಟನ್), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಆಟವಾಡಲಿದ್ದಾರೆ.
ಭಾರತ ತಂಡ
ಟ್ಯಾರೋ ಶಕ್ತಿಗಳ ಪ್ರಕಾರ ಪಂದ್ಯದ ಫಲಿತಾಂಶ ಟೀಮ್ ಇಂಡಿಯಾದ ಪರವಾಗಿದೆ. ಈ ಬಾರಿ ಗೆಲ್ಲುವ ಅದೃಷ್ಟ ಭಾರತ ತಂಡಕ್ಕಿದೆ. ಹೀಗಾಗಿ ಜ್ತೋತಿಷ್ಯಶಾಸ್ತ್ರದ ಪ್ರಕಾರ ಈ ಬಾರಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಗೆಲ್ಲುವು ಸಾಧಿಸಲಿದೆ.
ಭಾರತ ತಂಡದಲ್ಲಿ ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಿಶ್ವಕಪ್ ಪಂದ್ಯದಲ್ಲಿ ಪಾಕ್ ವಿರುದ್ಧ ಅಖಾಡ ಪ್ರವೇಶ ಮಾಡಲಿದ್ದಾರೆ.












Click it and Unblock the Notifications