ಚೀನಾದ ನೈಋತ್ಯ ಪ್ರಾಂತ್ಯದಲ್ಲಿ ಭೂಕುಸಿತ: 44 ಮಂದಿ ಸಮಾಧಿ!
ಬೀಜಿಂಗ್ ಜನವರಿ 22: ಚೀನಾದ ನೈಋತ್ಯ ಪ್ರಾಂತ್ಯದಲ್ಲಿ ಸೋಮವಾರ ಮುಂಜಾನೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ 44 ಜನರು ಸಮಾಧಿಯಾಗಿದ್ದಾರೆ. ಹಲವಾರು ಜನ ಅವಶೇಷಗಳ ಅಡಿ ಸಿಲುಕಿದ್ದು 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಗೈಝೌನ ಟ್ಯಾಂಗ್‌ಫಾಂಗ್ (Tangfang in Zhenxiong) ಪಟ್ಟಣದಲ್ಲಿ ಬೆಳಿಗ್ಗೆ 6 ಗಂಟೆಗೆ ಈ ದುರಂತ ಸಂಭವಿಸಿದೆ. 18 ಕ್ಕೂ ಹೆಚ್ಚು ಮನೆಗಳು ಮಣ್ಣಿನಲ್ಲಿ ಮುಳುಗಿ ಹೋಗಿವೆ. ಮನೆಯಲ್ಲಿ ವಾಸವಾಗಿದ್ದ ಜನ ಮಣ್ಣಲ್ಲಿ ಹುದುಗಿ ಹೋಗಿದ್ದಾರೆ. ಸದ್ಯ ಅವರನ್ನು ಹುಡುಕಲು ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ.

ಸಾವು-ನೋವುಗಳ ಬಗ್ಗೆ ತಕ್ಷಣದ ವರದಿಗಳಿಲ್ಲ. ಭೂಕುಸಿತದ ಕಾರಣ ತಕ್ಷಣವೇ ತಿಳಿದುಬಂದಿಲ್ಲ. ವೈರಲ್ ಆದ ದೃಶ್ಯದ ಫೋಟೋಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಕಂಡುಬಂದಿದೆ. ಸರ್ಕಾರಿ ಮಾಧ್ಯಮಗಳು ನೀಡಿರುವ ಮಾಹಿ ಪ್ರಕಾರ ಅವಶೇಷಗಳ ಅಡಿಯಲ್ಲಿ ಹುದುಗಿರುವ ಜನರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 44 ಜನರು ಸಮಾಧಿಯಾಗಿದ್ದಾರೆ. ಇನ್ನೂ ಕೆಲವರನ್ನು ಬದುಕಿಸಬಹುದಾದ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.












Click it and Unblock the Notifications