ತೈವಾನ್ ವಿಚಾರದಲ್ಲಿ ಚೀನಾ ಸಿಟ್ಟು ಕಡಿಮೆ ಆಗಿಲ್ಲ!
ತೈವಾನ್ ವಿಚಾರದಲ್ಲಿ ದಿನ ದಿನಕ್ಕೂ ಪರಿಸ್ಥಿತಿ ಗಂಭೀರ ಆಗುತ್ತಿದೆ. ತೈವಾನ್ ವಿಚಾರದಲ್ಲಿ ಯಾರೇ ಮಾತನಾಡಿದರೂ, ಮಧ್ಯಪ್ರವೇಶ ಮಾಡಿದರೂ ಚೀನಾ ಅದನ್ನು ಸಹಿಸುವುದಿಲ್ಲ. ಇಷ್ಟೆಲ್ಲಾ ಎಚ್ಚರಿಕೆ ನಡುವೆಯೂ, ತೈವಾನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಲಾಯ್ ಚಿಂಗ್ ಟೆ ಅವರಿಗೆ ಫಿಲಿಪ್ಪೀನ್ಸ್ ಅಧ್ಯಕ್ಷ ಫೆರ್ಡಿನಾಂಡ್ ಮ್ಯಾರ್ಕೊ ಶುಭ ಕೋರಿದ್ರು. ಈ ಬೆಳವಣಿಗೆಯ ಸಮಯದಲ್ಲೇ ಚೀನಾ ಏನ್ ಹೇಳಿದೆ ಗೊತ್ತಾ?
ಹೌದು, ತೈವಾನ್‌ನ ಅಧ್ಯಕ್ಷರಾಗಿ ಆಯ್ಕೆ ಆದ ಲಾಯ್ ಚಿಂಗ್ ಟೆ ಅವರಿಗೆ ಫಿಲಿಪ್ಪೀನ್ಸ್ ಅಧ್ಯಕ್ಷ ಫೆರ್ಡಿನಾಂಡ್ ಮ್ಯಾರ್ಕೊ ಜೂನಿಯರ್ ಅಭಿನಂದನೆ ತಿಳಿಸಿದ್ದಕ್ಕೆ ಚೀನಾ ಗರಂ ಆಗಿದೆ. ಇದೆ ಕಾರಣಕ್ಕೆ ಫಿಲಿಪ್ಪೀನ್ಸ್‌ನ ರಾಯಭಾರಿಯ ಕರೆಸಿಕೊಂಡಿದ್ದ ಚೀನಾ ವಿದೇಶಾಂಗ ಸಚಿವಾಲಯ ಆಕ್ಷೇಪ ದಾಖಲಿಸಿದೆ ಎನ್ನಲಾಗಿದೆ. ಹಾಗೇ ಫಿಲಿಪ್ಪೀನ್ಸ್ ಚೀನಾಗೆ ನೀಡಿದ್ದ ರಾಜಕೀಯ ಬದ್ಧತೆ ಉಲ್ಲಂಘಿಸಿದಂತೆ ಆಗಿದೆ ಎಂದು ಚೀನಾ ಈಗ ಖಡಕ್ ಉತ್ತರ ನೀಡಿದೆ. ಹೀಗೆ ತೈವಾನ್ ಬಗ್ಗೆ ಮೃದು ಹೆಜ್ಜೆ ಇಟ್ಟಿದ್ದ ಮತ್ತೊಂದು ದೇಶದ ವಿರುದ್ಧವೂ ಚೀನಾ ಆಕ್ರೋಶ ಹೊರಹಾಕಿದೆ.

ನಮ್ಮದೇ ಭಾಗ ಅಂತಿದೆ ಚೀನಾ!
ಇನ್ನು ಮತ್ತೊಂದು ಕಡೆ ತೈವಾನ್ ಎಂದೆಂದಿಗೂ ನಮ್ಮದೇ ಭಾಗ ಎಂದು ಚೀನಾ ಜಗತ್ತಿನ ಎದುರು ಪ್ರತಿಪಾದನೆ ಮಾಡುತ್ತಾ ಬರುತ್ತಿದೆ. ಆದರೆ ಅಮೆರಿಕ ಸೇರಿದಂತೆ ಹಲವು ದೇಶಗಳು ಈ ವಿಚಾರದಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಕ್ಕೆ ಚೀನಾ ಕೋಪ ವ್ಯಕ್ತಪಡಿಸುತ್ತಿದೆ. ಹೀಗೆ ಈಗ ಫಿಲಿಪ್ಪೀನ್ಸ್ ವಿರುದ್ಧವೂ ಚೀನಾ ಗರಂ ಆಗಿದೆ. ಜೊತೆಗೆ ತೈವಾನ್ ವಿಚಾರದಲ್ಲಿ ನಿಲುವನ್ನ ತಾನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂಬ ಖಡಕ್ ಸಂದೇಶ ಕೂಡ ರವಾನಿಸಿದೆ.
ಚೀನಾ ತೈವಾನ್ ಬಗ್ಗೆ ಹೇಳಿದ್ದೇನು?
ದ್ವೀಪರಾಷ್ಟ್ರ ತೈವಾನ್ ಕುರಿತು ಅಮೆರಿಕ & ಅದರ ಸ್ನೇಹಿತ ದೇಶಗಳು ತೆಗೆದುಕೊಳ್ಳುವ, ಪ್ರತಿ ನಿರ್ಧಾರಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ, ತೈವಾನ್ ವಿಚಾರ ಪ್ರಸ್ತಾಪ ಮಾಡ್ತಾ ಚೀನಾ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವ ಆರೋಪ ಮಾಡುತ್ತಿದೆ ಚೀನಾ. ಹೀಗಿದ್ದಾಗಲೇ ಆ ದ್ವೀಪರಾಷ್ಟ್ರ ನಮ್ಮದು ಎನ್ನುವ ಸಂದೇಶ ಚೀನಾ ಕೊಟ್ಟಿದೆ. ತೈವಾನ್ ಎಂದೆಂದಿಗೂ ಒಂದು ರಾಷ್ಟ್ರವಾಗಿ ಇರಲಿಲ್ಲ. ಭವಿಷ್ಯದಲ್ಲಿಯೂ ಅದು ರಾಷ್ಟ್ರವಾಗಿ ಇರುವುದಿಲ್ಲ, ಎಂಬ ಮೆಸೇಜ್ ಕೊಟ್ಟಿತ್ತು ಚೀನಾ. ಈ ಹೇಳಿಕೆ ಕೊಟ್ಟ ಕೆಲವೇ ಗಂಟೆಗಳಲ್ಲಿ ಫಿಲಿಪ್ಪೀನ್ಸ್ ಕೂಡ ಚೀನಾದ ಕೆಂಗಣ್ಣಿಗೆ ಗುರಿಯಾಗಿದೆ.

ಚೀನಾ ಕೊಟ್ಟ ವಾರ್ನಿಂಗ್ ಇದು!
ಕಳೆದ ಕೆಲ ತಿಂಗಳಿಂದ ಚೀನಾ ಮತ್ತು ತೈವಾನ್ ವಿಚಾರ ಭಾರಿ ಚರ್ಚೆಗೂ ವೇದಿಕೆ ಒದಗಿಸಿದೆ. ಇದಕ್ಕೆ ಕಾರಣ ತೈವಾನ್ ದೇಶದ ಚುನಾವಣೆ. ಹೀಗೆ ತೈವಾನ್ ಎಲೆಕ್ಷನ್ ಮುಗಿದು ಹೋದ್ರೂ ಕಿರಿಕ್ ಮಾತ್ರ ನಿಲ್ಲುತ್ತಿಲ್ಲ. ಚೀನಾ ವಿರುದ್ಧ ತೈವಾನ್ ಅನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಆರೋಪವನ್ನ ಚೀನಾ ಪದೇ ಪದೇ ಮಾಡುತ್ತಿದ್ದು. ಇಷ್ಟೆಲ್ಲಾ ಬೆಳವಣಿಗೆ ನಡುವೆ, ತೈವಾನ್ ಎಂದೆಂದಿಗು ಒಂದು ದೇಶವಾಗಿಲ್ಲ. ಭವಿಷ್ಯದಲ್ಲೂ ಅದು ರಾಷ್ಟ್ರವಾಗಿ ಇರುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದರು. ಈ ಘಟನೆ ನಡೆದ ಬಳಿಕ ಈಗ ಫಿಲಿಪ್ಪೀನ್ಸ್ ಕೂಡ ಇಕ್ಕಟ್ಟಿಗೆ ಸಿಲುಕಿದೆ.












Click it and Unblock the Notifications