ದೇವರಗುಡ್ಡದ ಕಾರ್ಣಿಕ ಭವಿಷ್ಯವಾಣಿ: ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರು

ಹಾವೇರಿ ಅಕ್ಟೋಬರ್ 24: 'ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್' ಎಂದು ಗೊರವಪ್ಪ ಈ ವರ್ಷದ ಐತಿಹಾಸಿಕ ಕಾರ್ಣಿಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ.

ಹಾವೇರಿಯ ರಾಣೆ ಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು. ಈ ವೇಳೆ ಗೋರವಯ್ಯ ನಾಗಪ್ಪಜ್ಜ ಆಯುಧ ಪೂಜೆಯ ದಿನದಂದು ಈ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ.

'ಮುಕ್ಕೋಟಿ ಚಲ್ಲಿತಲೆ ಕಲ್ಯಾಣ ಕಟ್ಟಿತಲೆ ಪರಾಕ್' ಎಂದು ಗೊರವಪ್ಪ ವರ್ಷದ ಭವಿಷ್ಯವಾಣಿಯನ್ನು ಪ್ರಧಾನ ಅರ್ಚಕ ಸಂತೋಷಭಟ್ಟ ಅವರು ವಿಶ್ಲೇಷಣೆ ಮಾಡಿದ್ದಾರೆ. ಮುಕ್ಕೋಟಿ ಚಲ್ಲಿತಲೆ ಅಂದರೆ, ಮಕ್ಕೋಟಿ ರೈತರು ನೀರಿಗಾಗಿ ಹಣ ಚಲ್ಲಿದ್ದಾರೆ. ಮಳೆ ಬೆಳೆಯಿಲ್ಲದೆ ನಷ್ಟವಾಗುವ ಸಾಧ್ಯತೆ ಇದೆ. ರಾಜ್ಯಕ್ಕೆ ವರುಣನ ಅವಕೃಪೆಯಿಂದಾಗಿ ಭೀಕರ ಬರಗಾಲ ಎದುರಾಗಬಹುದು ಎಂದು ವಿವರಿಸಿದ್ದಾರೆ.

Devaragudda Karnika prediction: prediction of State political upheaval due to womens interference

ಇನ್ನೂ ಕಲ್ಯಾಣಿ ಕಟ್ಟಿತಲೆ ಎಂದರೆ ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ ಇದೆ. ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ ಇದೆ ಎಂದು ಕಾರ್ಣಿಕ ವಿಶ್ಲೇಷಿಸಿದ್ದಾರೆ. ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯಂದು ಕಾರ್ಣಿಕ ನುಡಿಯಲಾಗುತ್ತದೆ. ಒಂಬತ್ತು ದಿನ ಉಪವಾಸವಿದ್ದು ಗೊರವಯ್ಯಾ ಕಾರ್ಣಿಕ ನುಡಿಯುತ್ತಾರೆ.

ಆಯುಧ ಪೂಜೆಯ ದಿನ ಡೆಂಕಣಮರಡಿಯಲ್ಲಿ ಕಾರ್ಣಿಕ ನುಡಿ ಆಲಿಸಲು ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ನೆರೆದಿದ್ದರು. ಕಾರ್ಣಿಕೋತ್ಸವ ಕೇಳಲು ರಾಜ್ಯದ ವಿವಿಧೆಡೆಯಿಂದ ಭಕ್ತಸಾಗರವೇ ಹರಿದು ಬರುತ್ತದೆ. ಮಾಲತೇಶ ಸ್ವಾಮಿಯೇ ಗೊರವಯ್ಯನಿಂದ ವರ್ಷದ ಭವಿಷ್ಯ ತಿಳಿಸುತ್ತಾನೆಂದು ಉತ್ತರ ಕರ್ನಾಟಕದ ಸಾವಿರಾರು ಭಕ್ತರು ನಂಬುತ್ತಾರೆ.

ಸುಮಾರು 15 ಅಡಿ ಬಿಲ್ಲನ್ನೇರಿದ ಗೊರವಪ್ಪ ಕಾರ್ಣಿಕ ನುಡಿದು ಬಿಲ್ಲಿನಿಂದ ಕೆಳಗೆ ದುಮುಕಿದ್ದಾರೆ. ಗೊರವಪ್ಪನ ದೇಹ ಯಾವ ಕಡೆ ಬೀಳುತ್ತದೆ, ತಲೆ ಯಾವ ಕಡೆ ಬೀಳುತ್ತದೆ ಎಂದು ನೋಡಲಾಗುತ್ತಿದೆ. ಯಾವ ಕಡೆ ತಲೆ ಬೀಳುತ್ತದೆಯೋ ಆ ಕಡೆ ಉತ್ತಮವಾಗಿ ಬೆಳೆ ಮಳೆ ಆಗುತ್ತೆ ಎಂದು ಭಕ್ತರು ನಂಬಿಕೆ ಆಗಿದೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಆಯುಧ ಪೂಜೆ ದಿನ ಇಲ್ಲಿ ಕಾರ್ಣಿಕೋತ್ಸವ ನಡೆದರೆ, ಮರುದಿನ ಪವಾಡಗಳು ನಡೆಯುತ್ತವೆ. ಕಂಚಾವೀರರು ಮುಳ್ಳಿನ ಪವಾಡ, ಸರಪಳಿ ಪವಾಡ, ಗೂಟದ ಪವಾಡ ಸೇರಿದಂತೆ ವಿವಿಧ ಪವಾಡಗಳನ್ನು ಮಾಡುವ ಮೂಲಕ ದೇವರಿಗೆ ನಮನ ಸಲ್ಲಿಸುತ್ತಾರೆ. ದೂರದ ಊರುಗಳಿಂದ ಗೊರವಪ್ಪರು ಪಾದಯಾತ್ರೆ ಮೂಲಕ ದೇವರಗುಡ್ಡಕ್ಕೆ ಆಗಮಿಸಿದ್ದರು. ಭಕ್ತರು ಬಾರಕೋಲ್ ಸೇವೆ ಸೇರಿದಂತೆ ಪಡ್ಡಲಗೆ ಸೇವೆ ಸಲ್ಲಿಸಿದರು.

ಕಳೆದ ಬಾರಿ ನುಡಿದ ಭವಿಷ್ಯ

ಕಳೆದ ಬಾರಿ 'ಗುಡ್ಡಕ್ಕಲೆ ಶಿಶು ಏರಿತಲೇ ಪರಾಕ್' ಎಂದು ದೇವರಗುಡ್ಡದ ಗೊರವಪ್ಪ ನಾಗಪ್ಪ ಉರ್ಮಿ‌ ಬಿಲ್ಲನ್ನೇರಿ ಕಾರ್ಣಿಕವನ್ನು ನುಡಿದಿದ್ದರು. ಅಂದರೆ ಸಣ್ಣ - ಸಣ್ಣ ರೈತರಿಗೂ ಜೀವನದ ಹಾದಿ ಉತ್ತಮ ಆಗಲಿದ್ದು, ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಇನ್ನು ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಕಾರ್ಣಿಕವನ್ನು ದೇವರಗುಡ್ಡ ದೇವಸ್ಥಾನದ ಪ್ರಧಾನ ಅರ್ಚಕರು ಗುರೂಜಿ ಸಂತೋಷ ಭಟ್ ವಿಶ್ಲೇಷಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+