Kodi Mutt Swamiji: ಮಳೆ, ರಾಜ್ಯ ರಾಜಕೀಯದ ಬಗ್ಗೆ ಕೋಡಿಮಠ ಶ್ರೀಗಳ ಭಯಾನಕ ಭವಿಷ್ಯ

ಕೋಲಾರ, ಫೆಬ್ರವರಿ, 19: ಕೋಡಿಮಠ ಶ್ರೀಗಳು ಆಗಾಗ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಹಾಗೆಯೇ ಇವರು ನುಡಿಯುವ ಭವಿಷ್ಯಗಳು ನಿಜವಾಗುತ್ತವೆ ಎನ್ನುವ ಮಾತಿದೆ. ಹಾಗೆಯೇ ಇದೀಗ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಹಾಗಾದರೆ ಇದರಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕೋಲಾರ ಜಿಲ್ಲೆ‌ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, "ಯುಗಾದಿ ನಂತರ‌ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದರು. ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ," ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ.

Kodi Mutt Swamiji prediction on rain, state politics, know details

ಇನ್ನು ಗ್ಯಾರೆಂಟ್‌ಗಳಿಂದ‌ ಕಾಂಗ್ರೆಸ್‌ ಸರ್ಕಾರ ನಡೆಯುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ರಾಷ್ಟ್ರ ರಾಜಕಾರಣ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ‌ ಭವಿಷ್ಯ ಬರುವುದು. ಒಂದು ತಿಂಗಳು ಕಳೆದ ಮೇಲೆ ಮಳೆ, ಬೇಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ ಹಾವಳಿ,ನೀರಿನ ಹಾವಳಿ, ಯುದ್ದ‌ ಆಗುತ್ತದೆ. ಅನೇಕ‌ ಸಾವು, ನೋವುಗಳು ಆಗುತ್ತವೆ. ಮತಾಂದತೆ‌ ಹೆಚ್ಚಳ ಆಗುತ್ತದೆ. ಬಾಂಬ್ ಸ್ಫೋಟ, ಭೂಕಂಪ ಆಗುತ್ತದೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಹೊಸ ವರ್ಷದ ಆರಂಭದಲ್ಲಿ ಗದಗನಲ್ಲಿ ಮಾತನಾಡಿದ್ದ ಅವರು, 2024ರಲ್ಲಿ ಅಕಾಲಿಕ ಮಳೆಯಾಗಲಿದ್ದು, ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ಆವರಿಸಲಿದೆ. ಭೂಕಂಪ, ಜಲ ಕಂಟಕವೂ ಇದೆ. ಜನರು ತಲ್ಲಣವಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಅಲ್ಲದೆ ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿವೆ. ಜಗತ್ತಿಗೆ ವಿನಾಶ ಕಾದಿದೆ. ರೋಗ, ಸುನಾಮಿ ಸಂಭವಿಸಲಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ದೈವ ನಂಬುವುದೊಂದೇ ಪರಿಹಾರ. ದೈವ ಮೊರೆ ಹೋಗಬೇಕೆಂದು ಭವಿಷ್ಯ ನುಡಿದಿದ್ದರು.

ಒಟ್ಟಿನಲ್ಲಿ ಶ್ರೀಗಳು ಆಗಾಗ ಇಂತಹ ಭಯಾನಕ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಇದೀಗ ಮತ್ತೆ ಸ್ಫೋಟವಾಗುವಂತಹ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+