ತಂಟೆಗೆ ಬಂದು ನಾಶವಾಗಬೇಡಿ: ಚೀನಾ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
ಚೀನಾ ಮತ್ತೆ ಮತ್ತೆ ಯುದ್ಧಕ್ಕೆ ಸಿದ್ಧವಾಗುತ್ತಿದೆ ಸುಮ್ ಸುಮ್ನೆ ಕಿರಿಕ್ ಮಾಡುತ್ತಿದೆ ಎಂಬ ಅಮೆರಿಕದ ಆರೋಪಗಳ ನಡುವೆ, ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾ ಮತ್ತೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಅದರಲ್ಲೂ ಅಮೆರಿಕ ಸೇರಿದಂತೆ, ಪಾಶ್ಚಿಮಾತ್ಯರ ಮಾತು ಕೇಳುತ್ತಿದೆ ಅಂತಾ ಫಿಲಿಪೈನ್ಸ್ ದೇಶಕ್ಕೆ ನೇರವಾಗಿ ವಾರ್ನಿಂಗ್ ಕೊಟ್ಟಿದೆ ಚೀನಾ.
ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಕಿರಿಕಿರಿಯು ಈ ಮೊದಲಿನಿಂದ ಇದೆ. ಅದರಲ್ಲೂ ಅಮೆರಿಕ ಮತ್ತು ಚೀನಾ ನಡುವೆ ಈ ವಿಚಾರದಲ್ಲಿ, ಆಗಾಗ ಭಾರಿ ಸಂಘರ್ಷ ನಡೆಯುತ್ತದೆ. ಪರಿಸ್ಥಿತಿ ಹೀಗಿದ್ದಾಗ ತನ್ನ ನೆರೆಯ ದೇಶಕ್ಕೆ ಚೀನಾ ಖಡಕ್ ವಾರ್ನಿಂಗ್ ಕೊಟ್ಟಿದೆ. ಫಿಲಿಪೈನ್ಸ್ ನಾಯಕರಿಗೆ ಈ ಮೂಲಕ ಚೀನಾ ಮೆಸೇಜ್‌ನ್ನು ಕೊಟ್ಟಿದ್ದು, ನಮ್ಮ ತಂಟೆಗೆ ಬರಬೇಡಿ ಎಂದು ನೇರವಾಗಿ ಹೇಳಿದೆ ಚೀನಾ. ಹಾಗಾದ್ರೆ ಈಗ ಚೀನಾ ಹೇಳಿದ್ದು ಏನು? ಇದು ಹೇಗೆಲ್ಲಾ ಎಫೆಕ್ಟ್ ಕೊಡಬಹುದು?

ನಿಯಮ ಉಲ್ಲಂಘಿಸಿದರೆ ತಕ್ಕ ಶಿಕ್ಷೆ?
ಚೀನಾ ಈಗ ನೀಡಿರುವ ಹೇಳಿಕೆ ಪ್ರಕಾರ, ವಿದೇಶಿ ಬೆಂಬಲದಿಂದ ದಕ್ಷಿಣ ಚೀನಾ ಸಮುದ್ರದ ಭಾಗದಲ್ಲಿ ದುಸ್ಸಾಹಸಕ್ಕೆ ಮುಂದಾಗಬೇಡಿ ಎಂಬ ಎಚ್ಚರಿಕೆ ನೀಡಿದೆ. ಅದ್ರಲ್ಲೂ ದ. ಚೀನಾ ಸಮುದ್ರದಲ್ಲಿ ಫಿಲಿಪೈನ್ಸ್ ದೇಶ ಕೈಗೊಳ್ಳುತ್ತಿರುವ ಕ್ರಮಗಳು ಒಪ್ಪಲು ಸಾಧ್ಯವಿಲ್ಲ.
ಹೀಗಾಗಿ ಫಿಲಿಪೈನ್ಸ್ ಕ್ರಮಗಳು ಅತಿ ಅಪಾಯಕಾರಿ ಆಗಿವೆ. ಇದು ಸರಿಯಾಗಿಲ್ಲ ಫಿಲಿಪೈನ್ಸ್ ಇಂತಹ ವಿಚಾರದಲ್ಲಿ ಸುಮ್ಮನಿದ್ದರೆ ಒಳ್ಳೆಯದು ಎನ್ನುವ ರೀತಿ ಚೀನಾ ಎಚ್ಚರಿಕೆ ನೀಡಿದೆ. ಈ ಬಗ್ಗೆ ಚೀನಾ ವಿದೇಶಾಂಗ ಇಲಾಖೆ ಫಿಲಿಪೈನ್ಸ್‌ಗೆ ಎಚ್ಚರಿಕೆ ಕೊಟ್ಟಿದೆ. ಹಾಗೆ ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಚೀನಾದ ಪ್ರದೇಶವನ್ನ ಫಿಲಿಪೈನ್ಸ್ ಪದೇ ಪದೆ ಉಲ್ಲಂಘಿಸುತ್ತಿದೆ ಎಂದಿದೆ ಚೀನಾ.

ಅಮೆರಿಕ ಈಗ ಏನು ಮಾಡುತ್ತೆ?
ಇದರ ಜೊತೆಗೆ ಫಿಲಿಪೈನ್ಸ್ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ಚೀನಾ, ತಾನು ಕೂಡ ಕಠಿಣ ಕ್ರಮಕ್ಕೆ ಸಿದ್ಧ ಎಂದು ಎಚ್ಚರಿಸಿದೆ. ಹಲವು ಬಾರಿ ಹೀಗೆ ಫಿಲಿಪೈನ್ಸ್ ನಮ್ಮನ್ನು ಪ್ರಚೋದನೆ ಮಾಡುತ್ತಿದ್ದರೆ ಸುಮ್ಮನೆ ಇರಲು ಆಗಲ್ಲ ಎಂದಿದೆ ಚೀನಾ. ಈ ಮೂಲಕ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಮತ್ತೆ ಪರಿಸ್ಥಿತಿ ಕೈಮಿರಿದ & ಸೂಕ್ಷ್ಮವಾದ ಮುನ್ಸೂಚನೆಯೂ ಸಿಕ್ಕಿದೆ. ಈಗಾಗಲೇ ಅಮೆರಿಕ & ಚೀನಾ ನಡುವೆ ಈ ಕುರಿತಾಗಿ ದೊಡ್ಡ ಕಿರಿಕ್ ನಡೆಯುತ್ತಿದೆ. ಇದೇ ಸಮಯದಲ್ಲಿ ನೇರವಾಗಿ ತನ್ನ ನೆರೆ ದೇಶಕ್ಕೆ ಚೀನಾ ಇದೀಗ ವಾರ್ನಿಂಗ್ ಕೊಟ್ಟಿದೆ.
ಮತ್ತೊಂದು ಯುದ್ಧ ಆರಂಭ?
ಒಟ್ನಲ್ಲಿ ಈಗಾಗಲೇ ಉಕ್ರೇನ್ VS ರಷ್ಯಾ ಹಾಗೂ ಇಸ್ರೇಲ್ VS ಹಮಾಸ್ ಮಧ್ಯೆ ಸಂಘರ್ಷ ನಡೆಯುವಾಗ, ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿ ಕೂಡ ಭಯ ಹುಟ್ಟಿಸುತ್ತಿದೆ. ಮುಂದೆ ಇಲ್ಲೂ ಯುದ್ಧ ಶುರುವಾದರೆ ಕಥೆ ಏನು? ಅನ್ನೋ ಆತಂಕ ಆವರಿಸಿದೆ. ಉತ್ತರ ಕೊರಿಯಾ ಕೂಡ ಪದೇ ಪದೆ ಅಮೆರಿಕ, ಜಪಾನ್ & ದಕ್ಷಿಣ ಕೊರಿಯಾ ವಿರುದ್ಧ ಗುಡುಗುತ್ತಿದೆ. ಇದೇ ಸಮಯದಲ್ಲಿ ಚೀನಾ ನೀಡಿರುವ ಎಚ್ಚರಿಕೆ ಸಂದೇಶ ಮತ್ತಷ್ಟು ಚಿಂತೆಗೀಡು ಮಾಡಿದೆ.












Click it and Unblock the Notifications