Namma Metro: ಹೇಗಿದೆ ಗೊತ್ತಾ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು: ವಿಡಿಯೋ ನೋಡಿ
ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಕೆಲವೇ ತಿಂಗಳಲ್ಲಿ ಟ್ರಾಕ್‌ಗೆ ಇಳಿಯಲಿದೆ. ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಈ ಚಾಲಕ ರಹಿತ ರೈಲು ಸಂಚಾರ ಮಾಡಲಿದ್ದು, ಈಗಾಗಲೇ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ. ಚೀನಾದಿಂದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು ಭಾರತಕ್ಕೆ ಬರುತ್ತಿದೆ.
ಚೀನಾದ ಸಿ.ಆರ್.ಆರ್.ಸಿ ನಿರ್ಮಿಸಿರುವ ಈ ರೈಲು ಹಡಗಿನ ಮೂಲಕ ಚೆನ್ನೈ ಬಂದರಿಗೆ ಆಗಮಿಸಲಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ. ಚೀನಾದಿಂದ ನಮ್ಮ ಮೆಟ್ರೋ ರೈಲನ್ನು ಪ್ಯಾಕ್ ಮಾಡಿಗೆ ಹಡಗಿಗೆ ವರ್ಗಾಯಿಸುವ ವಿಡಿಯೋವನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

ನಮ್ಮ ಮೆಟ್ರೋ ಚಾಲಕ ರಹಿತ ರೈಲಿನ ಫೋಟೊಗಳು ಈ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಚಾಲಕ ರಹಿತ ರೈಲಿನ ವಿಡಿಯೋ ಬಿಡುಗಡೆ ಮಾಡಿದೆ.
CRRC #NammaMetro coaches(prototype) dispatched to #Bengaluru (via Chennai port)#YellowLine pic.twitter.com/9O9VfD8m1r
— Karnataka Development Index (@IndexKarnataka) January 27, 2024
ಆರು ಬೋಗಿಗಳ ರೈಲುಗಳನ್ನು ಚೀನಾ ರೋಲಿಂಗ್ ರೈಲ್ವೇ ಸ್ಟಾಕ್ ಕಾರ್ಪೊರೇಷನ್ (CRRSCC) ತಯಾರಿಸುತ್ತದೆ. ಯೋಜಿತವಾಗಿರುವ 204 ಬೋಗಿಗಳಲ್ಲಿ ಕೇವಲ 12 ಬೋಗಿಗಳು ಚೀನಾದಿಂದ ಬರಲಿದ್ದು, ಉಳಿದವುಗಳನ್ನು ಟಿಟಾಗರ್ ರೈಲ್ ಮೂಲಕ ಭಾರತದಲ್ಲಿ ತಯಾರಿಸಲಾಗುವುದು.
ಹಳದಿ ಮಾರ್ಗದ ಕಾಮಗಾರಿ ಅಪ್‌ಡೇಟ್
ನಮ್ಮ ಮೆಟ್ರೋ ಹಳದಿ ಮಾರ್ಗದ ನಿರ್ಮಾಣವು 2017 ರಲ್ಲಿ ಪ್ರಾರಂಭವಾಯಿತು ಸದ್ಯ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಈ ಮಾರ್ಗ ಕಾರ್ಯಾಚರಣೆ ಆರಂಭಿಸಿದ ಬಳಿಕ, ನಗರದ ಟ್ರಾಫಿಕ್ ಸಮಸ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವಿನ ಪ್ರಯಾಣದ ಸಮಯ ಉಳಿಸುತ್ತದೆ.
ಆರ್ ವಿ ರಸ್ತೆ ಹಳದಿ ಮಾರ್ಗದ ಮೊದಲ ನಿಲ್ದಾಣವಾಗಿದೆ. ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಹೆಚ್‌ಎಸ್‌ಆರ್ ಲೇಔಟ್ ಮತ್ತು ಆಕ್ಸ್‌ಫರ್ಡ್ ಕಾಲೇಜುಗಳಂತಹ ನಿಲ್ದಾಣಗಳ ಮೂಲಕ ಹಾದುಹೋಗುತ್ತದೆ. ಈ ನಿಲ್ದಾಣಗಳು ವಾಣಿಜ್ಯ ಮತ್ತು ವಸತಿ ಪ್ರದೇಶಗಳಿಗೆ ಸಮೀಪದಲ್ಲಿವೆ. ಹೀಗಾಗಿ, ಇದು ಕೆಲಸದ ಸ್ಥಳಗಳು, ಮಾರುಕಟ್ಟೆಗಳು ಮತ್ತು ಇತರ ಸೌಕರ್ಯಗಳಿಗೆ ಸುಲಭವಾಗಿ ಪ್ರವೇಶ ನೀಡುತ್ತದೆ.
ಎಲೆಕ್ಟ್ರಾನಿಕ್ಸ್ ಸಿಟಿ 1, ಎಲೆಕ್ಟ್ರಾನಿಕ್ಸ್ ಸಿಟಿ 2 ಮತ್ತು ಹೆಬ್ಬಗೋಡಿ ನಿಲ್ದಾಣಗಳಿವೆ. ಈ ನಿಲ್ದಾಣಗಳು ಪ್ರಮುಖ ಐಟಿ ಕಂಪನಿಗಳಾದ ವಿಪ್ರೋ, ಟೆಕ್ ಮಹಿಂದ್ರ, ಇನ್ಫೋಸಿಸ್‌ನಂತಹ ಕಂಪನಿಗಳ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಈ ಮಾರ್ಗದ ಕೊನೆಯ ನಿಲ್ದಾಣಗಳು ಬೆಂಗಳೂರಿನ ದಕ್ಷಿಣ ಭಾಗದಲ್ಲಿವೆ. ಈ ಮಾರ್ಗವು ಬೊಮ್ಮಸಂದ್ರ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ಇದು ಕೈಗಾರಿಕಾ ಪ್ರದೇಶಗಳಿಗೆ ಸಮೀಪದಲ್ಲಿದೆ ಮತ್ತು ಆನೇಕಲ್ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕವನ್ನು ಒದಗಿಸುತ್ತದೆ.












Click it and Unblock the Notifications