ಥೇಟ್ ಫೆರಾರಿ ಹೋಲುವ ಶಿಯೋಮಿಯ ಎಸ್‌ಯು7 ಇವಿ ಕಾರು ಬಿಡುಗಡೆ ದಿನಾಂಕ ಘೋಷಣೆ-ವಿಶೇಷತೆ, ದರಗಳ ಮಾಹಿತಿ ತಿಳಿಯಿರಿ
ಇದೀಗ ಪೆಟ್ರೋ, ಡೀಸೆಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು. ಅಲ್ಲದೆ ಮಾರುಕಟ್ಟೆಯಲ್ಲಿ ಇವುಗಳದ್ದೇ ಟ್ರೆಂಡ್ ಕ್ರಿಯೇಟ್ ಆಗಿಬಿಟ್ಟಿದೆ. ಇನ್ನು ಚೀನಾವು ಮೊಟ್ಟ ಮೊದಲ ಬಾರಿಗೆ ಶಿಯೋಮಿ ಎಸ್‌ಯು7 ಮಾಡೆಲ್‌ನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅಲ್ಲದೆ ಪ್ರಾರಂಭದ ದಿನಾಂಕವನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಇದರ ವಿಶೇಷತೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೊಸದಾಗಿ ಮೊಟ್ಟ ಮೊದಲ ಬಾರಿಗೆ ಬಿಡುಗಡೆಯಾಗಲಿರುವ ಈ ಎಲೆಕ್ಟ್ರಿಕ್ ಕಾರು ಥೇಟ್ ಫೆರಾರಿಯನ್ನು ಹೋಲುತ್ತದೆ. ಹೊರಗಡೆಯಿಂದ ನೋಡಿದರೆ ಫೆರಾರಿಯೇ ಬಂದಿದೆ ಎನ್ನುವ ರೀತಿಯಲ್ಲಿ ಇದ್ದು, ಇದು ಎಂಥವನ್ನು ತನ್ನತ್ತ ಸೆಳೆದುಬಿಡುವಂತಿದೆ. ಇನ್ನು ಒಳಗಡೆ ಇನ್ನೇನೆಲ್ಲ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಚೀನಾದ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪನಿ ಶಿಯೋಮಿ ಈಗಾಗಲೇ ಎಲೆಕ್ಟ್ರಿಕ್ಟ್ ಸ್ಕೂಟರ್ ಸೇರಿದಂತೆ ಇನ್ನಿತರ ಎಲೆಕ್ಟ್ರಿಕ್ ಐಟಂಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರರ ಇದೀಗ ಇದೇ ಮೊಟ್ಟ ಮೊದಲ ಬಾರಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇತ್ತೀನ ದಿನಗಳಕ್ಲಿ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚಿನ ಜನ ಒಲವು ತೋರುತ್ತಿದ್ದಾರೆ. ಈ ನಡುವೆಯೇ ಶಿಯೋಮಿ ಎಸ್‌ಯು7 ಎನ್ನುವ ಮೊದಲ ಎಲೆಕ್ಟ್ರಿಕ್ ಕಾರನ್ನು ಇದೇ ಮಾರ್ಚ್ 28ಕ್ಕೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ ಎಂದು ಈ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ ಬೀಜಿಂಗ್ ಮೂಲದ ಶಿಯೋಮಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಪ್ರವೇಶ ನೀಡಿದೆ. ಇನ್ನು ಇತ್ತಚೆಗೆ ಚೀನಾದ ದೊಡ್ಡ ಮಟ್ಟದ ಬ್ರಾಂಡ್‌ಗಳ ವಾಹನಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುವುದರಿಂದ, ಇದರ ನಡುವೆಯೇ ಎಸ್‌ಯು 7 ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿ ನೀಡುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಂತೂ ಇದೆ.
ಶಿಯೋಮಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಕಂಪನಿಯು ಪಟ್ಟಿ ಮಾಡಲಾದ ಹಾಂಗ್ ಕಾಂಗ್‌ನಲ್ಲಿ ಕಂಪನಿಯ ಷೇರುಗಳು ಸುಮಾರು 10ರಷ್ಟು ಏರಿಕೆ ಕಂಡಿವೆ. ಶಿಯೋಮಿ ಸಾಫ್ಟ್ ವೇರ್ ಮತ್ತು ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳನ್ನು ಹೊಂದಿರುವ ಎಸ್‌ಯು 7 ಅನ್ನು ಚೀನಾದ ಆಟೋ ದೈತ್ಯ ಬಿಎಐಸಿ ಉತ್ಪಾದನೆ ಮಾಡಿದೆ ಎಂದು ತಿಳಿದುಬಂದಿದೆ.
800 ಕಿಲೋ ಮೀಟರ್ (500 ಮೈಲಿ) ಡ್ರೈವಿಂಗ್ ರೇಂಜ್ ಹೊಂದಿರುವ ಈ ಕಾರಿಗೆ ಚೀನಾದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಬಿವೈಡಿ ಮತ್ತು ದೇಶೀಯ ಬ್ಯಾಟರಿ ದೈತ್ಯ ಸಿಎಟಿಎಲ್ ಬ್ಯಾಟರಿಗಳನ್ನು ಪೂರೈಕೆ ಮಾಡಿದೆ. ಫೆಬ್ರವರಿ 26ರಂದು ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದಿದ್ದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯೂಸಿ) 2024ರಲ್ಲಿ ಶಿಯೋಮಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್‌ನ ಬಗ್ಗೆ ಮಾಹಿತಿ ಹೊರಹಾಕಿತ್ತು. ಇನ್ನು ಎಸ್‌ಯು 7 ಇವಿ ಕಾರು ಆಕ್ವಾ ಬ್ಲೂ ಬಣ್ಣದಲ್ಲಿದ್ದು, ಮುಂಭಾಗದ ವಿನ್ಯಾಸ ಥೇಟ್ ಫೆರಾರಿ ಹೋಲಿಕೆಯಂತಿದೆ.
* ಈ ಕಾರು 673 ಹೆಚ್‌ಪಿ ಪವರ್ ಮತ್ತು 838 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನಯ ಹೊಂದಿದೆ.
* 299 ಹೆಚ್‌ಪಿ ಮತ್ತು 374 ಹೆಚ್‌ಪಿ ನಡುವೆ ವಿದ್ಯುತ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ.
* ಕಾರುಗಳ ಸ್ಟ್ಯಾಂಡರ್ಡ್ ಎಡಿಷನ್‌ಗಳಿಗೆ ಬಳಸುವ ವಿ6 ಮತ್ತು ವಿಎಸ್6 ಬದಲಿಗೆ ಶಿಯೋಮಿ ಎಲೆಕ್ಟ್ರಿಕ್ ಎಸ್‌ಯು7 ಮ್ಯಾಕ್ಸ್ ಮಾಡಲ್‌ಗೆ ವಿ8ಎಸ್ ಇಂಜಿನ್ ಬಳಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications