ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೊರೊನಾ’ ವೈರಸ್ ಇನ್ನೂ 10 ವರ್ಷ ಭೂಮಿ ಬಿಟ್ಟು ತೊಲಗುವುದಿಲ್ಲ!

|
Google Oneindia Kannada News

ಸಾಕಪ್ಪಾ ಸಾಕು ಈ ಕೊರೊನಾ ಸಹವಾಸ ಎನ್ನುವ ಹೊತ್ತಲ್ಲೇ ವ್ಯಾಕ್ಸಿನ್ ಸಂಶೋಧಕರು ಮತ್ತೊಂದು ಶಾಕ್ ನೀಡಿದ್ದಾರೆ. ಇನ್ನೂ 10 ವರ್ಷ ಕೊರೊನಾ ವೈರಸ್ ನಮ್ಮನ್ನು ಬಿಟ್ಟು ತೊಲಗುವುದಿಲ್ಲ, ಸುಮಾರು 10 ವರ್ಷ ಕೊರೊನಾ ವೈರಸ್ ಭೂಮಿ ಮೇಲೆ ಬದುಕಿರಲಿದೆ ಎಂದು 'ಫೈಜರ್‌' ಲಸಿಕೆ ಸಂಶೋಧಕ ಹಾಗೂ ವಿಜ್ಞಾನಿ ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಮೊಟ್ಟಮೊದಲು ಅಪ್ರೂವ್ ಮಾಡಲ್ಪಟ್ಟ ಕೊರೊನಾ ವ್ಯಾಕ್ಸಿನ್ 'ಫೈಜರ್‌' ಲಸಿಕೆ ಸಂಶೋಧಕ, ಜರ್ಮನ್ ವಿಜ್ಞಾನಿ ಉಗುರ್ ಸಾಹಿನ್ ಈ ಎಚ್ಚರಿಕೆ ನೀಡಿದ್ದಾರೆ.

ಜರ್ಮನಿ ಮೂಲದ ಬಯೋ ಎನ್ ಟೆಕ್‌ನ ಸಂಶೋಧಕ ಉಗುರ್ ಸಾಹಿನ್ ಹೇಳುವಂತೆ, ಲಸಿಕೆ ನೀಡಿದ ಮಾತ್ರಕ್ಕೆ 'ಕೊರೊನಾ' ವೈರಸ್ ಭೂಮಿ ಬಿಟ್ಟು ತೊಲಗಲು ಸಾಧ್ಯವಿಲ್ಲ. ಏಕೆಂದರೆ ಅದು ಭೂಮಿಗೆ ಬರಲು ಅದೆಷ್ಟು ಕಷ್ಟಪಟ್ಟಿತ್ತೋ, ಇದೀಗ ಭೂಮಿ ಬಿಟ್ಟು ತೊಲಗಲು ಅಷ್ಟೇ ಕಷ್ಟಪಡಬೇಕು. ಅಲ್ಲಿಯವರೆಗೆ ಮನುಕುಲಕ್ಕೆ ಸಂಕಷ್ಟಗಳು ಎದುರಾಗಲಿವೆ ಎಂದು ಉಗುರ್ ಸಾಹಿನ್ ಎಚ್ಚರಿಸಿದ್ದಾರೆ.

ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಗೆ ವಿದೇಶದಲ್ಲಿಯೂ ಬಂಪರ್ ಬೇಡಿಕೆ ನಿರೀಕ್ಷೆಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಗೆ ವಿದೇಶದಲ್ಲಿಯೂ ಬಂಪರ್ ಬೇಡಿಕೆ ನಿರೀಕ್ಷೆ

ಮತ್ತೊಂದೆಡೆ ಸಾಮಾನ್ಯ ಸ್ಥಿತಿ ಅರ್ಥಾತ್ 'ನಾರ್ಮಲ್' ಪದಕ್ಕೆ ಈಗ ಬೇರೆ ಅರ್ಥ ಹುಡುಕಬೇಕು ಎಂದು ಈಗಿನ ಭೀಕರ ಪರಿಸ್ಥಿತಿಯನ್ನು ಬಿಡಿಸಿ ಹೇಳಿದ್ದಾರೆ ಸಂಶೋಧಕ ಉಗುರ್ ಸಾಹಿನ್. ಆದರೂ ಒಂದಷ್ಟು ಭರವಸೆ ಮಾತುಗಳನ್ನ ಉಗುರ್ ಸಾಹಿನ್ ನೀಡಿದ್ದು, ಇದೀಗ ತಾನೆ ವ್ಯಾಕ್ಸಿನ್ ಸಿಕ್ಕಿದೆ. ಮುಂದಿನ ಚಳಿಗಾಲದ ಹೊತ್ತಿಗೆ ಪರಿಸ್ಥಿತಿ ಒಂದಷ್ಟು ಕಂಟ್ರೋಲ್‌ಗೆ ಬರುವ ಸಾಧ್ಯತೆ ಇದೆ ಎಂದು ಸಾಹಿನ್ ಜಗತ್ತಿಗೆ ಧೈರ್ಯ ತುಂಬಿದ್ದಾರೆ.

ಹೊಸ ವೈರಸ್ ವಿರುದ್ಧ ವಾರ್..!

ಹೊಸ ವೈರಸ್ ವಿರುದ್ಧ ವಾರ್..!

ಇಂಗ್ಲೆಂಡ್‌ನಲ್ಲಿ ಕಳೆದ 2-3 ದಿನಗಳ ಅಂತರದಲ್ಲಿ 3 ಹೊಸ ಕೊರೊನಾ ವೈರಸ್ ತಳಿಗಳು ಪತ್ತೆಯಾಗಿವೆ. ಈ ಬೆನ್ನಲ್ಲೇ ಫೈಜರ್ ಹಾಗೂ ಬಯೋ ಎನ್ ಟೆಕ್‌ ಸಂಶೋಧಕರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಹೊಸ ಕೊರೊನಾ ತಳಿಗೆ ನಮ್ಮದೇ ವ್ಯಾಕ್ಸಿನ್ ವರ್ಕೌಟ್ ಆಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಹೊಸ ತಳಿಯ ವೈರಸ್ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ. ಇನ್ನು ಕೆಲವೇ ವಾರಗಳಲ್ಲಿ ಅದರ ಫಲಿತಾಂಶ ಕೈಸೇರಲಿದೆ. ಆದರೆ ನಮಗೆ ನಂಬಿಕೆ ಇದೆ ಈಗಿನ ಫೈಜರ್ ಲಸಿಕೆ ಮೂಲಕವೇ ಚಿಕಿತ್ಸೆ ನೀಡಿದರೂ, ಹೊಸ ತಳಿಯ ಕೊರೊನಾ ವೈರಸ್ ತೊಲಗಿಸಬಹುದು ಎಂದಿದ್ದಾರೆ ಸಂಶೋಧಕರು.

 ಫೈಜರ್ ಲಸಿಕೆ; ಫೈಜರ್ ಲಸಿಕೆ; "ಅಲರ್ಜಿ" ಹಿನ್ನೆಲೆಯವರಿಗೆ ಎಚ್ಚರಿಕೆ ಕೊಟ್ಟ ಲಂಡನ್

ಆಂಗ್ಲರ ಬುಡ ಅಲುಗಾಡಿತು..!

ಆಂಗ್ಲರ ಬುಡ ಅಲುಗಾಡಿತು..!

ನವೆಂಬರ್‌ನಲ್ಲಿ ಇದೇ ರೀತಿ ಬ್ರಿಟನ್‌ನ ಸಾಂಕ್ರಾಮಿಕ ರೋಗಗಳ ತಜ್ಞರು ಆಘಾತಕಾರಿ ಸಂಗತಿ ತಿಳಿಸಿದ್ದರು. ಕೊರೊನಾ ಸೋಂಕು ಅಷ್ಟು ಸುಲಭವಾಗಿ ಭೂಮಿಯಿಂದ ನಾಶವಾಗದು ಎಂಬ ಎಚ್ಚರಿಕೆಯನ್ನು ನೀಡಿದ್ದರು.

ಹೀಗೆ ಬ್ರಿಟನ್ ಸಂಶೋಧಕರು ಕೊರೊನಾ ಕುರಿತು ಆಘಾತಕಾರಿ ಹೇಳಿಕೆ ನೀಡಿದ 2 ತಿಂಗಳಲ್ಲಿ ಜರ್ಮನ್ ಹಾಗೂ ಅಮೆರಿಕದ ಸಂಶೋಧಕರು ಕೂಡ ಇದೇ ಮಾತು ಹೇಳುತ್ತಿದ್ದಾರೆ. ಏಕೆಂದರೆ ಈವರೆಗೂ ಯಾವುದೇ ಲಸಿಕೆ ಅಷ್ಟು ಪ್ರಭಾವ ಬೀರುತ್ತಿಲ್ಲ. ಅಕಸ್ಮಾತ್ ವ್ಯಾಕ್ಸಿನ್ ಸಕ್ಸಸ್ ಆದರೂ ಕೊರೊನಾ ತೊಲಗುತ್ತೆ ಎಂಬುದು ಭ್ರಮೆ, ಲಸಿಕೆಯಿಂದ ಸದ್ಯಕ್ಕೆ ಕೊರೊನಾ ನಿಯಂತ್ರಿಸಬಹುದು ಎಂಬುದು ಸಂಶೋಧಕರ ವಾದ.

ಬ್ರಿಟನ್ ಪಾಡು ಯಾರಿಗೂ ಬೇಡ..!

ಬ್ರಿಟನ್ ಪಾಡು ಯಾರಿಗೂ ಬೇಡ..!

ದ್ವೀಪರಾಷ್ಟ್ರ ಬ್ರಿಟನ್‌ನಲ್ಲಿ ಬರೀ ಚಳಿ ಇರುವುದಿಲ್ಲ, ಅಲ್ಲಿ ತೇವಾಂಶ ಭರಿತ ವಾತಾವರಣ ಮೈಕೊರೆಯುವಂತೆ ಮಾಡುತ್ತದೆ. ಇಷ್ಟು ಪ್ರಮಾಣದ ಚಳಿ ಎದುರಾದಾಗ ಸಾಮಾನ್ಯವಾಗಿಯೇ ಜನ ಆಸ್ಪತ್ರೆ ಸೇರುತ್ತಿದ್ದರು. ಇನ್ನೂ ಈಗ ಕೇಳಬೇಕಾ, ಚಳಿ ಜೊತೆ ಕೊರೊನಾ ಬೇರೆ ಅಪ್ಪಳಿಸಿದೆ. ಹೀಗೆ ಬ್ರಿಟನ್‌ನಲ್ಲಿ ಸೋಂಕಿಗೆ ತುತ್ತಾಗುವವರು ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿನ ಸರ್ಕಾರದ ಬುಡ ಅಲುಗಾಡುವಂತೆ ಮಾಡಿದೆ. ಭವಿಷ್ಯ ಹೇಗಪ್ಪಾ ಅಂತಾ ಜನರು ನಡುಗುತ್ತಿರುವಾಗಲೇ, ಕೊರೊನಾ ಸೋಂಕಿನ 3 ಹೊಸ ತಳಿಗಳು ಬ್ರಿಟನ್‌ನಲ್ಲಿ ಪತ್ತೆಯಾಗಿವೆ.

ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?

ನಮ್ಮ ಪ್ರಾಣ ನಮ್ಮ ಕೈಯಲ್ಲಿ..!

ನಮ್ಮ ಪ್ರಾಣ ನಮ್ಮ ಕೈಯಲ್ಲಿ..!

ಲಸಿಕೆಗಳು ಸಿಕ್ಕರೂ ಅಷ್ಟು ಪ್ರಭಾವಶಾಲಿ ಆಗಿಲ್ಲ, ಅಕಸ್ಮಾತ್ ಲಸಿಕೆಗಳು ಪ್ರಭಾವಶಾಲಿ ಆದರೂ ಅದನ್ನು ಈ ಜಗತ್ತಿನಾದ್ಯಂತ ತಲುಪಿಸಲು ನಾನಾ ಸಮಸ್ಯೆಗಳು ಕಾಡುತ್ತಿವೆ. ಹೀಗಾಗಿ ಮಹಾಮಾರಿ 'ಕೊರೊನಾ' ವಿರುದ್ಧದ ಹೋರಾಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳೇ ಸದ್ಯಕ್ಕೆ ಮದ್ದು ಎನ್ನುತ್ತಾರೆ ತಜ್ಞರು ಹಾಗೂ ಲಸಿಕೆ ಸಂಶೋಧಕರು. ಚಳಿ ಅಪ್ಪಳಿಸಿದೆ, ಹೀಗಾಗಿ ಕೊರೊನಾ ವೈರಸ್ ಕಂಟ್ರೋಲ್‌ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಜೊತೆಗೆ ಜನರು ಗುಂಪುಗೂಡದಂತೆ ಮುನ್ನೆಚ್ಚರಿಕೆ ಅಗತ್ಯ ಎಂಬುದು ತಜ್ಞರ ಸಲಹೆಯಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

English summary
the creator of the world’s first approved vaccine has warned, Corona can’t be eradicated from earth before the 10 years of time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X