Camphor Hair Care: ತಲೆಗೆ ಕೈ ಹಾಕಿ ಪರ ಪರ ಕೆರೆದುಕೊಳ್ಳುವವರು ಹೀಗೆ ಬಳಸಿ ಕರ್ಪೂರ
ಆರೋಗ್ಯಕರ ಮತ್ತು ಹೊಳೆಯುವ ಕೂದಲನ್ನು ಪಡೆಯುವುದು ಪ್ರತಿಯೊಬ್ಬರ ಕನಸು. ಈ ಹಿಂದೆ ಕೆಮಿಕಲ್ಸ್ ಕ್ರೀಮ್ ಹಾಗೂ ಶಾಂಪುಗಳನ್ನು ನೆಚ್ಚಿಕೊಂಡಿದ್ದ ಜನ ಈಗ ಪ್ರಕೃತಿಯತ್ತ ಮುಖ ಮಾಡುತ್ತಿದ್ದಾರೆ. ಹೀಗೆ ನೈಸರ್ಗಿಕವಾಗಿ ಕೂದಲಿಗೆ ಅನೇಕ ಅದ್ಭುತಗಳನ್ನು ಮಾಡುವ ಒಂದು ವಸ್ತುವೆಂದರೆ ಅದು ಕರ್ಪೂರ. ಇದು ವಿಶಿಷ್ಟ ಪರಿಮಳ ಮತ್ತು ಹಲವಾರು ಚಿಕಿತ್ಸಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರಿಂದ ಹಿಡಿದು ಕೂದಲಿಗೆ ತೇವಾಂಶ ಮತ್ತು ಹೊಳಪನ್ನು ನೀಡುವವರೆಗೆ ಕರ್ಪೂರ ಕೆಲಸ ಮಾಡುತ್ತದೆ. ಕರ್ಪೂರ ಕೂದಲಿನ ಆರೋಗ್ಯಕ್ಕೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸಲು ಕರ್ಪೂರವನ್ನು ಹೇಗೆ ಬಳಸಬೇಕೆಂದು ತಿಳಿಯಿರಿ.

*ಕರ್ಪೂರ ಎಣ್ಣೆ ಮಸಾಜ್
ಕರ್ಪೂರವನ್ನು ಕೂದಲಿಗೆ ನೇರವಾಗಿ ಬಳಬೇಡಿ. ಅದನ್ನು ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದು ತುಂಬಾ ಒಳ್ಳೆಯದು. ಕರ್ಪೂರ ಹಾಕಿದ ಎಣ್ಣೆಯಿಂದ ನಿಮ್ಮ ನೆತ್ತಿಗೆ ಮಸಾಜ್ ಮಾಡುವುದರಿಂದ ರಕ್ತದ ಹರಿವು ಹೆಚ್ಚಾಗುತ್ತದೆ. ಕೂದಲಿನ ಬೆಳವಣಿಗೆ ಮತ್ತು ಒಟ್ಟಾರೆ ನೆತ್ತಿಯ ಆರೋಗ್ಯ ಸುಧಾರಿಸುತ್ತದೆ. ಕೆಲವು ಹನಿ ಎಣ್ಣೆಗೆ ಚಿಟಿಕೆ ಕರ್ಪೂರವನ್ನು ಮಿಶ್ರಣ ಮಾಡಿ. ಈ ಆರೋಗ್ಯಕರ ಮಿಶ್ರಣವನ್ನು ನಿಮ್ಮ ನೆತ್ತಿಯ ಮೇಲೆ 30 ನಿಮಿಷಗಳ ಕಾಲ ಬಿಡಿ. ನಂತರ ಸ್ವಲ್ಪ ಬಿಸಿಯಾದ ನೀರಿನಿಂದ ತೊಳೆಯಿರಿ.
*ಕರ್ಪೂರ ಮತ್ತು ತೆಂಗಿನ ಎಣ್ಣೆಯ ಮಿಶ್ರಣ
ಶಕ್ತಿಯುತ ಕೂದಲನ್ನು ಪಡೆಯಲು ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಜನ ಬಳಸುತ್ತಾರೆ. ಇದಕ್ಕೆ ಸ್ವಲ್ಪ ಕರ್ಪೂರ ಪುಡಿ ಬಳಿಸಿದರೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಸ್ವಲ್ಪ ಬೆಚ್ಚಗಾದ ತೆಂಗಿನ ಎಣ್ಣೆಯಲ್ಲಿ ಕರ್ಪೂರದ ಸಣ್ಣ ತುಂಡನ್ನು ಕರಗಿಸಿ. ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದು ಕೂದಲಿನ ಸ್ಥಿತಿಯನ್ನು ಸುಧಾರಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
*ಕರ್ಪೂರ ಮತ್ತು ಅಲೋವೆರಾ ಹೇರ್ ಮಾಸ್ಕ್
ಕೂದಲನ್ನು ಬಲಪಡಿಸುವ ಮತ್ತೊಂದು ಆರೋಗ್ಯಕರ ವಿಧಾನವೆಂದರೆ ಕರ್ಪೂರವನ್ನು ಅಲೋವೆರಾದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಪುನರ್ಯೌವನಗೊಳ್ಳುತ್ತದೆ. ಅಲೋವೆರಾ ಜೆಲ್ ಜೊತೆಗೆ ಸ್ವಲ್ಪ ಕರ್ಪೂರದ ಪುಡಿ ಅಥವಾ ಕೆಲವು ಹನಿ ಎಣ್ಣೆಯನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ನಿಮ್ಮ ಕೂದಲಿಗೆ ಅನ್ವಯಿಸಿದ ನಂತರ ಅದನ್ನು ಅರ್ಧ ಘಂಟೆಯವರೆಗೆ ಬಿಡಿ. ನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈ ಹೇರ್ ಮಾಸ್ಕ್ ಮಂದ ಮತ್ತು ಒಣ ಕೂದಲಿಗೆ ಹೊಳಪು ಹಾಗೂ ತೇವಾಂಶವನ್ನು ನೀಡುತ್ತದೆ.
*ಕರ್ಪೂರ ಮತ್ತು ಮೊಸರು ಹೇರ್ ಪ್ಯಾಕ್
ಕೂದಲ ಬೆಳವಣಿಗೆಗಾಗಿ ಹೇರ್ ಪ್ಯಾಕ್ ಅನ್ನು ಹೀಗೆ ತಯಾರಿಸಿ. ಕರ್ಪೂರದ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಪ್ಯಾಕ್ ಅನ್ನು ಅನ್ವಯಿಸಿ ಮತ್ತು ಅದನ್ನು ತೊಳೆಯುವ ಮೊದಲು 30-45 ನಿಮಿಷಗಳ ಕಾಲ ಬಿಡಿ. ಇದರಿಂದ ಕೂದಲಿನ ರಚನೆಯನ್ನು ಸುಧಾರಿಸಲು ಮತ್ತು ನೈಸರ್ಗಿಕ ಹೊಳಪನ್ನು ಸೃಷ್ಟಿಸಲು ಸಹಾಯವಾಗುತ್ತದೆ.
*ಕರ್ಪೂರ ಮತ್ತು ನಿಂಬೆ
ಕರ್ಪೂರ ಮತ್ತು ನಿಂಬೆ ಕೂದಲಿಗೆ ಸಂಜೀವಿನಿ ಅಂತಲೇ ಹೇಳಬಹುದು. ಒಂದು ಕಪ್ ನಿಂಬೆ ರಸಕ್ಕೆ ಒಂದು ಚಿಟಿಕೆ ಕರ್ಪೂರದ ಪುಡಿಯನ್ನು ಸೇರಿಸಿ. ಶಾಂಪೂವಿನಿಂದ ಕೂದಲು ತೊಳೆದ ನಂತರ ಅಂತಿಮವಾಗಿ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ. ಇದು ಹೆಚ್ಚುವರಿ ಡ್ಯಾಂಡ್ರಫ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲನ್ನು ರಿಫ್ರೆಶ್ ಮಾಡುತ್ತದೆ.












Click it and Unblock the Notifications