ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
ಭಾರತಕ್ಕೆ ಭದ್ರತೆಗೆ ಅಪಾಯ ಉಂಟುಮಾಡುವ ಬೆಳವಣಿಗೆಯಲ್ಲಿ, ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗದಲ್ಲಿ ಸಿಯಾಚಿನ್ ಗ್ಲೇಸಿಯರ್ ಸಮೀಪದಲ್ಲಿ ಚೀನಾ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವುದು ಖಚಿತವಾಗಿದೆ. ಇದನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದು ಹೇಳಲಾಗಿದ್ದು, ರಸ್ತೆ ನಿರ್ಮಾಣವನ್ನು ಉಪಗ್ರಹ ಚಿತ್ರಗಳು ಖಚಿತಪಡಿಸಿವೆ.
1963 ರಲ್ಲಿ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ (PoK) ಭಾಗವಾದ ಶಾಕ್ಸ್‌ಗಾಮ್ ಕಣಿವೆಯಲ್ಲಿನ ರಸ್ತೆಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು, ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ಹೆದ್ದಾರಿ ಜಿ219 ನ ವಿಸ್ತರಣೆಯಿಂದ ಕವಲೊಡೆಯುತ್ತದೆ, ಬಳಿಕ ಸಿಯಾಚಿನ್ ಗ್ಲೇಸಿಯರ್‌ನಲ್ಲಿರುವ ಇಂದಿರಾ ಕಲ್ ಪರ್ವತಗಳಲ್ಲಿ ಮರೆಯಾಗುತ್ತದೆ ಎಂದು ಇಂಡಿಯಾ ಟುಡೆ ವರದಿಯಲ್ಲಿ ತಿಳಿಸಿದೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಸೆರೆಹಿಡಿಯಲಾದ ಉಪಗ್ರಹ ಚಿತ್ರಗಳು ಮತ್ತು ಇಂಡಿಯಾ ಟುಡೆಯ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ತಂಡವು ಪರಿಶೀಲನೆ ಮಾಡಿದ್ದು. ಕಳೆದ ವರ್ಷ ಜೂನ್ ಮತ್ತು ಆಗಸ್ಟ್ ನಡುವೆ ರಸ್ತೆಯ ನಿರ್ಮಾಣ ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ.
#Exclusive
— Nature Desai (@NatureDesai) April 21, 2024
Thread:
In a significant development, 🇨🇳 road has breached the border at Aghil Pass (4805 m) and entered the lower Shaksgam valley of Kashmir, 🇮🇳 with the road-head now less than 30 miles from 🇮🇳 Siachen
This permanently answers the question of Shaksgam for 🇮🇳
1/4 pic.twitter.com/TyjMcUqz2S
ಕಾನೂನು ಬಾಹಿರ ಎಂದ ಭಾರತ
ಕಾನೂನುಬಾಹಿರವಾಗಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಭಾರತವು ಚೀನಾದೊಂದಿಗೆ ತನ್ನ ರಾಜತಾಂತ್ರಿಕವಾಗಿ ಪ್ರತಿಭಟಿಸಬೇಕು ಎಂದು ಕಾರ್ಗಿಲ್, ಸಿಯಾಚಿನ್ ಗ್ಲೇಸಿಯರ್ ಮತ್ತು ಪೂರ್ವ ಲಡಾಖ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿರುವ ಭಾರತೀಯ ಸೇನೆಯ ಫೈರ್ ಮತ್ತು ಫ್ಯೂರಿ ಕಾರ್ಪ್ಸ್‌ನ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಕೇಶ್ ಶರ್ಮಾ ಒತ್ತಾಯಿಸಿದ್ದಾರೆ.
ಭಾರತಕ್ಕೆ ಆತಂಕಕಾರಿ ಏಕೆ?
ಈ ರಸ್ತೆಯು ಟ್ರಾನ್ಸ್-ಕಾರಕೋರಂ ಟ್ರಾಕ್ಟ್‌ನಲ್ಲಿದೆ. ಇದು ಐತಿಹಾಸಿಕವಾಗಿ ಕಾಶ್ಮೀರದ ಭಾಗವಾಗಿದೆ ಮತ್ತು ಭಾರತದ ವ್ಯಾಪ್ತಿಯಲ್ಲಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರ ಸರ್ಕಾರವು ಪ್ರಕಟಿಸಿದ ಇತ್ತೀಚಿನ ಅಧಿಕೃತ ನಕ್ಷೆಯಲ್ಲಿ ಈ ಪ್ರದೇಶವನ್ನು ಭಾರತಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ.
ಸುಮಾರು 5,300 ಚದರ ಕಿಲೋಮೀಟರ್‌ಗಳಷ್ಟು ಹರಡಿರುವ ಪ್ರದೇಶವನ್ನು 1947 ರ ಯುದ್ಧದಲ್ಲಿ ಪಾಕಿಸ್ತಾನ ವಶಪಡಿಸಿಕೊಂಡಿತು ಮತ್ತು 1963 ರಲ್ಲಿ ಸಹಿ ಮಾಡಿದ ದ್ವಿಪಕ್ಷೀಯ ಗಡಿ ಒಪ್ಪಂದದ ಭಾಗವಾಗಿ ಚೀನಾಕ್ಕೆ ಹಸ್ತಾಂತರಿಸಲಾಯಿತು, ಇದು ಭಾರತಕ್ಕೆ ಸೇರಿದ್ದೆಂದು ಗುರುತಿಸಲಾಗಿಲ್ಲ. ಈ ರಸ್ತೆ ನಿರ್ಮಾಣದಿಂದ ಭಾರತದ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎನ್ನುವ ಆತಂಕ ಕೂಡ ಇದೆ.
ಲೆಫ್ಟಿನೆಂಟ್ ಜನರಲ್ ಶರ್ಮಾ ಅವರಂತಹ ಅನೇಕ ವೀಕ್ಷಕರು, ಶಾಕ್ಸ್‌ಗಾಮ್ ಕಣಿವೆಯಲ್ಲಿನ ಚೀನೀ ರಸ್ತೆಗಳು ಪ್ರಾಥಮಿಕವಾಗಿ ಖನಿಜಗಳನ್ನು ಸಾಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಯುರೇನಿಯಂ, ಗಿಲ್ಗಿಟ್ ಬಾಲ್ಟಿಸ್ತಾನ್‌ನಿಂದ ಕ್ಸಿನ್‌ಜಿಯಾಂಗ್‌ಗೆ ಗಣಿಗಾರಿಕೆ ಮಾಡಲಾಗಿದೆ ಎಂದಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications