ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರಿ ಬೇಡಿಕೆ: ಆದಾಯದಲ್ಲೂ ದಾಖಲೆ ಬೆಳವಣಿಗೆ
ಭಾರತೀಯ ರೈಲ್ವೆ ಇಲಾಖೆಯ ಅತ್ಯಾಧುನಿಕ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಯಾಣಿಕರಿಂದ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ. ಉತ್ತರ ರೈಲ್ವೆ ವಲಯದಲ್ಲಿ 2026-27ನೇ ಹಣಕಾಸಿನ ವರ್ಷದಲ್ಲಿ ಮೊದಲ ತ್ರೈಮಾಸಿಕ ಅಂದರೆ ಏಪ್ರಿಲ್ ಮತ್ತು ಜೂನ್ ಆದಾಯದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಕಂಡುಬಂದಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
2026-27ರ ಮೊದಲ ತ್ರೈಮಾಸಿಕದಲ್ಲಿ ಉತ್ತರದ ರೈಲ್ವೆ ವಲಯದ ವಂದೇ ಭಾರತ್ ರೈಲುಗಳಲ್ಲಿ 1,47,462 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇದೇ ಸಮಯದಲ್ಲಿ ಶೇಕಡಾ 83ರಷ್ಟು ಹೆಚ್ಚಳವಾಗಿದೆ. ಸಮಯದ ಉಳಿತಾಯ ಮತ್ತು ಸುಖಕರ ಪ್ರಯಾಣ ಮಾಡುವ ಕಾರಣದಿಂದ ವಂದೇ ಭಾರತ್ ರೈಲಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.

ಉತ್ತರ ವಲಯದ ರೈಲ್ವೆ ಆದಾಯದಲ್ಲಿ ಏರಿಕೆ
ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಆದಂತೆ ಜೊತೆಗೆ ವಂದೇ ಭಾರತ್ ರೈಲುಗಳ ಗಳಿಕೆಯಲ್ಲು ಗಮನಾರ್ಹವಾಗಿ ಏರಿಕೆ ಕಂಡುಬಂದಿದೆ. ಈ ಕಾಲದಲ್ಲಿ ಉತ್ತರ ವಲಯದ ರೈಲ್ವೆ ಭಾಗಕ್ಕೆ ಸುಮಾರು ₹13.21 ಕೋಟಿ ಆದಾಯದ ಗಳಿಕೆಯಲ್ಲಿ ಹೆಚ್ಚಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡಾ72ರಷ್ಟು ಹೆಚ್ಚಳವಾಗಿದೆ. ವಿಶೇಷ ರೈಲುಗಳು ಸಂಚಾರ ಮತ್ತು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸುಧಾರಣೆಯೆ ಈ ಆದಾಯದ ಪ್ರಮುಖ ಕಾರಣ ಎಂದು ಹೇಳಬಹುದಾಗಿದೆ.
ವಂದೇ ಭಾರತ್ ಮಾರ್ಗದ ಬಗ್ಗೆ ಹೆಚ್ಚಿದ ಕುತೂಹಲ
ವಂದೇ ಭಾರತ್ ರೈಲುಗಳು ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ ಹೆಚ್ಚಿನ ಆಸಕ್ತಿ. ವಿಶೇಷವಾಗಿ ಯಾವ ಯಾವ ಮಾರ್ಗದಲ್ಲಿ ವಂದೇ ಭಾರತ್ ರೈಲು ಅತಿಹೆಚ್ಚು ಸರಾಸರಿ ವೇಗದಲ್ಲಿ ಸಂಚರಿಸುತ್ತಿದೆ ಎಂಬುದು ಪ್ರಯಾಣಿಕರಲ್ಲಿ ಕುತೂಹಲ ಕೂಡ ಹೆಚ್ಚಾಗಿದೆ. ಇದು ಭಾರತೀಯ ರೈಲ್ವೆ ಇಲಾಖೆ ಆಧುನಿಕ ಕಾರ್ಯಚರಣೆ ಮತ್ತು ಇದರ ತಾಂತ್ರಿಕ ಸಾಮರ್ಥ್ಯ ಪ್ರದರ್ಶಿಸುತ್ತಿದೆ.
ಜಮ್ಮು ಮತ್ತು ಶ್ರೀನಗರದಲ್ಲಿ ಉತ್ತಮ ಪ್ರತಿಕ್ರಿಯೆ
2026 ಏಪ್ರಿಲ್ 30ರಂದು ಪ್ರಾರಂಭವಾದ ಈ ಜಮ್ಮು ಮತ್ತು ಶ್ರೀನಗರ ವಂದೇ ಭಾರತ್ ರೈಲು ಸೇವೆಗೆ ಸಮರ್ಪಕ ಸ್ಪಂದನೆ ದೊರೆತಿದೆ. ಈ ರೈಲು ಮಾರ್ಗವು ಜಮ್ಮು ಮತ್ತು ಕಾಶ್ಮೀರ ನಡುವೆ ಮೊದಲ ರೈಲು ಸಂಪರ್ಕವನ್ನು ಒದಗಿಸಿ, ಪ್ರಯಾಣದ ಸಮಯವನ್ನು ಕಡಿಮೆ ಮಾಡಿದೆ. ವ್ಯಾಪಾರ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಂಪರ್ಕ ಬಲಪಡಿಸುವಲ್ಲಿ ಈ ಸೇವೆ ಮಹತ್ವದ ಪಾತ್ರವಹಿಸಿದೆ.
ಈ ಮಾರ್ಗದಲ್ಲಿ ಚೆನಾಬ್ ರೈಲು ಸೇತುವೆ ವಿಶ್ವದ ಅತಿ ಎತ್ತರದ ರೈಲು ಕಮಾನು ಸೇತುವೆ ಆಗಿದ್ದು ಇದು ಪ್ರಯಾಣಿಕರಿಗೆ ಅದ್ಬುತವಾದ ಅನುಭವವನ್ನು ನೀಡುತ್ತದೆ.
ಬೆಂಗಳೂರು ಮತ್ತು ಚೆನ್ನೈ ಕೆವಲ 5 ಗಂಟೆ
ಬೆಂಗಳೂರು ಮತ್ತು ಚೆನ್ನೈ ನಡುವಿನ ಮಾರ್ಗವನ್ನು ವಂದೇ ಭಾರತ್ ರೈಲು ಸೇವೆಯು ಐದು ಗಂಟೆಗಿಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುತ್ತಿದ್ದು, ಉದ್ಯಮಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರು ಇದರ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ.
"ಟ್ರೇನ್ಸ್ ಆನ್ ಡಿಮಾಂಡ್" ಯೋಜನೆ ಯಶಸ್ವಿ
ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಉತ್ತರ ರೈಲ್ವೆ ವಲಯವು 'ಟ್ರೇನ್ಸ್ ಆನ್ ಡಿಮಾಂಡ್' ಯೋಜನೆ ಅಡಿಯಲ್ಲಿ ವಿಶೇಷ ರೈಲುಗಳು ಸಂಚರಿಸುತ್ತಿವೆ. ಈ ಕ್ರಮದಿಂದ ಪ್ರಯಾಣಿಕರಿಗೆ ಹೆಚ್ಚುವರಿ ಆಸನದ ಸೌಲಭ್ಯ ದೊರೆಯುತ್ತಿದೆ ಆದ್ದರಿಂದ ರೈಲ್ವೆ ಇಲಾಖೆ ಆದಾಯ ಹೆಚ್ಚಾಗಿದೆ.
ಒಟ್ಟಾರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು ಸಮಯಪಾಲನೆ, ವೇಗ ಮತ್ತು ಆರಾಮದಾಯಕವಾಗಿವೆ ಆದ್ದರಿಂದ ಇದು ತುಂಬಾ ಜನಪ್ರಿಯತೆಗಳಿಸುತ್ತಿದೆ. ಉತ್ತರ ರೈಲ್ವೆ ವಲಯದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯ ಎರಡರಲ್ಲೂ ಗಣನೀಯವಾದ ಬೆಳವಣಿಗೆ ಕಂಡುಬಂದಿದೆ ಆದ್ದರಿಂದ ಭಾರತೀಯ ರೈಲ್ವೆ ಇಲಾಖೆಯ ಯಶಸ್ಸಿನ ಮತ್ತೊಂದು ಮೈಲಿಗಲ್ಲು ಆಗಲಿದೆ.


Click it and Unblock the Notifications
