China Earthquake: ಚೀನಾದಲ್ಲಿ ನಡುರಾತ್ರಿ ನಡಗಿತು ಭೂಮಿ: ಅಯ್ಯಯ್ಯೋ.... ಕಾಪಾಡಿ ಎನ್ನುತ್ತಾ ಮನೆಯಿಂದ ಹೊರಬಂದ ಜನ...

ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ದೆಹಲಿಯ ನಾನಾ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.

"ಭೂಕಂಪನ ತೀವ್ರತೆ:7.2, ದಿನಾಂಕ: 22-01-2024, ಸಮಯ: 23:39:11 IST, ಲ್ಯಾಟ್: 40.96 & ಉದ್ದ: 78.30, ಆಳ: 80 ಕಿಮೀ , ಸ್ಥಳ: ದಕ್ಷಿಣ ಕ್ಸಿನ್‌ಜಿಯಾಂಗ್, ಚೀನಾ," ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ 'X'ನಲ್ಲಿ ಮಾಹಿತಿ ಹಂಚಿಕೊಂಡಿದೆ.

Midnight earthquake in China: Tremors in Delhi too!

ಇದರಿಂದಾಗಿ ಹಲವಾರು ಜನರಿಗೆ ಗಾಯಗಳಾಗಿವೆ. ಜೊತೆಗೆ ಕ್ಸಿನ್‌ಜಿಯಾಂಗ್ ಗಡಿಯಲ್ಲಿ ಕೆಲವು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ನಂತರ ಕ್ಸಿನ್‌ಜಿಯಾಂಗ್ ರೈಲ್ವೆ ಇಲಾಖೆಯು ತಕ್ಷಣವೇ 27 ರೈಲುಗಳ ಸಂಚಾರವನ್ನು ನಿಲ್ಲಿಸಿದೆ.

ಚೀನಾದ ಮಾಧ್ಯಮಗಳ ಪ್ರಕಾರ, ಚೀನಾದ ವಾಯುವ್ಯ ಪ್ರದೇಶದಲ್ಲಿ ವೂಶಿ ಕೌಂಟಿಯ ಕೇಂದ್ರಬಿಂದುವಿನ ಬಳಿ ಹೆಚ್ಚಿನ ಹಾನಿ ದಾಖಲಾಗಿದೆ. ಭೂಕಂಪದ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿ 5.3 ತೀವ್ರತೆಯ ಕಂಪನ ಸಂಭವಿಸಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ.

ಚೀನಾದ ಅಧಿಕಾರಿಗಳು ತುರ್ತು ಪ್ರತಿಕ್ರಿಯೆ ಸೇವೆಗಳನ್ನು ಸಕ್ರಿಯಗೊಳಿಸಿದ್ದಾರೆ. ಹಲವಾರು ಇಲಾಖೆಗಳು ಪರಿಹಾರ ಪ್ರಯತ್ನಗಳನ್ನು ಸಂಯೋಜಿಸಿವೆ. ನಿರಾಶ್ರಿತರಿಗೆ ಟೆಂಟ್‌ಗಳು, ವಾಸ್ತವ್ಯ ಸ್ಥಳ, ಹೊದಿಕೆಗಳು, ಮಡಿಚುವ ಹಾಸಿಗೆಗಳು ಮತ್ತು ತಾಪನ ಒಲೆಗಳನ್ನು ಒದಗಿಸುತ್ತಿವೆ ಎಂದು ಚೀನಾ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನೂ ಕಝಾಕಿಸ್ತಾನ್‌ನಲ್ಲಿ ತುರ್ತು ಸಚಿವಾಲಯವು ಅದೇ ಭೂಕಂಪವನ್ನು 6.7 ರ ತೀವ್ರತೆಯಲ್ಲಿತ್ತು ಎಂದು ಹೇಳಿದೆ. ಇದರಿಂದಾಗಿ ಜನ ಭಯಭೀತರಾಗಿದ್ದಾರೆ. ಕಝಾಕಿಸ್ತಾನ್‌ನ ಅತಿದೊಡ್ಡ ನಗರವಾದ ಅಲ್ಮಾಟಿಯ ನಿವಾಸಿಗಳು ಭೂಕಂಪನಕ್ಕೆ ಹೆದರಿ ತಮ್ಮ ಮನೆಗಳಿಂದ ಓಡಿ ಹೊರಬಂದಿದ್ದಾರೆ. ಶೀತ ವಾತಾವರಣದ ಹೊರತಾಗಿಯೂ ಮನೆಯಿಂದ ಹೊರಗೆ ಜಮಾಯಿಸಿ ರಸ್ತೆಗಳ ಮೇಲೆ ಮಲಗಿದ್ದಾರೆ.

ಕಝಾಕಿಸ್ತಾನ್‌ನಲ್ಲಿ ಭೂಕಂಪನ ಸಂಭವಿಸಿ ಸುಮಾರು 30 ನಿಮಿಷಗಳ ನಂತರ ಕಂಪನಗಳು ಉಜ್ಬೇಕಿಸ್ತಾನ್‌ನಲ್ಲಿಯೂ ಸಂಭವಿಸಿದವು. ಕಝಾಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಿಂದ ಯಾವುದೇ ಗಾಯಗಳು ಅಥವಾ ಜೀವ ಹಾನಿಗಳ ಬಗ್ಗೆ ವರದಿಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+