ಧಾರವಾಡ: ಅತಿಥಿ ಶಿಕ್ಷಕಿ ಅಪಹರಿಸಿದ ಯುವಕ
ಧಾರವಾಡ, ಏಪ್ರಿಲ್ 23: ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬರನ್ನು ಯುವಕ ಅಪಹರಿಸಿದ್ದಾನೆ (ಕಿಡ್ನಾಪ್) ಎಂದು ಶಿಕ್ಷಕಿ ತಂದೆ ದೂರು ನೀಡಿರುವ ಘಟನೆ ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಮಗಳನ್ನು ಯುವಕನೋರ್ವ ಅಪಹರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಸ್ವತಃ ಅತಿಥಿ ಶಿಕ್ಷಕಿ ತಂದೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.

ಗುಡಿಗೇರಿ ತಾಲೂಕಿನ ಕಳಸ ಗ್ರಾಮದ ನಿವಾಸಿಯಾದ ಅತಿಥಿ ಶಿಕ್ಷಕಿಯೆ ಅಪಹರಣಕ್ಕೆ ಒಳಗಾಗಿದ್ದಾರೆ. ಇವರನ್ನು ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಸುಬಾನಿ ಎಂಬ ಯುವಕ ಅಪಹರಿಸಿದ್ದಾನೆಂದು ಆರೋಪಿಸಿ ಶಿಕ್ಷಕಿ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಏಪ್ರಿಲ್ 18 ರಂದು ಕಿಡ್ನಾಪ್
ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಯುವಕನೊಬ್ಬ ಈ ಶಿಕ್ಷಕಿಯನ್ನು ಏಪ್ರಿಲ್ 18 ರಂದು ದುರುದ್ದೇಶದಿಂದಲೇ ಕಿಡ್ನಾಪ್ ಮಾಡಿದ್ದಾನೆ ಎಂದು ಹೇಳಿದ್ದಾರೆ. ಕಳಸ ಗ್ರಾಮದ ಅಖಂಡೇಶ್ವರ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಶಿಕ್ಷಕಿ ಮನೆಯಿಂದ ಹೋರ ಹೋದರು.
ಸದ್ಯ ದೂರು ಪಡೆದಿರುವ ಪೊಲೀಸರು ತಂದೆಯ ಮನವಿ ಮೇರೆಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ಜಾತ್ರೆಗೆ ಹೋದ ಶಿಕ್ಷಕಿ ಎಲ್ಲಿಗೆ ಹೋದರು?. ಇಷ್ಟು ದಿನವಾದರೂ ಮರಳಿ ಮನೆಗೆ ಬಾರದಿದ್ದಕ್ಕೆ ಕಾರವೇನು?, ಆರೋಪಿತ ವ್ಯಕ್ತಿಗೆ ಬಲೆ ಬೀಸಿದ್ದಾರೆ. ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications