ನಿಮ್ಮ ಮನೆಯಲ್ಲಿ ನಾಯಿ ಸಾಕುತ್ತೀರಾ? ಹಾಗಾದರೆ ಈ ಅದೃಷ್ಟ ನಿಮ್ಮದು...!

ನಾಯಿಗಳು ಬಲವಾದ ಶಕ್ತಿಯನ್ನು ಹೊಂದಿವೆ. ಅವು ಆತ್ಮಗಳನ್ನು ನೋಡುವ ಸಾಮರ್ಥ್ಯವನ್ನು ಹೊಂದಿವೆ ಎಂಬ ನಂಬಿಕೆ ಇದೆ. ನಂಬಿಕೆಯ ಪ್ರಕಾರ, ದುಷ್ಟಶಕ್ತಿಗಳು ನಾಯಿಗಳಿಂದ ಓಡಿಹೋಗುತ್ತವೆ ಎಂದು ಹೇಳಲಾಗುತ್ತದೆ.

ಹೆಚ್ಚಿನ ಮನೆಗಳಲ್ಲಿ ನಾಯಿಯನ್ನು ಸಾಕುಪ್ರಾಣಿಯಾಗಿ ಸಾಕಲಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ನಾಯಿ ಎಂದರೆ ತುಂಬಾ ಇಷ್ಟ. ಅದರಲ್ಲಿ ಅನೇಕ ಜನರು ನಾಯಿಗಳನ್ನು ಸ್ಟೇಟಸ್ ಸಿಂಬಲ್ ಆಗಿ ಸಾಕುತ್ತಾರೆ. ಇನ್ನೂ ಕೆಲವರು ನಾಯಿಗಳಿಂದ ಮುದ್ದಾದ ಮತ್ತು ಸಾಂತ್ವನವನ್ನು ಕಾಣಲು ಸಾಕುತ್ತಾರೆ. ಇನ್ನೂ ಅನೇಕರು ನಾಯಿಯನ್ನು ಹೋಮ್ ಗಾರ್ಡ್ ಆಗಿ ಸಾಕುತ್ತಾರೆ.

astrological-benefits-of-having-a-dog

ನೀವು ಸಾಕುತ್ತಿರುವ ನಾಯಿಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರವು ಅನೇಕ ವಿಷಯಗಳನ್ನು ಹೇಳುತ್ತದೆ. ನಿಮ್ಮ ಮನೆಯಲ್ಲಿ ನಾಯಿ ಬೆಳೆಸಿದರೆ ಎಂಟಕ್ಕಿಂತ ಹೆಚ್ಚು ಜ್ಯೋತಿಷ್ಯ ಲಾಭಗಳನ್ನು ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? ಇಲ್ಲವಾದಲ್ಲಿ ಅದರ ಬಗ್ಗೆ ತಿಳಿಯಿರಿ.

ವಿಸ್ಮಯ ಮತ್ತು ಕೃತಜ್ಞತೆಯ ಭಾವ

ನಾಯಿ ಕೃತಜ್ಞತೆಯ ಸಂಕೇತವಾಗಿದೆ. ನಾಯಿಗಳು ತಮ್ಮ ನಿಷ್ಠಾವಂತ ಮತ್ತು ಪ್ರೀತಿಯ ಸ್ವಭಾವಕ್ಕೆ ಹೆಸರುವಾಸಿಯಾಗಿವೆ. ಮನೆಯಲ್ಲಿ ಒಬ್ಬ ವ್ಯಕ್ತಿಯಂತೆ ನಾಯಿಗಳನ್ನು ಸಾಕಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರನು ಭಾವನೆಗಳನ್ನು ಮತ್ತು ಪೋಷಣೆಯನ್ನು ಪ್ರತಿನಿಧಿಸುತ್ತಾನೆ. ನಾಯಿಯನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುವುದು ನಮ್ಮ ಜೀವನದಲ್ಲಿ ಧನಾತ್ಮಕ ಚಂದ್ರನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಭಾವನಾತ್ಮಕ ಸಮತೋಲನ ಮತ್ತು ಸಂತೋಷವನ್ನು ತರುತ್ತದೆ.

ಒತ್ತಡ ನಿವಾರಣೆ

ಚಂದ್ರ ಗ್ರಹ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದನ್ನು ಪ್ರತಿನಿಧಿಸುತ್ತದೆ. ನಾಯಿಯೊಂದಿಗೆ ಸಮಯ ಕಳೆಯುವುದು, ಮುದ್ದಾಡುವುದು, ಆಟವಾಡುವುದು ಅಥವಾ ಅವುಗಳ ಉಪಸ್ಥಿತಿಯಲ್ಲಿ ಇರುವುದು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಾಯಿಗಳು ಚಂದ್ರನ ಶಾಂತಿಯುತ ಶಕ್ತಿಗೆ ಸಂಬಂಧಿಸಿವೆ. ಹೀಗಾಗಿ ಅವುಗಳನ್ನು ಸಾಕುವುದು ತುಂಬಾ ಪ್ರಯೋಜನಕಾರಿಯಾಗಿದೆ.

ದಿನಚರಿ ಮತ್ತು ಶಿಸ್ತು

ಜ್ಯೋತಿಷಿಗಳು ಸಾಮಾನ್ಯವಾಗಿ ಶನಿಯನ್ನು ಶಿಸ್ತು ಮತ್ತು ಸಂಘಟನೆಯೊಂದಿಗೆ ಸಂಯೋಜಿಸುತ್ತಾರೆ. ನಾಯಿಯನ್ನು ಮನೆಯೊಳಗೆ ಸಾಕಲು ಆಹಾರ, ವ್ಯಾಯಾಮ ಮತ್ತು ಸ್ವಚ್ಚತೆಯ ದಿನಚರಿಯನ್ನು ಪಾಲಿಸುವುದು ಅಗತ್ಯವಿದೆ. ಇದನ್ನು ಮಾಡಿದಾಗ ಒಬ್ಬ ವ್ಯಕ್ತಿ ಶಿಸ್ತು ಕಲಿಯುತ್ತಾನೆ. ಇದು ಜೀವನದಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಶಿಸ್ತನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ನೀವು ಶನಿಯ ಪ್ರಭಾವದಿಂದ ಲಾಭ ಪಡೆಯಬಹುದು.

ದೈಹಿಕ ಚಟುವಟಿಕೆ ಮತ್ತು ಯೋಗಕ್ಷೇಮ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಯಿ ಮತ್ತು ಮಾಲೀಕ ಇಬ್ಬರ ಯೋಗಕ್ಷೇಮಕ್ಕೆ ನಿಯಮಿತ ದೈಹಿಕ ಚಟುವಟಿಕೆ, ಉದಾಹರಣೆಗೆ ವಾಕಿಂಗ್ ಅಥವಾ ನಾಯಿಯೊಂದಿಗೆ ಆಟವಾಡುವುದು ಮುಖ್ಯವಾಗಿದೆ. ದೈಹಿಕ ವ್ಯಾಯಾಮವು ಸಾಮಾನ್ಯವಾಗಿ ಮಂಗಳದ ಜ್ಯೋತಿಷ್ಯ ಪ್ರಭಾವಕ್ಕೆ ಸಂಬಂಧಿಸಿದೆ. ನಾಯಿಯೊಂದಿಗೆ ಆಟ ಮಾಲೀಕರಲ್ಲಿ ಶಕ್ತಿ ಮತ್ತು ಚೈತನ್ಯವನ್ನು ಉಂಟು ಮಾಡುತ್ತದೆ. ಮನೆಯಲ್ಲಿ ನಾಯಿಯನ್ನು ಸಾಕುವುದರಿಂದ ವ್ಯಕ್ತಿಗಳು ಸಕ್ರಿಯವಾಗಿರಲು ಪ್ರೋತ್ಸಾಹಿಸಬಹುದು. ಇದು ಸುಧಾರಿತ ದೈಹಿಕ ಆರೋಗ್ಯ ಮತ್ತು ಚೈತನ್ಯಕ್ಕೆ ಕಾರಣವಾಗುತ್ತದೆ.

ಸುಧಾರಿತ ಸಾಮಾಜಿಕ ಜೀವನ

ನಾಯಿಗಳನ್ನು ವಾಕ್ ಅಥವಾ ಡಾಗ್ ಪಾರ್ಕ್‌ಗೆ ಕೊಂಡೊಯ್ಯುವುದು ಇತರ ನಾಯಿ ಮಾಲೀಕರೊಂದಿಗೆ ಸಾಮಾಜಿಕ ಸಂವಹನವನ್ನು ಹೆಚ್ಚಿಸಬಹುದು. ಜ್ಯೋತಿಷ್ಯದ ಪ್ರಕಾರ ಶುಕ್ರ ಗ್ರಹ ಸಂಬಂಧಗಳು ಮತ್ತು ಸಾಮಾಜಿಕ ಸಂವಹನಗಳೊಂದಿಗೆ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಧನಾತ್ಮಕ ಶಕ್ತಿಯಿಂದಾಗಿ ನಾಯಿ ಸಂಬಂಧಿ ಚಟುವಟಿಕೆಗಳ ಮೂಲಕ ಹೊಸ ಸ್ನೇಹವನ್ನು ಬೆಳೆಸುವುದು ನಮ್ಮ ಸಾಮಾಜಿಕ ಜೀವನವನ್ನು ಸುಧಾರಿಸುತ್ತದೆ.

ಭದ್ರತೆ

ಜ್ಯೋತಿಷ್ಯದಲ್ಲಿ ಮಂಗಳ ರಕ್ಷಣೆ ಮತ್ತು ಸ್ಥಿರತೆಗೆ ಸಂಬಂಧಿಸಿದೆ. ನಾಯಿ ಐತಿಹಾಸಿಕವಾಗಿ ತನ್ನ ಪ್ರೀತಿಪಾತ್ರರ ರಕ್ಷಕರಾಗಿದೆ. ಮನೆಯನ್ನು ರಕ್ಷಿಸುವುದರಿಂದ ಹಿಡಿದು ಊರನ್ನು ರಕ್ಷಿಸುವವರೆಗೂ ನಾಯಿ ಕಾವಲುಗಾರನಂತೆ ಕಾಯುತ್ತದೆ. ನಾಯಿಯನ್ನು ದತ್ತು ಪಡೆಯುವುದು ಅಥವಾ ಮನೆಯಲ್ಲಿ ಸಾಕುವುದು ಮಂಗಳನ ರಕ್ಷಣಾತ್ಮಕ ಗುಣ ಪಡೆದಂತೆ.

ಭಾವನಾತ್ಮಕ ಚಿಕಿತ್ಸೆ

ನಾಯಿಗಳು ಯಾವಾಗಲೂ ತಮ್ಮ ಮಾಲೀಕರಿಗೆ ಬೆಂಬಲ ನೀಡುತ್ತವೆ ಮತ್ತು ಅವರು ಏನು ಹೇಳಿದರೂ ಕೇಳುತ್ತವೆ. ನಾಯಿಗಳು ಯಾವುದೇ ಆಕ್ಷೇಪ ಇಲ್ಲದೆ ಪ್ರೀತಿಯನ್ನು ನೀಡುತ್ತವೆ. ಮನೆಯಲ್ಲಿ ಯಾರಿರಲಿ, ಇಲ್ಲದೇ ಇರಲಿ ಒಂದು ನಾಯಿ ಇದ್ದರೆ ಅದು ಕಾಪಾಡುತ್ತದೆ, ನೂರು ಜನ ನಮ್ಮೊಂದಿಗೆ ಇದಾರೆ ಎನ್ನುವ ಭಾವನೆ ಮೂಡುತ್ತದೆ. ಮಾಲೀಕರಿಗೆ ಭಾವನಾತ್ಮಕ ಚಿಕಿತ್ಸೆ ನೀಡುತ್ತದೆ.

ತಾಳ್ಮೆ ಹೆಚ್ಚಾಗುವುದು

ಮನೆಯಲ್ಲಿ ನಾಯಿಯನ್ನು ಸಾಕುವುದು ತಾಳ್ಮೆಯನ್ನು ಕಲಿಸುತ್ತದೆ. ಏಕೆಂದರೆ ಸಾಕುಪ್ರಾಣಿಗಳ ತರಬೇತಿ ಮತ್ತು ಕಾಳಜಿಯು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ತಾಳ್ಮೆಯ ಈ ಬೆಳವಣಿಗೆಯು ಗುರುಗ್ರಹದ ಧನಾತ್ಮಕ ಪ್ರಭಾವದೊಂದಿಗೆ ಹೊಂದಿಕೆಯಾಗುತ್ತದೆ. ಇದು ಹೆಚ್ಚು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+