Kodi Mutt Sri: ಶಾಕಿಂಗ್ ಭವಿಷ್ಯ: ರಾಷ್ಟ್ರೀಯ ನಾಯಕರು, ಸನ್ಯಾಸಿ ಸೇರಿ ಮೂವರ ಸಾವಾಗಲಿದೆ: ಕೋಡಿಮಠದ ಶ್ರೀ
ಹುಬ್ಬಳ್ಳಿ, ಫೆಬ್ರವರಿ 23: ದೇಶದ ಭವಿಷ್ಯ, ರಾಜಕಾರಣ ಸೇರಿದಂತೆ ಮುಂದಾಗಲಿರುವ ವಿಷಯಗಳ ಕುರಿತು ಭವಿಷ್ಯ ನುಡಿಯುವ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮಿಜಿಯವರು ಶಾಕಿಂಗ್ ಭವಿಷ್ಯ ನುಡಿಸಿದ್ದಾರೆ. ಇದು ಇಡಿ ದೇಶವೇ ನಿಬ್ಬೆರಗಾಗುವಂತೆ ಮಾಡುವ ಭವಿಷ್ಯ ಎನ್ನಲಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದಿರುವ ಅವರು, ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಇದ್ದು, ಓರ್ವ ಧಾರ್ಮಿಕ ಪ್ರಮುಖನಿಗೆ ಸಾವು ಉಂಟು ಇದೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸುವ ಸಾವಿನ ಕುರಿತು ಅವರು ಭವಿಷ್ಯ ನುಡಿದಿದ್ದಾರೆ. ಇದು ರಾಜಕೀಯಕ್ಕೆ ಸಂಬಂಧಿಸಿದ್ದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ರಾಷ್ಟ್ರ ಮಟ್ಟದ ಇಬ್ಬರು ನಾಯಕರ ಜೀವಕ್ಕೆ ಗಂಡಾಂತರವಿದೆ. ಇವರೊಂದಿಗೆ ಧಾರ್ಮಿಕ ಮುಖ್ಯಸ್ತರು ಆಗಿರುವಂತ ಸನ್ಯಾಸಿಯೊಬ್ಬರ ಜೀವಕ್ಕೆ ಆಪತ್ತು ಎದುರಾಗಲಿದೆ. ಈ ಮೂವರಿಗೆ ಸಾವಿನ ಕಂಟಕ ಇದೆ. ವಿದೇಶಗಳಲ್ಲಿ ಆಗುವ ಕೆಲ ಬೆಳವಣಿಗೆಗಳಿಂದ ಭಾರತಕ್ಕೂ ಯುದ್ಧ ಭೀತಿ ಎದುರಾಗಲಿದೆ ಎಂದು ಹೇಳಿದರು.
ಭವಿಷ್ಯ ರೈತರಿಗೂ ಕಹಿ
ಕರ್ನಾಟಕಕ್ಕೆ ಸಂಬಂಧಿಸಿದಂತೆ ನಾಡಿನಲ್ಲಿ ಮುಂಬರುವ ದಿನಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆ, ಪ್ರಾಣ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಬರಗಾಲದಿಂದ ತತ್ತರಿಸಿದ್ದ ಜನರು ಮುಂದಿನ ದಿನಗಳಲ್ಲಿ ಪ್ರವಾಸ ಎದುರಿಸಲಿದ್ದಾರೆ ಎಂದು ಅವರು ರೈತರಿಗೆ ಕಹಿ ಸುದ್ದಿ ನೀಡಿದ್ದಾರೆ.
ಯುದ್ಧ ಭೀತಿ ಇದೆ,ಅಣುಬಾಂಬು ಬೀಳುವ ಸಾಧ್ಯತೆ ಇದೆ. ಜಾಗತಿಕ ವರ್ಷ ತುಂಬಾ ಅಪಾಯಕಾರಿಯಾಗಿದೆ. ಗೌರಿ ಶಂಕರ ಶಿವಾ.. ಶಿವಾ.. ಎನ್ನುವ ರೀತಿ ಆಗಲಿದ್ದು, ಮನು ಕುಲ ಸಂಕಷ್ಟಕ್ಕೆ ಸಿಲುಕಲಿದೆ. ಮುಂಬರಲಿರುವ ದಿನಗಳು ಕಷ್ಟಕರವಾಗಿವೆ ಎಂದ ಅವರು ತಿಳಿಸಿದ್ದಾರೆ.

ಈ ವರ್ಷ ಸಾಕಷ್ಟು ತೊಂದರೆ
2024 ವರ್ಷ ಬಹಳ ತೊಂದರೆಯಿಂದ ಕೂಡಿದೆ ಕಾಲವಾಗಲಿದೆ. ಕಾಲಕ್ಕೆ ಮಳೆ ಬೆಳೆ ಬರಲ್ಲ. ಅಕಾಲಿಕ ಮಳೆ ಬೆಳೆ ಬರುತ್ತದೆ. ಇದರಿಂದ ಜನರಿಗೆ ತೊಂದರೆ ಆಗಲಿದೆ. ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಸಹ ದೊಡ್ಡ ಪ್ರಮಾಣದ ಅನಾಹುತ ಆಗುತ್ತವೆ. ವಿದೇಶಿದಲ್ಲಿ ಆಗುವ ಅನಾಹುತ ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತದೆ.
ಯುದ್ಧ ವೈಷ್ಯಮ್ಯ ಸಹ ನಮ್ಮಲ್ಲಿ ದುಷ್ಪರಿಣಾಮ ಬೀರಬಹುದು. ಅಲ್ಲಿ ಯುದ್ಧ ಜತೆ ಅಣುಬಾಂಬ್ ಸಹ ಬೀಳಬಹುದು. ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಯುಗಾದಿ ಬಳಿಕ ರಾಜಕೀಯದಲ್ಲಿ ಹಲವು ಏರುಪೇರಾಗಲಿದೆ. ಆ ಬಗ್ಗೆ ಮಾತನಾಡಲು ಆಗಲ್ಲ. ಯುಗಾದಿ ಬಳಿಕ ನಾನು ಅಧ್ಯಯನ ಮಾಡಿ ತಿಳಿಸಬಹುದು ಎಂದರು.
ಆಂತರಿಕ ಮಾಲಿನ್ಯ ಹೆಚ್ಚಾಗಲಿದೆ
ನಾಡಿನಲ್ಲಿ ಒಳ್ಳೆಯ ಆಹಾರ ಗಾಳಿ, ವಾತಾವರಣ ಇಲ್ಲದಾಗಿದೆ. ಮನುಷ್ಯನ ಆರೋಗ್ಯ ಮತ್ತು ಆಯುಷ್ಯ ಕಡಿಮೆ ಆಗುತ್ತಿದೆ. ಇತ್ತ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದೆಬಾಹ್ಯ, ಆಂತರಿಕ ಮಾಲಿನ್ಯ ಹೆಚ್ಚಾಗಲಿದ್ದು, ಬಾಹ್ಯ ಪರಿಸರಕ್ಕೆ ಶುದ್ಧ ಗಾಳಿ, ವಾತಾವರಣ ಬೇಕು ಗಿಡ ಮರ ಬೆಳೆಸಬೇಕು. ಆಂತರಿಕ ನೆಮ್ಮದಿ ಸಹ ಇಲ್ಲದಂತಾಗಿದೆ ಮನುಷ್ಯ ನಾನಾ ದುಶ್ಚಟಕ್ಕೆ ಒಳಗಾಗುತ್ತಿದ್ದಾನೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.












Click it and Unblock the Notifications