Get Updates
Get notified of breaking news, exclusive insights, and must-see stories!

Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ

Nandi Hills: ಲೋಕಸಭೆ ಚುನಾವಣೆ ಹಿನ್ನೆಲೆ ಏಪ್ರಿಲ್‌ 25ರಿಂದ ಅಂದರೆ ಇಂದು ಸಂಜೆಯಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗೆ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾಗಾದರೆ ಎಷ್ಟು ಗಂಟೆಗಳ ಕಾಲ ನಿರ್ಬಂಧ ಹೇರಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸಾಮಾನ್ಯ ದಿನಗಳಲ್ಲೇ ಬೆಂಗಳೂರಿನ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಪ್ರಸಿದ್ದ ಪ್ರವಾಸಿ ತಾಣಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇನ್ನೂ ವೇಕೆಂಡ್‌ ದಿನಗಳಲ್ಲಿ ಇದಕ್ಕೂ ಮೂರ್ನಾಲ್ಕು ಪಟ್ಟು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದೀಗ ಏಪ್ರಿಲ್‌ 26 ಅಂದರೆ ಶುಕ್ರವಾರ ವೀಕೆಂಡ್‌ ಆಗಿರುವುದರಿಂದ ಇತ್ತ ಪ್ರಯಾಣಿಸಲಿ ಪ್ಲಾನ್‌ ಮಾಡಿಕೊಂಡಿದ್ದರೆ, ಈ ಸುದ್ದಿಯನ್ನು ನೀವು ಓದಲೇ ಬೇಕಿದೆ.

Nandi Hills Entry to Remain Closed Amid Lok Sabha Election Phase-2 Polling in Karnataka

ರಾಜ್ಯದಲ್ಲಿ ಏಪ್ರಿಲ್‌ ಬೆಳಗ್ಗೆ 7 ಗಂಟೆಯಿಂದಲೇ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಮತದಾನ ನಡೆಯಲಿದ್ದು, ಈ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿಗಿರಿಧಾಮ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಏಪ್ರಿಲ್ 25ರ ಸಂಜೆ 6 ಗಂಟೆಯಿಂದ ಏಪ್ರಿಲ್ 26ರ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಏಪ್ರಿಲ್ 26ರಂದು ನಡೆಯಲಿರುವ ಮತದಾನದಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕೆಂಬ ಉದ್ದೇಶದಿಂದ ಈ ಆದೇಶವನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೊರಡಿಸಿದ್ದಾರೆ. ಕೊಠಡಿಗಳ ಮುಂಗಡ ಬುಕ್ಕಿಂಗ್ ಕೂಡ ನಿಷೇಧ ವಿಧಿಸಿ ಆದೇಶಿಸಿದ್ದಾರೆ.

ಒಂದು ವೇಳೆ ಶುಕ್ರವಾರ ರಜೆ ಅಂತಾ ನಂದಿಗಿರಿಧಾಮಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರೆ, ಈಗಲೇ ರದ್ದು ಮಾಡಿಕೊಳ್ಳುವುದು ಒಳ್ಳೆಯದು. ಇನ್ನು ಎಂದಿನಂತೆ ಶನಿವಾರದಿಂದ ಪ್ರವಾಸಿಗರು ನಂದಿ ಬೆಟ್ಟಕ್ಕೆ ಹೋಗಬಹುದಾಗಿದೆ ಎಂದು ತಿಳಿಸಲಾಗಿದೆ.

ಮತದಾನಕ್ಕೆ ಕೌಂಟ್‌ಡೌನ್: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಎರಡು ಹಂತದಲ್ಲಿ ನಡೆಯಲಿದ್ದು, ಏಪ್ರಿಲ್‌ 26ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನಕ್ಕೆ ಕೌಂಟ್‌ಡೌನ್ ಆರಂಭವಾಗಿದ್ದು, ಚಾಮರಾಜನಗರ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ ಮುಗಿಸಿ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ.

ಚಾಮರಾಜನಗದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಇವಿಎಂ ಹಿಡಿದು ನಿಗದಿಪಡಿಸಿದ ಮತಗಟ್ಟೆಗಳತ್ತ ಚುನಾವಣಾ ಸಿಬ್ಬಂದಿ ಬಸ್‌ಲ್ಲಿ ತೆರಳಿದರು. ಚಾಮರಾಜನಗರ ಜಿಲ್ಲೆಯಲ್ಲಿ 1196 PRO, 1196 APRO, 2392 PO ಸೇರಿದಂತೆ 4,784 ಸಿಬ್ಬಂದಿಯು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 2,000 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

2,000 ಬ್ಯಾಲೆಟ್ ಯೂನಿಟ್ ಹಾಗೂ 559 ಕಾಯ್ದಿರಿಸುವುದನ್ನು ಸೇರಿಸಿದರೆ ಒಟ್ಟು 2,559 ಬ್ಯಾಲೆಟ್ ಯೂನಿಟ್ ಬಳಸಲಾಗುತ್ತಿದ್ದೆ. 2,618 ಕಂಟ್ರೋಲ್ ಯೂನಿಟ್‌, 2,792 ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಜಿಲ್ಲೆಯ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಶಾಂತಿಯುತ ಮತದಾನ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 4 ಡಿವೈಎಸ್ಪಿ, 13 ಪಿಐ, 41 ಪಿಎಸ್ಐ, 67 ಎಎಸ್ಐ, 936 ಕಾನ್ಸ್‌ಟೇಬಲ್, 600 ಹೋಂ ಗಾರ್ಡ್ ಸೇರಿದಂತೆ 1,667 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇನ್ನು, ಮತಗಟ್ಟೆಗಳತ್ತ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 163 ಕೆಎಸ್ಆರ್‌ಟಿಸಿ ಬಸ್ ಬಳಕೆ ಮಾಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 7ರಿಂದ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭಗೊಳ್ಳಲ್ಲಿದ್ದು, ಮತದಾನ ಪ್ರಕ್ರಿಯೆಗೆ ಲೋಕ ಅಖಾಡ ಸಜ್ಜಾಗಿದೆ.

ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಅಂಚೆ ಮತದಾನ ಮಾಡಿ ಮತಗಟ್ಟೆಗಳತ್ತ ತೆರಳಿದರೇ ಹಲವರು ಇಡಿಎಸ್ ಸರ್ಟಿಫಿಕೇಟ್ ಪಡೆದುಕೊಂಡು ಮತಗಟ್ಟೆಗಳತ್ತ ತೆರಳಿದರು. ಇಡಿಎಸ್ ಪಡೆದವರು ಮತಗಟ್ಟೆಗಳಲ್ಲೇ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ‌. ಇನ್ನು ಚಾಮರಾಜನಗರ ಡಿಸಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹು, ಜಿಲ್ಲಾ ಪಂ‌ಚಾಯತ್‌ ಸಿಇಒ‌ ಆನಂದಪ್ರಕಾಶ್ ಮೀನಾ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಾವುದೇ ಗೊಂದಲಕ್ಕೆ ಒಳಗಾಗಬೇಡಿ, ಸಂದೇಹಗಳಿದ್ದರೇ ಕೇಳಿ ಪರಿಹರಿಸಿಕೊಳ್ಳಿ. ಧೈರ್ಯವಾಗಿ ಕರ್ತವ್ಯ ನಿರ್ವಹಿಸಿ, ಸಮಸ್ಯೆ-ಸಂದೇಹ ಏರ್ಪಟ್ಟರೇ ಸಹಾಯವಾಣಿಗೆ ಕರೆಮಾಡಿ ಎಂದು ಜಿಲ್ಲಾಧಿಕಾರಿ ಚುನಾವಣಾ ಸಿಬ್ಬಂದಿಗೆ ಧೈರ್ಯ ತುಂಬಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+