Kaatera: ಕಾಟೇರ ಸಿನಿಮಾ ದರ್ಶನ್‌ಗೆ ದೊಡ್ಡ ಹೆಸರು ತಂದುಕೊಡುತ್ತೆ! ಗಿಣಿರಾಮ ನುಡಿದ ಭವಿಷ್ಯ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಅದ್ದೂರಿ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 29ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ ಎಂದು ಹೇಳಲಾಗಿದೆ.

ದರ್ಶನ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ ಮುಂಗಡ ಬುಕಿಂಗ್ ಮೂಲಕವೇ ಕಾಟೇರ ಚಿತ್ರದ ಕಲೆಕ್ಷನ್ ₹2 ಕೋಟಿ ದಾಟಿದೆ, ಇನ್ನೂ ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವು ಕಡೆ ಬುಕಿಂಗ್ ಶುರುವಾಗಬೇಕಿದ್ದು, ಮೊದಲ ದಿನ ದಾಖಲೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

 Ginirama Predicts Success for Kaatera Movie, Anticipates a Big Hit

ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹೊಸ ಸಿನಿಮಾ ಬಗ್ಗೆ ಗಿಣಿ ರಾಮನ ಬಳಿ ಭವಿಷ್ಯ ಕೇಳಿದ್ದಾರೆ. ಗಿಣಿರಾಮ ಕಾಟೇರ ಸಿನಿಮಾ ಬಗ್ಗೆ ಭವಿಷ್ಯ ಹೇಳಿದ್ದು, ಈ ಸಿನಿಮಾ ದರ್ಶನ್‌ಗೆ ಮತ್ತಷ್ಟು ದೊಡ್ಡ ಹೆಸರು ತಂದುಕೊಡುತ್ತೆ ಎಂದು ಹೇಳಿದೆ.

ದರ್ಶನ್‌ಗೆ ಪ್ರಶಸ್ತಿ ಬರಬಹುದು!

ಪರಭಾಷಾ ಚಿತ್ರಗಳಿಗೆ ಸಡ್ಡು ಹೊಡೆದು ಈ ಸಿನಿಮಾ ಹೆಚ್ಚಿನ ಕಲೆಕ್ಷನ್ ಮಾಡಲಿದ್ದು, ದರ್ಶನ್ ಅವರ ಅಭಿನಯದ ಈವರೆಗಿನ ಚಿತ್ರಗಳಿಗಿಂತ ದೊಡ್ಡ ಯಶಸ್ಸು ಕಾಣಲಿದೆ. ಈ ಸಿನಿಮಾದಲ್ಲಿ ಅಭಿನಯಕ್ಕಾಗಿ ದರ್ಶನ್ ಅವರಿಗೆ ಪ್ರಶಸ್ತಿ ಕೂಡ ಬರಬಹುದು ಎಂದು ಗಿಣಿಶಾಸ್ತ್ರ ಹೇಳುವವರು ಭವಿಷ್ಯ ನುಡಿದಿದ್ದಾರೆ. ದರ್ಶನ್ ಅವರ ಮೇಲೆ ದೇವರ ಆಶೀರ್ವಾದ ಇದ್ದು, ಕಾಟೇರ ಚಿತ್ರಕ್ಕೆ ಒಳಿತಾಗಲಿದೆ ಎಂದು ಹೇಳಿದ್ದಾರೆ.

ಗಿಣಿಶಾಸ್ತ್ರ, ಭವಿಷ್ಯ, ಜ್ಯೋತಿಷ್ಯ ಏನೇ ಇದ್ದರೂ ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಆದರೆ ಈ ಗಿಣಿರಾಮನ ಭವಿಷ್ಯ ದರ್ಶನ್ ಅಭಿಮಾನಿಗಳಿಗೆ ಮಾತ್ರ ಸಖತ್ ಖುಷಿ ಕೊಟ್ಟಿರುವುದಂತೂ ಸತ್ಯ.

ನಮಗೆ ಎರಡು ಶೋ ಕೊಡಿ!

ಇನ್ನು ಬೆಂಗಳೂರಿನ ಪ್ರಸಿದ್ಧ ಸಿಂಗಲ್ ಸ್ಕ್ರೀನ್ ಚಿತ್ರಮಂದಿರವಾದ 'ವಿಕ್ಟರಿ ಸಿನಿಮಾಸ್' ಕಾಟೇರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಕೊಡಿ ಎಂದು ವಿತರಕರಿಗೆ ಮನವಿ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಕ್ಟರಿ ಸಿನಿಮಾ, ಕಾಟೇರ ಸಿನಿಮಾಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾವು ಈ ಸಿನಿಮಾ ಪ್ರದರ್ಶನ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೂ, ವಿತರಕರಿಗೆ ಬೆಳಗಿನ ಜಾವ 3 ಗಂಟೆ, ಬೆಳಗ್ಗೆ 7 ಗಂಟೆಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿದೆವು, ಆದರೆ ವಿತರಕರು ನಮ್ಮ ಮನವಿಯನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದೆ.

ವಿತರಕರು ನಮ್ಮ ಈ ಮನವಿಯನ್ನು ಪುರಸ್ಕರಿಸಿ ಕೊನೆ ಕ್ಷಣದಲ್ಲಾದರೂ ಫ್ಯಾನ್ಸ್ ಶೋಗಳಿಗೆ ಅವಕಾಶ ಕೊಟ್ಟರೆ ನಾವು ಚಿತ್ರ ಪ್ರದರ್ಶನ ಮಾಡಲು ಖುಷಿಪಡುತ್ತೇವೆ ಎಂದು ಹೇಳಿದೆ.

ಸದ್ಯ ಈ ಚಿತ್ರಮಂದಿರದಲ್ಲಿ ಸಲಾರ್ ಸಿನಿಮಾ ಪ್ರದರ್ಶನವಾಗುತ್ತಿದ್ದು ಒಪ್ಪಂದದ ಕಾರಣ ಕಾಟೇರ ಸಿನಿಮಾ ಪ್ರದರ್ಶನವಾಗುವುದಿಲ್ಲ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+