Xiaomi 14: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಫಿಕ್ಸ್: ಬೆಲೆ, ಫೀಚರ್ಸ್ ತಿಳಿಯಿರಿ

ಬೆಂಗಳೂರು, ಫೆಬ್ರವರಿ 20: ಮೊಬೈಲ್ ಯುಗದಲ್ಲಿ ತನ್ನ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್ ಮತ್ತು ಅಪ್ಡೇಟ್ ಮೊಬೈಲ್ ಫೋನ್‌ಗಳನ್ನು ನೀಡುವ ಕ್ಷಿಯಾವೋಮಿ ಇಂಡಿಯಾ (Xiaomi) ಕಂಪನಿಯು ತನ್ನ ಹೊಸ ಮೊಬೈಲ್ ಸರಣಿ ಬಿಡುಗಡೆ ದಿನಾಂಕ ನಿಗದಿ ಮಾಡಿದೆ.

ಹೌದು, ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕ್ಷಿಯಾವೋಮಿ ಮೊಬೈಲ್ ಕಂಪನಿಯು ತನ್ನ ಮುಂದಿನ Xiaomi 14 ಅನ್ನು ಭಾರತದಲ್ಲಿ ಇದೇ ಮಾರ್ಚ್ 07 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತ ಮಾಹಿತಿ ನೀಡಿದೆ.

ಈ ಕ್ಷಿಯಾವೋಮಿ ಸರಣಿಯಲ್ಲಿ ಮೂರು ಮಾದರಿಗಳು ಲಭ್ಯವಾಗಲಿವೆ. Xiaomi 14, Xiaomi 14 Pro ಮತ್ತು Xiaomi 14 Ultra ಎಂಬ ಮೂರು ಮಾದರಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಲು ಗೆಡ್ಜೆಟ್ ಮಾರುಕಟ್ಟೆ ಪ್ರವೇಶಿಸಲಿವೆ.

Xiaomi 14 with Snapdragon 8 Gen 3 Chipset to Launch in India on March 7th: Know Detailed Specs

ಫೆಬ್ರವರಿ 25 ರಂದು ಬಿಡುಗಡೆ

ಚೀನಾ ಮೂಲಕ ತಯಾರಕರು ಸಾಮಾಜಿಕ ಜಾಲತಾಣ (X) ನಲ್ಲಿ ಹೊಸ ಫೋನ್ Xiaomi 14 ಬಿಡುಗಡೆ ದಿನಾಂಕ ಕುರಿತು ಮಾಹಿತಿ ನೀಡಿದೆ. ಈ ಹಿಂದೆ ಕಂಪನಿಯು ಅಧಿಕೃತ Xiaomi ಇಂಡಿಯಾ Leica ಪಾಲುದಾರಿಕೆ ಕುರಿತು ಮಾತನಾಡಿತ್ತು. ಇದೀಗ ಹೊಸ ಸರಣಿಯನ್ನು ಇದೇ ಫೆಬ್ರವರಿ 25 ರಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ಬಿಡುಗಡೆಯ ವೇಳಾಪಟ್ಟಿಗೆ ಅಧಿಕೃತವಾಗಿ ಒಳಗೊಳ್ಳಲಿದೆ.

ಚೀನಾದಲ್ಲಿ ಬಿಡುಗಡೆ

ಕ್ಷಿಯಾವೋಮಿ ಮೂಲತಃ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆಗೊಳಿಸಿತ್ತು. ಏತನ್ಮಧ್ಯೆ, Xiaomi 14 Ultra ಸಹ ಚೀನಾದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಭಾರತದಲ್ಲಿ Xiaomi 14 ಮೊಬೈಲ್ ಗಳು ಮಾರ್ಚ್ 7 ಮೊದಲ ವಾರ ಬುಕ್ಕಿಂಗ್‌ಗೆ ಲಭ್ಯವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಚೀನಾದಲ್ಲಿ ಕಂಪನಿಯು ತನ್ನ ಕ್ಷಿಯಾವೊಮಿ ಮೊಬೈಲ್ ಸರಣಿ ಬಿಡುಗಡೆಯ ಬಿಡುಗಡೆಗೆ ಮಾಡಲಿದೆ. ತಬಿಡುಗಡೆಯ ನಂತರದ ಎರಡು ವಾರಗಳಲ್ಲಿ Xiaomi 14 ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಕ್ಷಿಯಾವೋಮಿ ಸರಣಿ ಮೊಬೈಲ್ ಫೀಚರ್ಸ್

Xiaomi 14 ಮುಂಬರುವ ದಿನಗಳಲ್ಲಿ ಇದು ಗ್ರಾಹಕರಿಗೆ ಅತ್ಯತ್ತಮ ಅನುಭವ ನೀಡಲು ಸಿದ್ಧವಾಗಿದೆ. ಚೀನಾದಲ್ಲಿ Xiaomi 14, ಸ್ನಾಪ್‌ಟ್ರಾಗನ್ (Snapdragon) 8 ಜನರೇಷನ್ 3 SoC ಅನ್ನು ಫಿಚರ್ಸ್ ಹೊಂದಿದೆ. ಅಲ್ಲದೇ 1.5K ರೆಸಲ್ಯೂಶನ್ ಮತ್ತು ಅಡಾಪ್ಟಿವ್ 120Hz ರಿಫ್ರೆಶ್ ಒಳಗೊಂಡಿದ್ದು, 6.36-ಇಂಚಿನ LTPO ಡಿಸ್ಪ್ಲೇಯನ್ನು ಹೊಂದಿದೆ.

Xiaomi 14 with Snapdragon 8 Gen 3 Chipset to Launch in India on March 7th: Know Detailed Specs

ಕ್ಯಾಮೆರಾಗೆ ಆದ್ಯತೆ

ಚೀನಾದಂತೆ ಭಾರತದಲ್ಲೂ ಹೊಸ ವಿನ್ಯಾಸ, ಫೀಚರ್‌ಗಳಲ್ಲಿ ಸಿಗುವ ಸಾಧ್ಯತೆ ಇದೆ. ಇದು 12GB ವರೆಗೆ ಹಾಗೂ 1TB ವರೆಗೆ ಇಂಟರ್ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಈ ಫೋನ್‌ನಲ್ಲಿ Summilux ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್+ 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇದೆ. ಇನ್ನೊಂದು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಹಾಗೂ ಫ್ರಂಟ್ ಕ್ಯಾಮೆರೆ 32 ಎಂಪಿ ಸಹ ಈ ಹೊಂದಿದೆ.

ಈ ಹ್ಯಾಂಡ್ಸೆಟ್ IP68 ರೇಟಿಂಗ್ ಅನ್ನು ಸಹ ಪಡೆದಿದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಇದರ 4,610mAh ಸಾಮರ್ಥ್ಯದ ಬ್ಯಾಟರಿ ಚಾರ್ಜ್ ಆಗಲಿದೆ. ಈ ಕ್ಷಿಯಾವೋಮಿ 14 ಸ್ಮಾರ್ಟ್ ಫೋನ್ ಚೀನಾದಲ್ಲಿ ಜೆಡ್ ಗ್ರೀನ್, ಕಪ್ಪು, ಬಿಳಿ ಮತ್ತು ಸ್ನೋ ಮೌಂಟೇನ್ ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಮೊಬೈಲ್ ದರ

ಇನ್ನೂ ಭಾರತದಲ್ಲಿ Xiaomi 14 ಅನ್ನು ಚೀನಾದಲ್ಲಿ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಆರಂಭಿಸಲಾಗಿದೆ. ಇಲ್ಲಿ ಬೆಲೆಗಳು ₹50,000 ರಿಂದ ₹60,000 ವರೆಗೆ ಇರಬಹುದು ಎಂದು ಅಂದಾಜಿಸಾಳಗಿದೆ. ಚೀನಾದಲ್ಲಿನ ಈ ಬೆಲೆಯನ್ನು ಪರಿಗಣಿಸಿ, ಕ್ಷಿಯಾವೋಮಿ 14 ಒಟ್ಟು 8GB RAM/256 ಮೂಲ ರೂಪಾಂತರದ ಬೆಲೆ ಸುಮಾರು ₹50,000 ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+