Karnataka Rain: ಯುಗಾದಿಗೆ ಕೆಲವೇ ಕ್ಷಣಗಳು ಬಾಕಿ, ಕೋಡಿಮಠ ಶ್ರೀಗಳ ಭಯಾನಕ ಭವಿಷ್ಯ ನಿಜವಾಗಲಿದ್ಯಾ?

ಬೆಂಗಳೂರು, ಏಪ್ರಿಲ್‌, 08: ಕೋಡಿಮಠದ ಶ್ರೀಗಳು ಆಗಾಗ ರಾಜ್ಯ, ದೇಶ, ರಾಜಕೀಯ ನಾಯಕರ ಬಗ್ಗೆ ಭಯಾನಕ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ. ಹಾಗೆಯೇ ಇತ್ತೀಚೆಗಷ್ಟೇ ಅವರು ಯುಗಾದಿ ಬಳಿಕ ಭಾರೀ ಮಳೆ ಸುರಿಯಲಿದೆ ಎಂದು ಭವಿಷ್ಯ ನುಡಿದಿದ್ದರು. ಯುಗಾದಿ ಹಬ್ಬಕ್ಕೆ ಇನ್ನೂ ಕೆಲವೇ ಕ್ಷಣಗಳು ಬಾಕಿಯಿದ್ದು, ಮಳೆಯಾಗುವ ಮೂಲಕ ಅವರ ಈ ಭವಿಷ್ಯ ನಿಜವಾಗಲಿದ್ಯಾ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

ಯುಗಾದಿ ಬಳಿಕ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣಗಳಿವೆ ಜೊತೆಗೆ ಧಾರ್ಮಿಕ ಮುಖಂಡನ ಸಾವು ಕೂಡ ಆಗಲಿದೆ ಭವಿಷ್ಯ ನುಡಿದಿದ್ದರು. ಇನ್ನು ಇದೇ ವೇಳೆ ರಾಜ್ಯ ರಾಜಕೀಯ ಬಗ್ಗೆ ಯುಗಾದಿ ಕಳೆದ ನಂತರ ಹೇಳುತ್ತೇನೆ. ಇನ್ನು ತುಂಬಾ ಸಮಯವಿದೆ ಎಂದಿದ್ದರು.

Karnataka Rain Kodi Mutt Swamiji s this Prediction is Will come true

ಇನ್ನು ಕೆಲವು ದಿನಗಳ ಹಿಂದೆ ಕೋಲಾರದ ಮಾಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು, ರಾಜ್ಯದಲ್ಲಿ ಯುಗಾದಿ ಕಳೆದ ನಂತರ, ಒಳ್ಳೆ ಬೆಳೆ, ಮಳೆಯಾಗುವ ಲಕ್ಷಣಗಳಿವೆ ಎಂದು ಹೇಳುವ ಮೂಲಕ ರೈತರಿಗ ಸಂತಸ ಮೂಡುವಂತೆ ಮಾಡಿದ್ದರು. ಮತ್ತೊಂದೆಡೆ ಇದೀಗ ಯುಗಾದಿಗೆ ಕೆಲವೇ ಕ್ಷಣಗಳು ಮಾತ್ರ ಬಾಕಿಯಿದ್ದು, ಶ್ರೀಗಳು ಹೇಳಿದ ಭವಿಷ್ಯ ನಿಜವಾಗಲಿದ್ಯಾ ಎನ್ನುವ ಪ್ರಶ್ನೆ ಎಲ್ಲಾರನ್ನೂ ಸಾಮಾನ್ಯವಾಗಿ ಮೂಡಿರುತ್ತದೆ.

ಬೆಂಕಿ ಹಾವಳಿ, ನೀರಿನ ಹಾವಳಿ ಹೆಚ್ಚಳ ಆಗುತ್ತದೆ, ಯುದ್ದ‌ ಆಗುತ್ತದೆ. ಅನೇಕ‌ ಸಾವು, ನೋವುಗಳು ಆಗುತ್ತದೆ. ಜಾಗತಿಕ ಮಟ್ಟದಲ್ಲಿ ಮತಾಂದತೆ ಹೆಚ್ಚಾಗುತ್ತದೆ. ಕೆಲವೊಂದು ಕಡೆ ಬಾಂಬ್ ಸ್ಫೋಟ, ಭೂಕಂಪ ಆಗುತ್ತೆದೆ. ಧಾರ್ಮಿಕ ಮುಖಂಡನ ಸಾವು ಕೂಡ ಆಗಲಿದೆ ಎಂದು ಸ್ಫೋಟಕ ಭವಿಷ್ಯವನ್ನು ನುಡಿದಿದ್ದರು.

ಒಟ್ಟಿನಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ತಾಂಡವ ಆಡುತ್ತಿದ್ದು, ಇದರಿಂದ ಜನರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ಯುಗಾದಿ ನಂತರ ಮಳೆಯಾಗಲಿದೆ ಎಂದು ಕೋಡಿಮಠ ಶ್ರೀಗಳು ಭವಿಷ್ಯವನ್ನು ನುಡಿದಿದ್ದರು. ಇದೀಗ ಯುಗಾದಿಗೆ ಕೆಲವೇ ಕ್ಷಣಗಳು ಬಾಕಿಯಿದ್ದು, ಇನ್ನೆರಡು ದಿನಗಳಲ್ಲಿ ಮಳೆಯಾದರೆ ಸ್ವಾಮೀಜಿ ನುಡಿದ ಭವಿಷ್ಯವಾಗಲಿದೆ. ಇನ್ನು ಸ್ವಾಮೀಜಿ ಭವಿಷ್ಯದ ಮೇಲೆ ಜನರು ನಂಬಿಕೆ ಇರಿಸಿದ್ದು, ಮೋಡದ ಕಡೆ ಮುಖ ಮಾಡಿ ಮಳೆ ಬರುವಿಕೆಗಾಗಿ ಕಾದು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+