ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ರಾಜಧಾನಿಯಲ್ಲಿ ಹಸಿವಿನಿಂದ ಜನರು ತತ್ತರ, ಆತ್ಮಹತ್ಯೆಗೂ ಮುಂದು; ಕಾರಣ ಇದು

|
Google Oneindia Kannada News

ಶಾಂಘೈ, ಏ. 14: ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಯಾಕೆ ಕೋವಿಡ್ ಕೇಸ್ ಹೆಚ್ಚಿಲ್ಲ ಎಂದು ಹಲವರಿಗೆ ಅಚ್ಚರಿ ಎನಿಸಬಹುದು. ಚೀನಾದ ಅಧಿಕೃತ ಅಂಕಿ ಅಂಶದ ಪ್ರಕಾರ ಚೀನಾದಲ್ಲಿ ಇದೂವರೆಗೆ ದಾಖಲಾದ ಕೋವಿಡ್ ಪ್ರಕರಣಗಳ ಸಂಖ್ಯೆ 2 ಲಕ್ಷವನ್ನೂ ಮೀರಿಲ್ಲ. ಭಾರತದಲ್ಲಿ ಒಂದು ಹಂತದಲ್ಲಿ ದಿನವೊಂದಕ್ಕೆ ಲಕ್ಷ ಪ್ರಕರಣಗಳು ದಾಖಲಾಗುತ್ತಿದ್ದವು. ಅದನ್ನ ನೆನಪಿಸಿಕೊಂಡರೆ ಚೀನಾದ ಈ ಪ್ರಕರಣಗಳ ಸಂಖ್ಯೆ ತೀರಾ ನಗಣ್ಯ ಎನಿಸದೇ ಇರದು. ಚೀನಾದಲ್ಲಿ ಸರಿಯಾಗಿ ಅಂಕಿ ಅಂಶಗಳನ್ನ ನೀಡುವುದಿಲ್ಲ. ನಿಜಸ್ಥಿತಿಯನ್ನು ಅಲ್ಲಿನ ಸರಕಾರ ಮುಚ್ಚಿಡುತ್ತದೆ ಎಂಬ ಅಭಿಪ್ರಾಯ ಮೊದಲಿನಿಂದಲೂ ಕೇಳಿಬರುತ್ತಿರುವಂಥದ್ದೇ.

ಎರಡು ವರ್ಷಗಳ ಹಿಂದೆ ಚೀನಾದ ವುಹಾನ್ ನಗರದ ಬೀದಿಗಳಲ್ಲಿ ಸಾರ್ವಜನಿಕವಾಗಿಯೇ ಜನರು ದಿಢೀರ್ ಕುಸಿದು ಬೀಳುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದ್ದವು. ನಂತರ ನೋಡನೋಡುತ್ತಿದ್ದಂತೆಯೇ ಕೋವಿಡ್ ವೈರಸ್ ಇಡೀ ವಿಶ್ವವವನ್ನು ಪಸರಿಸಲು ಆರಂಭಿಸಿತು. ಕೋಟ್ಯಂತರ ಮಂದಿಗೆ ಸೋಂಕು ತಗುಲಿತು. ಆದರೆ, ಚೀನಾದಲ್ಲಿ ಕೆಲವೇ ದಿನಗಳಲ್ಲಿ ಕೋವಿಡ್ ಸೋಂಕು ಹರಡುವುದು ಬಹುತೇಕ ನಿಂತೇ ಹೋಗಿತ್ತು. ಅದು ಸಕಾಲದಲ್ಲಿ ಚೀನಾ ಸರಕಾರ ಲಾಕ್ ಡೌನ್ ಇತ್ಯಾದಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಪರಿಣಾಮ ಎಂದು ಹೇಳಲಾಗುತ್ತಿದೆ. ಆದರೂ ಅಮೆರಿಕ, ಬ್ರಿಟನ್ ಮೊದಲಾದ ದೇಶಗಳ ಅಂಕೆಗೆ ಸಿಲುಕದ ವೈರಸ್ ಚೀನಾದಲ್ಲಿ ಮುರುಟಿ ಕೂತಿದ್ದು ಅನೇಕರಿಗೆ ಅಚ್ಚರಿಯನ್ನಂತೂ ತಂದಿದೆ.

ಭಾರತೀಯರೇ ಕೊರೊನಾವೈರಸ್ ಎಕ್ಸ್ಇ ರೂಪಾಂತರದ ಬಗ್ಗೆ ಭಯವೇ ಬೇಡ: ಎನ್ ಕೆ ಅರೋರಾಭಾರತೀಯರೇ ಕೊರೊನಾವೈರಸ್ ಎಕ್ಸ್ಇ ರೂಪಾಂತರದ ಬಗ್ಗೆ ಭಯವೇ ಬೇಡ: ಎನ್ ಕೆ ಅರೋರಾ

 ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ:

ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ:

ಇದೀಗ ಚೀನಾದಲ್ಲಿ ಮತ್ತೊಂದು ಅಲೆಯ ಕೋವಿಡ್ ಸೋಂಕು ಪಸರಿಸುತ್ತಿದೆ. ರಾಜಧಾನಿ ಶಾಂಘೈ ನಗರ ತತ್ತರಿಸಿಹೋಗಿರುವುದು ತಿಳಿದುಬಂದಿದೆ. ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಹೇರಲಾಗಿದೆ. ಜನರು ಅನ್ನಾಹಾರಕ್ಕಾಗಿ ಪರದಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿವೆ. ಕೆಲ ವರದಿಗಳ ಪ್ರಕಾರ, ಜನರು ಹಸಿವು ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹಲವಿವೆಯಂತೆ. ಹಾಗೆಯೇ, ಜನರು ಆಹಾರಕ್ಕಾಗಿ ಅಲ್ಲಲ್ಲಿ ದೊಂಬಿ ಗಲಾಟೆ ದರೋಡೆ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬ ವರದಿಗಳೂ ಇವೆ. ಆದರೆ, ಈ ವರದಿ ಮತ್ತು ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲಿಸಲು ಸಾಧ್ಯವಾಗಿಲ್ಲ.

ಜನರು ತಮ್ಮ ಅಪಾರ್ಟ್ಮೆಂಟ್‌ನಿಂದ ಹೊರಬರಲಾಗದೇ ಚೀರಾಡುತ್ತಿರುವ ದೃಶ್ಯವನ್ನು ಕೆಲವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶಾಂಘೈನ ವಸತಿ ಪ್ರದೇಶವೊಂದಕ್ಕೆ ಅಲ್ಲಿನ ಅಧಿಕಾರಿಯೊಬ್ಬರು ಭೇಟಿ ನೀಡಿದಾಗ ಜನರು ಸಹಾಯಕ್ಕಾಗಿ ಕಿರುಚಾಡಿದ ದೃಶ್ಯವೂ ಶೇರ್ ಆಗಿದೆ.

 Covid-19 4th wave : ಕರ್ನಾಟಕದಲ್ಲಿ ಕೊರೊನಾವೈರಸ್ 4ನೇ ಅಲೆ ನಿಯಂತ್ರಣಕ್ಕೆ ಏನು ಮಾಡುವುದು? Covid-19 4th wave : ಕರ್ನಾಟಕದಲ್ಲಿ ಕೊರೊನಾವೈರಸ್ 4ನೇ ಅಲೆ ನಿಯಂತ್ರಣಕ್ಕೆ ಏನು ಮಾಡುವುದು?

 ಜೈಲಿಗೆ ಹಾಕುವಂತೆ ಪೊಲೀಸರನ್ನೇ ಕಾಡುವ ದೃಶ್ಯವೂ ಇದೆ

ಜೈಲಿಗೆ ಹಾಕುವಂತೆ ಪೊಲೀಸರನ್ನೇ ಕಾಡುವ ದೃಶ್ಯವೂ ಇದೆ

ಶಾಂಘೈ ನಗರದ ನಿವಾಸಿಯೊಬ್ಬ ಬೇಕಂತಲೇ ಕೋವಿಡ್ ನಿಯಮ ಉಲ್ಲಂಘಿಸಿ, ತನ್ನನ್ನು ಬಂಧಿಸಿ ಜೈಲಿಗೆ ಹಾಕುವಂತೆ ಪೊಲೀಸರನ್ನೇ ಕಾಡುವ ದೃಶ್ಯವೂ ಇದೆ. ಜೈಲಿಗೆ ಹೋದರೆ ಊಟವಾದರೂ ಸಿಗುತ್ತದೆ ಎಂಬುದು ಆ ವ್ಯಕ್ತಿಯ ಇರಾದೆ ಎಂಬುದು ಶೋಚನೀಯ ಸಂಗತಿ. ಕೋವಿಡ್ ಸೋಂಕು ತಗುಲಿದ ವ್ಯಕ್ತಿಯ ಸಾಕು ಪ್ರಾಣಿಯನ್ನು ಕೋವಿಡ್ ಕಾರ್ಯಕರ್ತರು ಹೊಡೆದು ಸಾಯಿಸುವ ದೃಶ್ಯಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಚೀನಾ ಎಷ್ಟೇ ಸಂಪತ್ತು, ಸಮೃದ್ಧಿ ಕಂಡಿರಬಹುದು. ಆದರೆ, ಜನರು ಹಸಿವು ತಪ್ಪಿಸಲು ಆತ್ಮಹತ್ಯೆ ಮಾಡಿಕೊಳ್ಳುವುದು, ಸಾಕುಪ್ರಾಣಿಗಳನ್ನ ಸಾರ್ವಜನಿಕವಾಗಿ ಬಡಿದು ಸಾಯಿಸುತ್ತಿರುವುದು ಎಂಥ ಅಭಿವೃದ್ಧಿ? ಏನೇ ಆಧುನಿಕತೆ ಸಾಧಿಸಿದರೂ ಸರ್ವಾಧಿಕಾರದ ಕ್ರೂರತೆ ಕಡಿಮೆ ಆಗುತ್ತದಾ? ಎಂದು ಹಲವರು ವ್ಯಂಗ್ಯ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಎಲ್ಲಾ ದೃಶ್ಯಗಳು ನೈಜವೇ ಆಗಿದ್ದರೆ ಚೀನಾದಲ್ಲಿ ಆತಂಕಕಾರಿ ಎನಿಸುವ ಸ್ಥಿತಿ ಇರುವುದು ನಿಶ್ಚಿತ. ಆದರೆ, ಈ ವಿಡಿಯೋಗಳ ನೈಜತೆಯನ್ನ ಪರಿಶೀಲಿಸಲು ನಮಗೆ ಸಾಧ್ಯವಾಗಿಲ್ಲ.

 ಗಂಭೀರ ಎನಿಸುವ ಪ್ರಕರಣಗಳು ಕೇವಲ 78 ಮಾತ್ರವಂತೆ

ಗಂಭೀರ ಎನಿಸುವ ಪ್ರಕರಣಗಳು ಕೇವಲ 78 ಮಾತ್ರವಂತೆ

ಅದೇನೇ ಇದ್ದರೂ ಚೀನಾ ಸರಕಾರ ಮುಂದಿಡುತ್ತಿರುವ ಕೋವಿಡ್ ಸೋಂಕಿನ ಅಂಕಿ-ಅಂಶವನ್ನು ನಂಬುವುದು ಕಷ್ಟವೇ ಸರಿ. ವಿಶ್ವಾದ್ಯಂತ 50 ಕೋಟಿಗೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆದರೆ, ಚೀನಾದಲ್ಲಿ ಬೆಳಕಿಗೆ ಬಂದಿರುವುದು ಕೇವಲ 1.71 ಲಕ್ಷ ಮಾತ್ರ. ಈಗ ಸದ್ಯ ಅಲ್ಲಿ ಸಕ್ರಿಯ ಪ್ರಕರಣಗಳು 22,822 ಅಷ್ಟು ಇವೆ. ಅವುಗಳ ಪೈಕಿ ಗಂಭೀರ ಎನಿಸುವ ಪ್ರಕರಣಗಳು ಕೇವಲ 78 ಮಾತ್ರವಂತೆ. ಇದೂ ಕೂಡ ಅಚ್ಚರಿ ಮೂಡಿಸುತ್ತದೆ.

 ಇಷ್ಟು ಕಡಿಮೆ ಪ್ರಕರಣಗಳು ಇರಲು ಹೇಗೆ ಸಾಧ್ಯ

ಇಷ್ಟು ಕಡಿಮೆ ಪ್ರಕರಣಗಳು ಇರಲು ಹೇಗೆ ಸಾಧ್ಯ

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಇಷ್ಟು ಕಡಿಮೆ ಪ್ರಕರಣಗಳು ಇರಲು ಹೇಗೆ ಸಾಧ್ಯ ಎಂದು ನಿಮ್ಮಂತೆ ನಮ್ಮಂತೆ ಹಲವರಿಗೆ ಅಚ್ಚರಿಯಂತೂ ಇದೆ. ಕೆಲ ವರದಿಗಳ ಪ್ರಕಾರ, ಕೋವಿಡ್ ಪ್ರಕರಣಗಳನ್ನ ಅಧಿಕೃತವಾಗಿ ಗುರುತಿಸುವ ಮಾನದಂಡ ಚೀನಾದಲ್ಲಿ ಭಿನ್ನವಾಗಿದೆಯಂತೆ. ಅಂದರೆ ಒಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದರೂ ಆತನಿಗೆ ನಿರ್ದಿಷ್ಟ ರೋಗಲಕ್ಷಣಗಳು ಇಲ್ಲದಿದ್ದರೆ ಅದನ್ನ ಪಾಸಿಟಿವ್ ಕೇಸ್ ಎಂದು ಪರಿಗಣಿಸುವುದಿಲ್ಲ. ಹೀಗಾಗಿ, ಚೀನಾದಲ್ಲಿ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಎನ್ನಲಾಗುತ್ತಿದೆ.

ಉದಾಹರಣೆಗೆ, ಶಾಂಘೈನಲ್ಲಿ ಕಳೆದ ಒಂದು ತಿಂಗಳಲ್ಲಿ 2,29,742 ಮಂದಿ ಕೋವಿಡ್ ಪಾಸಿಟಿವ್ ಹೊಂದಿದ್ದರು. ಆದರೆ, ನಗರದ ಆರೋಗ್ಯ ಸಿಬ್ಬಂದಿ 8322 ಪ್ರಕರಣಗಳು ಎಂದು ಲೆಕ್ಕ ಕೊಟ್ಟಿದ್ದಾರೆ. ಯಾಕೆಂದರೆ ಉಳಿದ ಪ್ರಕರಣಗಳು ರೋಗಲಕ್ಷಣಗಳು ಇಲ್ಲದವರದ್ದಾಗಿವೆ. ಎಸಿಂಪ್ಟಮ್ಯಾಟಿಕ್ ಕೇಸ್‌ಗಳನ್ನ ಅಧಿಕೃತ ಲೆಕ್ಕಕ್ಕೆ ತೆಗೆದುಕೊಳ್ಳಬಾರದು ಎಂದು ಚೀನಾ ಸರಕಾರ ಫರ್ಮಾನು ಹೊರಡಿಸಿದೆ. ಅಂದರೆ ಶಾಂಘೈ ನಗರದಲ್ಲಿ ಪಾಸಿಟಿವ್ ಬಂದ ಪ್ರಕರಣಗಳಲ್ಲಿ ಶೆ. 95ರಷ್ಟು ಕೇಸ್‌ಗಳು ಎಸಿಂಪ್ಟಮ್ಯಾಟಿಕ್ ಆಗಿವೆ.

 Sri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್‌ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆ Sri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್‌ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆ

 ಚೀನಾ ಮುಂದಿಟ್ಟಿದ ಅಂಕಿ-ಅಂಶದ ಬಗೆಗಿನ ಸಂಶಯ

ಚೀನಾ ಮುಂದಿಟ್ಟಿದ ಅಂಕಿ-ಅಂಶದ ಬಗೆಗಿನ ಸಂಶಯ

ಆದರೆ, ಇಷ್ಟೊಂದು ಪ್ರಮಾಣದ ಎಸಿಂಪ್ಟಮ್ಯಾಟಿಕ್ ಕೇಸ್‌ಗಳು ಇರಲು ಹೇಗೆ ಸಾದ್ಯ ಎಂದು ತಜ್ಞರು ಅಚ್ಚರಿ ವ್ಯಕ್ತಪಡಿಸುತ್ತಾರೆ. ವಿಶ್ವದ ಇತರೆಡೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಪೈಕಿ ರೋಗಲಕ್ಷಣ ಇಲ್ಲದಿರುವ ಪ್ರಕರಣ ಸಾಮಾನ್ಯವಾಗಿ ಶೇ. 40-50ರ ಆಸುಪಾಸಿನಲ್ಲಿ ಇರುತ್ತವೆ. ಶೇ. 95ರಷ್ಟು ಎಸಿಂಪ್ಟಮ್ಯಾಟಿಕ್ ಕೇಸ್ ಎಂದು ಹೇಳಿದರೆ ನಂಬುವುದು ಕಷ್ಟ ಎಂದು ಆಸ್ಟ್ರೇಲಿಯಾದ ಬರ್ನೆಟ್ ಇನ್ಸ್ಟಿಟ್ಯೂಟ್‌ನ ತಜ್ಞ ಡಾ. ಮೈಕೇಲ್ ಟೂಲೆ ಹೇಳುತ್ತಾರೆ.

ಎರಡು ವರ್ಷ ಹಿಂದೆ ಚೀನಾ ಮುಂದಿಟ್ಟಿದ ಅಂಕಿ-ಅಂಶದ ಬಗೆಗಿನ ಸಂಶಯ ಇನ್ನಷ್ಟು ದಟ್ಟವಾಗುತ್ತದೆ. 2020ರಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರ ಪ್ರಕಾರ, ವುಹಾನ್ ನಗರದಲ್ಲಿ ಶೇ. 4ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯಗಳು ಪತ್ತೆಯಾಗಿದ್ದವಂತೆ. ಅಲ್ಲಿ 5 ಲಕ್ಷದಷ್ಟು ಮಂದಿಗಾದರೂ ಕೋವಿಡ್ ಸೋಂಕು ತಗುಲಿತ್ತು ಎಂದು ಈ ವರದಿ ಹೇಳುತ್ತದೆ.

Recommended Video

ದಲಿತರನ್ನು ದೇವಸ್ಥಾನದಲ್ಲಿ ಈಗ್ಲೂ ಹೇಗೆ ನಡೆಸಿಕೊಳ್ತಾರೆ ಅನ್ನೋದನ್ನ ಹೇಳಿದ ಡಾ.ಜಿ ಪರಮೇಶ್ವರ್ | Oneindia Kannada
 ಜಗತ್ತು ತತ್ತರ:

ಜಗತ್ತು ತತ್ತರ:

ಅಮೆರಿಕ, ಫ್ರಾನ್ಸ್, ಜರ್ಮನಿ, ಬ್ರಿಟನ್, ಇಟಲಿ, ವಿಯೆಟ್ನಾಮ್ ಮೊದಲಾದ ದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣಗಳು ಇವೆ. ಭಾರತದಲ್ಲಿ ಈಗ ಎಕ್ಸ್‌ಇ ರೂಪಾಂತರಿ ವೈರಸ್‌ನ ಆರ್ಭಟ ಶುರುವಾಗುತ್ತಿದೆ. ಡೆಲ್ಟಾ ವೈರಸ್ ಅಲೆ ಭಾರತವನ್ನು ನುಜ್ಜುಗುಜ್ಜಾಗಿಸಿತ್ತು. ಒಮಿಕ್ರಾನ್‌ನಿಂದ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿತ್ತು. ಈ ಎಕ್ಸ್‌ಇ ವೈರಸ್ ಇನ್ನಷ್ಟು ವೇಗದಲ್ಲಿ ಹರಡಬಹುದು ಎಂದು ತಜ್ಞರು ಹೇಳುತ್ತಾರೆ. (ಒನ್ಇಂಡಿಯಾ ಸುದ್ದಿ)

English summary
Shanghai city of China in strict lockdown due to Covid outbreak. People are reportedly scrambling for food and some are attempting suicide due to hunger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X