ಅಕಸ್ಮಾತ್ ಈ ಯುದ್ಧ ನಡೆದರೆ ಭಾರತದ ಆರ್ಥಿಕತೆಗಿಂತಲೂ 3 ಪಟ್ಟು ಸಂಪತ್ತು ಸರ್ವನಾಶ!
ಯುದ್ಧಗಳು ಮನುಷ್ಯನಿಗೆ ಅನಗತ್ಯ, ಯುದ್ಧಗಳಿಂದಲೇ ಜಗತ್ತಿನ ನಾಶವಾಗುತ್ತಿದೆ ಅಂತಾ ಅದೆಷ್ಟೇ ಕಿವಿಮಾತು ಹೇಳಿದ್ರೂ ಮನುಷ್ಯ ಕೇಳುತ್ತಿಲ್ಲ. ಈ ನಡುವೆ ಜಗತ್ತಿನಾದ್ಯಂತ ಈಗಾಗಲೇ 2 ಘೋರ ಯುದ್ಧಗಳು ಆರಂಭವಾಗಿವೆ. ಪರಿಸ್ಥಿತಿ ಹೀಗಿದ್ದಾಗ, ಮತ್ತೊಂದು ಯುದ್ಧ ಈಗ ಏಷ್ಯಾದಲ್ಲೇ ನಡೆಯಲು ಕ್ಷಣಗಣನೆ ಆರಂಭವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಒಂದು ಯುದ್ಧ ಶುರುವಾದರೆ 3ನೇ ಮಹಾಯುದ್ಧಕ್ಕೆ ರಣಕಹಳೆ ಫಿಕ್ಸ್ ಎಂಬ ಆರೋಪವು ಈಗ ತಲ್ಲಣ ಸೃಷ್ಟಿ ಮಾಡಿದೆ.
ಜಗತ್ತಿನಲ್ಲಿ 2 ಕಡೆ ಭೀಕರ ಯುದ್ಧಗಳು ಶುರುವಾಗಿವೆ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ಅಬ್ಬರಿಸುವಾಗ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವೆ ಯುದ್ಧ ಘೋರವಾಗುತ್ತಿದೆ. ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವೆ ನಡೆಯುತ್ತಿರುವ ಭೀಕರ ಕಾಳಗದಲ್ಲಿ 23,000 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಜನ ಸೇರಿ ಇಸ್ರೇಲ್ ಕಡೆಯೂ 1,200 ಜನ ಮೃತಪಟ್ಟಿದ್ದಾರೆ. ಗಾಜಾದಲ್ಲಿ ಅಕ್ಷರಶಃ ನರಕವೇ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ತೈವಾನ್ VS ಚೀನಾ ಮಧ್ಯೆ ಕೂಡ ಯುದ್ಧ ನಡೆಯುತ್ತದೆ ಎನ್ನುವ ಆರೋಪ ಕೇಳಿಬಂದಿದೆ. ಅಕಸ್ಮಾತ್ ಈ ಯುದ್ಧವು ನಡೆದೇ ಹೋದರೆ ಪರಿಸ್ಥಿತಿ ಏನಾಗುತ್ತೆ ಗೊತ್ತಾ?

10 ಟ್ರಿಲಿಯನ್ ಡಾಲರ್ ಢಮಾರ್!
ಹೌದು, ಅಕಸ್ಮಾತ್ ಚೀನಾ ಏನಾದರೂ ತೈವಾನ್ ವಿರುದ್ಧ ಯುದ್ಧ ಘೋಷಣೆ ಮಾಡಿದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಆಗ ಅನಿವಾರ್ಯ ಪರಿಸ್ಥಿತಿಯಲ್ಲಿ ಅಮೆರಿಕ ಕೂಡ ಮಧ್ಯ ಪ್ರವೇಶ ಮಾಡಬೇಕಾಗುತ್ತೆ. ತೈವಾನ್ ಪರವಾಗಿ ಅಮೆರಿಕ ನಿಂತರೆ, ಇನ್ನೊಂದು ಕಡೆ ಈ ವಿಚಾರದಲ್ಲಿ ಚೀನಾಗೆ ರಷ್ಯಾ ಬೆಂಬಲ ನೀಡಲಿದೆ. ಈ ಮೂಲಕ ಜಗತ್ತು ಎರಡು ಪೀಸ್ & ಪೀಸ್ ಆಗಲಿದೆ. ಹೀಗಾಗಿ ತೈವಾನ್ ಮತ್ತು ಚೀನಾ ನಡುವಿನ ಯುದ್ಧ ಜಗತ್ತಿಗೆ ಬರೋಬ್ಬರಿ 10 ಟ್ರಿಲಿಯನ್ ಡಾಲರ್ ನಷ್ಟ ಉಂಟುಮಾಡಬಹುದು ಎಂದು ವರದಿಯೊಂದು ಹೇಳಿದೆ.
ತೈವಾನ್ ಪರಿಸ್ಥಿತಿ ಅತಿಸೂಕ್ಷ್ಮ?
ದ್ವೀಪರಾಷ್ಟ್ರ ತೈವಾನ್ ಬಗ್ಗೆ ಅಮೆರಿಕ ಅಥವಾ ಅಮೆರಿಕ ಸ್ನೇಹಿತ ದೇಶಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ, ಚೀನಾ ಯಾವಾಗಲೂ ವಿರೋಧ ವ್ಯಕ್ತಪಡಿಸಿದೆ. ಇದರ ಜೊತೆ ತೈವಾನ್ ವಿಚಾರ ಪ್ರಸ್ತಾಪ ಮಾಡುತ್ತಾ ಚೀನಾ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವ ಆರೋಪ ಕೂಡ ಮಾಡುತ್ತಿದೆ ಚೀನಾ. ಇದೇ ಹೊತ್ತಲ್ಲಿ ತೈವಾನ್ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅಮೆರಿಕ & ಚೀನಾ ನಡುವೆ ತೈವಾನ್ ವಿಚಾರದಲ್ಲಿ ಕಿರಿಕ್ ಶುರುವಾಗಿದೆ. ಅಲ್ಲದೆ ತೈವಾನ್ ಮತ್ತು ಚೀನಾ ನಡುವೆ ಯುದ್ಧ ನಡೆಯುತ್ತೆ ಎನ್ನುವ ವಾತಾವರಣವನ್ನ ಭಯದಿಂದಲೇ ಗಮನಿಸಲಾಗುತ್ತಿದೆ.

ಒಟ್ನಲ್ಲಿ ಏನೇ ಆಗಲಿ ಯುದ್ಧ ಮಾತ್ರ ನಡೆಯಬಾರದು ಎನ್ನುವುದು ಪ್ರತಿಯೊಂದು ದೇಶ & ಆ ರಾಷ್ಟ್ರದ ಜನರ ಬಯಕೆ. ಅದ್ರಲ್ಲೂ ಭಾರತ ಈ ವಿಚಾರದಲ್ಲಿ ಯುದ್ಧದ ವಿರುದ್ಧ ತನ್ನ ನಿಲುವನ್ನ ಹೊಂದಿದೆ. ಹೀಗಿದ್ದರೂ ತೈವಾನ್ & ಚೀನಾ ನಡುವೆ ಕಿರಿಕ್ ಜೋರಾಗುತ್ತಿದೆ. ಹೀಗಾಗಿ ಏಷ್ಯಾದಲ್ಲಿ ಕೂಡ ಹೊಸ ಯುದ್ಧ ಶುರುವಾಗುವ ಭಯ ಆವರಿಸುತ್ತಿದೆ.












Click it and Unblock the Notifications