ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಸುಳಿಯಲ್ಲಿ ಲಂಕಾ, ಪಾಕ್; ಸಹಾಯಕ್ಕೆ ಚೀನಾ ಯಾಕೆ ಹಿಂದೇಟು?

|
Google Oneindia Kannada News

ನವದೆಹಲಿ, ಏ. 15: ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ಸಾಲದ ಸುಳಿಗೆ ಸಿಕ್ಕು ವಿಲವಿಲ ಒದ್ದಾಡುತ್ತಿವೆ. ತಮ್ಮ ಎಲ್ಲಾ ಕಾಲದ ಮಿತ್ರನೆಂದು ಈ ದೇಶಗಳು ಭಾವಿಸಿದ್ದ ಚೀನಾ ಇದೀಗ ಈ ಎರಡು ದೇಶಗಳಿಗೆ ಸಹಾಯ ಹಸ್ತ ಚಾಚಲು ಹಿಂದೇಟು ಹಾಕುತ್ತಿದೆ. ಮನಬಂದಂತೆ ಸಾಲ ಕೊಟ್ಟು ಸಲಹಿದ್ದ ಈ ದೇಶಗಳಿಗೆ ಕಷ್ಟದ ಪರಿಸ್ಥಿತಿ ಎದುರಾಗಿರುವಾಗ ಚೀನಾ ಕಂಡೂ ಕಾಣದಂತೆ ಮುಗುಮ್ಮಾಗಿ ಕೂತಿದೆ.

ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿ ಧಗಧಗ ಹೊತ್ತಿ ಉರಿಯುತ್ತಿದೆ. ಸಾಲ ಕೊಟ್ಟು ಉಸಿರಾಡಲು ಅನುವು ಮಾಡಿಕೊಡುವಂತೆ ಲಂಕಾ ಮಾಡಿಕೊಳ್ಳುತ್ತಿರುವ ಮನವಿಗಳಿಗೆ ಚೀನಾ ಸ್ಪಂದಿಸುತ್ತಲೇ ಇಲ್ಲ. ಅತ್ತ ಪಾಕಿಸ್ತಾನ ಕೂಡ ಸಾಲಕ್ಕಾಗಿ ಚೀನಾದ ಹಿಂದೆಬಿದ್ದಿದೆ. ಚೀನಾ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವ ಸಾಧ್ಯತೆ ದಟ್ಟವಾಗಿದೆ.

ಚೀನಾ ರಾಜಧಾನಿಯಲ್ಲಿ ಹಸಿವಿನಿಂದ ಜನರು ತತ್ತರ, ಆತ್ಮಹತ್ಯೆಗೂ ಮುಂದು; ಕಾರಣ ಇದುಚೀನಾ ರಾಜಧಾನಿಯಲ್ಲಿ ಹಸಿವಿನಿಂದ ಜನರು ತತ್ತರ, ಆತ್ಮಹತ್ಯೆಗೂ ಮುಂದು; ಕಾರಣ ಇದು

 ಲಂಕಾದ ಸಾಲ ಎಷ್ಟು?

ಲಂಕಾದ ಸಾಲ ಎಷ್ಟು?

ಶ್ರೀಲಂಕಾದ ವಿದೇಶೀ ಸಾಲದ ಮೊತ್ತ 50 ಬಿಲಿಯನ್ ಡಾಲರ್ ಎಂದು ಹೇಳಲಾಗುತ್ತಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು 3.8 ಲಕ್ಷ ಕೋಟಿ ರೂ ಆಗುತ್ತದೆ. ಲಂಕಾದ ಒಟ್ಟು ಜಿಡಿಪಿಯ ಶೇ. 68ರಷ್ಟು ಭಾಗ ಸಾಲವೇ ಇದೆ. ಇದರಲ್ಲಿ ವಿವಿಧ ಹಣಕಾಸು ಮಾರುಕಟ್ಟೆಗಳಿಂದ ಮಾಡಿದ ಸಾಲದ ಪ್ರಮಾಣ ಶೇ. 47ರಷ್ಟಿದೆ. ಎಡಿಬಿ ಮತ್ತು ವಿಶ್ವ ಬ್ಯಾಂಕ್‌ಗಳಿಂದ ಶೇ. 22ರಷ್ಟು ಸಾಲ ಪಡೆಯಲಾಗಿದೆ. ಚೀನಾ ಮತ್ತು ಜಪಾನ್ ದೇಶಗಳಿಂದ ತಲಾ ಶೇ. 10 ಸಾಲ ಮಾಡಿಕೊಂಡಿದೆ. ಭಾರತದಿಂದ ಪಡೆದ ಸಾಲ ಇದರಲ್ಲಿ ಶೇ. 2 ಮಾತ್ರ ಇದೆ.

ವಿದೇಶಗಳಿಂದ ಮಾಡಿಕೊಂಡ ಸಾಲಗಳಿಗೆ ಬಡ್ಡಿ ಕಟ್ಟಲೂ ಲಂಕಾ ಬಳಿ ಹಣ ಇಲ್ಲದಾಗಿದೆ. ಇದನ್ನು ಲಂಕಾ ನೇರವಾಗಿಯೇ ಹೇಳಿಕೊಂಡಿದೆ.

ಈಗ ಶ್ರೀಲಂಕಾ ತನಗೆ 2.5 ಬಿಲಿಯನ್ ಡಾಲರ್, ಅಂದರೆ, 19 ಸಾವಿರ ಕೋಟಿ ರೂ ಸಾಲ ಕೊಡುವಂತೆ ಚೀನಾಗೆ ದುಂಬಾಲು ಬಿದ್ದಿದೆ. ಆದರೆ, ಚೀನಾ ಈ ಮನವಿಗೆ ಕಿವಿಗೊಟ್ಟಿಲ್ಲ.

ಪಾಕಿಸ್ತಾನದ ಬಾಹ್ಯ ಸಾಲ ಎಷ್ಟಿದೆ?

ಪಾಕಿಸ್ತಾನದ ಬಾಹ್ಯ ಸಾಲ ಎಷ್ಟಿದೆ?

ಪಾಕಿಸ್ತಾನದ ವಿದೇಶೀ ಸಾಲದ ಪ್ರಮಾಣ 130 ಬಿಲಿಯನ್ ಡಾಲರ್, ಅಂದರೆ 10 ಲಕ್ಷ ಕೋಟಿ ರೂಪಾಯಿಯಷ್ಟು ಇರುವ ಅಂದಾಜಿದೆ. ವಿವಿಧ ಸೌಕರ್ಯ ಯೋಜನೆಗಳಿಗೆ ಚೀನಾದಿಂದ ಪಾಕಿಸ್ತಾನ ಹೇರಳವಾಗಿ ಸಾಲ ಪಡೆದಿತ್ತು. ಈಗ ಅದನ್ನು ಮರುಪಾವತಿಸಲು ಪರದಾಡುತ್ತಿದೆ. ಹಾಗು ಹೀಗೂ ಕಷ್ಟಪಟ್ಟು ಕಳೆದ ತಿಂಗಳು ಚೀನಾಗೆ 4 ಬಿಲಿಯನ್ ಡಾಲರ್ (30 ಸಾವಿರ ಕೋಟಿ ರೂಪಾಯಿ) ಹಣದ ಸಾಲವನ್ನು ಮರುಪಾವತಿಸಿತ್ತು. ಈಗ ಅದೇ ಹಣವನ್ನು ಸಾಲವಾಗಿ ಮತ್ತೆ ಕೊಡುವಂತೆ ಪಾಕಿಸ್ತಾನ ಮಾಡಿಕೊಳ್ಳುತ್ತಿರುವ ಮನವಿಗೂ ಚೀನಾ ಸರಿಯಾಗಿ ಸ್ಪಂದಿಸುತ್ತಿಲ್ಲ.

ಚೀನಾದ ಹೂಡಿಕೆಯಿಲ್ಲ, ಭಾರತದಿಂದ ಅಧಿಕ ಸಹಾಯ: ಶ್ರೀಲಂಕಾ ಮಾಜಿ ಪ್ರಧಾನಿಚೀನಾದ ಹೂಡಿಕೆಯಿಲ್ಲ, ಭಾರತದಿಂದ ಅಧಿಕ ಸಹಾಯ: ಶ್ರೀಲಂಕಾ ಮಾಜಿ ಪ್ರಧಾನಿ

 ಚೀನಾ ಸಾಲದ ತಂತ್ರ:

ಚೀನಾ ಸಾಲದ ತಂತ್ರ:

ವಿವಿಧ ದೇಶಗಳಿಗೆ ಬೃಹತ್ ಸಾಲಗಳನ್ನ ಕೊಟ್ಟು ಶೂಲಕ್ಕೆ ಸಿಲುಕಿಸಿ ಏನಾದರೂ ಬಹುದೊಡ್ಡ ಲಾಭ ಗಿಟ್ಟಿಸಿಕೊಳ್ಳುವುದು ಚೀನಾದ ತಂತ್ರ ಎಂದು ಹಿಂದಿನಿಂದಲೂ ಅಮೆರಿಕ ಮಾಡುತ್ತಿರುವ ಆರೋಪವಾಗಿದೆ. ಅದರಂತೆ ಶ್ರೀಲಂಕಾದಲ್ಲಿ ಹಂಬನ್‌ತೋಟ ಬಂದರನ್ನು ಚೀನಾಗೆ ಅಡಮಾನವಾಗಿ ಇಡಲಿದೆ. ಮತ್ತು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಗ್ವಾದರ್ ಬಂದರಿನ ಹಿಡಿತ ಚೀನಾದ ಜತೆ ಇದೆ. ಈ ಎರಡು ಜಾಗಗಳು ಭಾರತವನ್ನು ಕಟ್ಟಿಹಾಕಲು ಚೀನಾಗೆ ಅಗತ್ಯ ಇವೆ ಎಂದು ತಜ್ಞರು ಹೇಳುತ್ತಾರೆ.

Sri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್‌ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆSri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್‌ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆ

 ಲಂಕಾ, ಪಾಕಿಸ್ತಾನಕ್ಕೆ ಈಗ ಸಾಲ ಕೊಡಲು ಚೀನಾ ಯಾಕೆ ಹಿಂದೇಟು?

ಲಂಕಾ, ಪಾಕಿಸ್ತಾನಕ್ಕೆ ಈಗ ಸಾಲ ಕೊಡಲು ಚೀನಾ ಯಾಕೆ ಹಿಂದೇಟು?

ಸ್ವತಃ ತಾನೇ ಆರ್ಥಿಕವಾಗಿ ಕಷ್ಟದಲ್ಲಿರುವಾಗ ಚೀನಾ ಹೇಗೆ ಬೇರೆ ದೇಶಗಳಿಗೆ ಯಥೇಚ್ಛವಾಗಿ ಸಾಲ ಕೊಡಲು ಸಾಧ್ಯ ಎಂದು ಕೆಲ ಅರ್ಥಶಾಸ್ತ್ರಜ್ಞರು ಅಚ್ಚರಿ ವ್ಯಕ್ತಪಡಿಸುವುದುಂಟು. ಹೌದು ಇದು ನಿಜ.

ಚೀನಾ ಸರಕಾರಿ ನಿಯಂತ್ರಿತ ಬ್ಯಾಂಕುಗಳು ಬಹಳಷ್ಟು ಸಾಲಗಳನ್ನ ಕೊಟ್ಟಿವೆ. ಇವುಗಳಲ್ಲಿ ಬಹುತೇಕ ಸಾಲಗಳು ಸಕಾಲಕ್ಕೆ ವಾಪಸ್ ಬರುವ ಸಾಧ್ಯತೆ ತೀರಾ ಕಡಿಮೆ ಎಂಬ ಆತಂಕ ಈ ಬ್ಯಾಂಕುಗಳನ್ನ ಕಾಡುತ್ತಿವೆ. ಹಣ ವಾಪಸ್ ಬರಲಿಲ್ಲವೆಂದರೆ ಬ್ಯಾಂಕುಗಳು ದಿವಾಳಿ ಆಗುತ್ತವೆ. ಅದರ ಪರಿಣಾಮ ಚೀನಾದ ಆರ್ಥಿಕತೆ ಎದುರಿಸಬೇಕಾಗುತ್ತದೆ. ಹೀಗಾಗಿ, ಕಳೆದ ಒಂದು ವರ್ಷದಿಂದ ಚೀನಾ ಬೇರೆ ದೇಶಗಳಿಗೆ ಸಾಲ ಕೊಡಲು ತುಸು ಮೀನ ಮೇಷ ಎಣಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪಾಕಿಸ್ತಾನ ಮತ್ತು ಶ್ರೀಲಂಕಾದ ದುರದೃಷ್ಟಕ್ಕೆ ಐಎಂಎಫ್ ಕೂಡ ಸಾಲ ಕೊಡಲು ಹಿಂದೇಟು ಹಾಕುತ್ತಿದೆ. ವಿಶ್ವದ ಬಹುತೇಕ ದೇಶಗಳು ಆರ್ಥಿಕ ಸಂಕಷ್ಟದಲ್ಲಿರುವ ಈ ಹೊತ್ತಲ್ಲಿ ಮುಳುಗುತ್ತಿರುವ ಹಡಗುಗಳೆನಿಸಿರುವ ಲಂಕಾ ಮತ್ತು ಪಾಕಿಸ್ತಾನವನ್ನು ರಕ್ಷಿಸುವವರು ಯಾರು? ಅದಕ್ಕೆ ಹಿರಿಯರು ಹೇಳುತ್ತಾರೆ, ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು. ಇದು ಈ ಎರಡು ದೇಶಗಳ ವಿಚಾರದಲ್ಲಿ ನಿಜವೇ ಆದಂತಿದೆ.

(ಒನ್ಇಂಡಿಯಾ ಸುದ್ದಿ)

English summary
Sri Lanka and Pakistan are in deep economic slump as external debt soars too high. Their all-weather ally China surprisingly has not shown willingness to bail out these 2 South Asian countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X