Petrol Price Hike: ಹಾರ್ಮುಜ್ ಜಲಸಂಧಿ ಮಾರ್ಗ; ಸರಕುಗಳ ಮೇಲೆ ಶೇ.20 ಶುಲ್ಕ: ಟ್ರಂಪ್ ಘೋಷಣೆ!
Petrol Price Hike: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಉದ್ಘಟತನ ಪ್ರದರ್ಶಿಸಿದ್ದಾರೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದಿಂದ ವಿಶ್ವದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿಯು (Strait of Hormuz) ಮೇಲೆ ಹಿಡಿತ ಸಾಧಿಸುವುದಕ್ಕೆ ಅಮೆರಿಕ ಮುಂದಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಪ್ರಾರಂಭವಾದ ಅಮೆರಿಕ, ಇಸ್ರೇಲ್ vs ಇರಾನ್ ನಡುವಿನ ಸಂಘರ್ಷವು ಇನ್ನೂ ಅಂತ್ಯ ಕಾಣುತ್ತಿಲ್ಲ. ಇದೀಗ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಿಸಲಾದ ಎಲ್ಲ ಮಾದರಿಯ ಸರಕುಗಳ ಮೇಲೆಯೂ ಶೇಕಡಾ 20 ಶುಲ್ಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ. ಇದರಿಂದ ಕಚ್ಚಾ ತೈಲದ ಬೆಲೆ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.
ನಾವೇ ಹಾರ್ಮುಜ್ ಜಲಸಂಧಿಯ ರಕ್ಷಕರು ಎಂದ ಟ್ರಂಪ್
ಇನ್ನು ಇನ್ನು ಮುಂದಿನ ದಿನಗಳಲ್ಲಿ ಹಾರ್ಮುಜ್ ಜಲಸಂಧಿಯ ರಕ್ಷಕರು ನಾವೇ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಇಂದಿನಿಂದ ಅಮೆರಿಕ ಹಾರ್ಮುಜ್ ಜಲಸಂಧಿಯ ರಕ್ಷಕ ಎಂದು ಡೊನಾಲ್ಡ್ ಟ್ರಂಪ್ ಅವರು ಘೋಷಣೆ ಮಾಡಿದ್ದಾರೆ. ನ್ಯಾಯಯುತವಾಗಿ ಸಾಗಿಸಲಾದ ಎಲ್ಲಾ ಸರಕುಗಳ ಮೇಲೆ ಶೇ 20% ಶುಲ್ಕ ಪಾವತಿ ಮಾಡಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಪ್ರಪಂಚದ ಈ ಅಸ್ಥಿರ ಪ್ರದೇಶದಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಕೆಲಸವನ್ನು ಮಾಡಲು ಅಗತ್ಯವಿರುವ ಎಲ್ಲಾ ವೆಚ್ಚಗಳಿಗಾಗಿ ಈ ಮೊತ್ತವನ್ನು ಅಥವಾ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾರ್ಮುಜ್ ಜಲಸಂಧಿಯು ಮುಕ್ತವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇರಾನ್‌ನ ಹಡಗುಗಳು ಈ ಮಾರ್ಗವಾಗಿ ಪ್ರವೇಶಿಸುವುದನ್ನು ಅಥವಾ ಹೊರಹೋಗುವುದನ್ನು ತಡೆಯಲು ಅಮೆರಿಕವು ದಿಗ್ಬಂಧನವನ್ನು ಮತ್ತೆ ಪ್ರಾರಂಭಿಸಲಿದೆ. ಹೊರ್ಮುಜ್ ಜಲಸಂಧಿಯು ತೆರೆದಿರುತ್ತದೆ ಮತ್ತು ಇರಾನ್ ಇದ್ದರೂ ಅಥವಾ ಇಲ್ಲದಿದ್ದರೂ ಅದು ಯಾವಾಗಲೂ ಮುಕ್ತವಾಗಿರಲಿದೆ ಎಂದೂ ಟ್ರಂಪ್ ಹೇಳಿದ್ದಾರೆ. ಇರಾನ್‌ನ ಹಡಗುಗಳು ಅಥವಾ ಗ್ರಾಹಕರು ಪ್ರವೇಶಿಸುವುದನ್ನು ಅಥವಾ ಹೊರಹೋಗುವುದನ್ನು ಮಾತ್ರ ತಡೆಯುವುದರಿಂದ ನಾವು ಇರಾನ್‌ನ ದಿಗ್ಬಂಧನವನ್ನು ಮರುಸ್ಥಾಪಿಸುತ್ತಿದ್ದೇವೆ. ಇತರ ಎಲ್ಲಾ ದೇಶಗಳು ಜಲಸಂಧಿಯ ನ್ಯಾಯಯುತ ಮತ್ತು ಮುಕ್ತ ಬಳಕೆಗೆ ಅವಕಾಶ ಇರಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಪಷ್ಟಪಡಿಸಿದ್ದಾರೆ.
ನಾವು ಜಲಸಂಧಿಯನ್ನು ಉಳಿಸಿಕೊಳ್ಳಲಿದ್ದೇವೆ. ನಾವು ಜಲಸಂಧಿಯ ರಕ್ಷಕರಾಗಲಿದ್ದೇವೆ. ಅಲ್ಲದೆ ಜಲಸಂಧಿಯ ರಕ್ಷಕ ದೇವತೆ ಎಂದೇ ಕರೆಯುತ್ತೇವೆ. ಈ ಕಾರಣಕ್ಕಾಗಿ ಈ ಮಾರ್ಗದಲ್ಲಿ ಸಾಗುವ ಹಡಗುಗಳಿಗೆ ಶುಲ್ಕ ಪಾವತಿ ಮಾಡಬೇಕು ಎಂದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ಖಂಡಿದಿದೆ. ಅಮೆರಿಕ ಜಲಸಂಧಿಯ ನಿರ್ವಹಣೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಜಲಮಾರ್ಗದ ಕುರಿತು ಅಮೆರಿಕದೊಂದಿಗೆ ಸಹಕರಿಸುವುದನ್ನು "ಯುದ್ಧದ ಕೃತ್ಯ" ಎಂದೇ ನಾವು ಪರಿಗಣಿಸಲಿದ್ದೇವೆ ಎಂದೂ ಗಲ್ಫ್ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ ನೀಡಿದೆ.
Petrol Price Hike: ವಿಶ್ವಕ್ಕೆ ತಲೆಬಿಸಿ!
ಇನ್ನು ಇರಾನ್ ಹಾಗೂ ಇಸ್ರೇಲ್‌ನ ನಡುವೆ ನಡೆಯುತ್ತಿರುವ ಸಂಘರ್ಷವು ಸುದೀರ್ಘ ಅವಧಿಗೆ ತಲುಪಿದೆ. ಅಲ್ಲದೆ ಅಮೆರಿಕ ಈ ಸಂಘರ್ಷಕ್ಕೆ ಅಧಿಕೃತ ಎಂಟ್ರಿ ಕೊಟ್ಟ ನಂತರ ಈ ಯುದ್ಧವು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಹಾರ್ಮುಜ್ ಜಲಸಂಧಿಯ ಮೇಲೆ ಶುಲ್ಕ ವಿಧಿಸಿರುವುದು ಇಡೀ ವಿಶ್ವಕ್ಕೆ ಸಂಕಷ್ಟವನ್ನು ತಂದೊಡ್ಡಿದೆ.


Click it and Unblock the Notifications
