ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಗೆ ವಿದೇಶದಲ್ಲಿಯೂ ಬಂಪರ್ ಬೇಡಿಕೆ ನಿರೀಕ್ಷೆ

ನವದೆಹಲಿ, ಡಿಸೆಂಬರ್ 23: ಭಾರತದ ಸಂಪೂರ್ಣ ಸ್ವದೇಶಿ ನಿರ್ಮಿತ ಲಸಿಕೆಯಾದ ಕೋವ್ಯಾಕ್ಸಿನ್‌ನ ಉತ್ಪಾದಕ ಸಂಸ್ಥೆ ಭಾರತ್ ಬಯೋಟೆಕ್, ತನ್ನ ಲಸಿಕೆಯ ಬಳಕೆಗೆ ಅಧಿಕೃತ ಅನುಮೋದನೆ ಇನ್ನೂ ದೊರಕದೆ ಇದ್ದರೂ, ಈಗಾಗಲೇ ಲಕ್ಷಾಂತರ ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ. ಆದರೆ ದೇಶದ 1.4 ಬಿಲಿಯನ್‌ನ ಅರ್ಧದಷ್ಟು ಜನಸಂಖ್ಯೆಗೂ ಸಾಕಾಗುವಷ್ಟು ಕೂಡ ಲಸಿಕೆಗಳನ್ನು ಪೂರೈಸುವುದು ಕಷ್ಟಕರ ಎಂದು ಅದು ತಿಳಿಸಿದೆ.

'ಇದು ದುಃಸ್ವಪ್ನದಂತೆ ಕಾಡುತ್ತಿದೆ. ಕೆಲವೊಮ್ಮೆ ನನಗೆ ರೋಮಾಂಚನವಾಗುತ್ತದೆ. ಬೆಳಿಗ್ಗೆ ನಾನು ಎದ್ದಾಗ ಕೆಲವೊಮ್ಮೆ ನಾವು ಎಲ್ಲಿದ್ದೇವೆ ಎಂಬ ಅಚ್ಚರಿಯಾಗುತ್ತದೆ. ನಾವೇನು ಮಾಡುತ್ತಿದ್ದೇವೆ? ನಮಗೆ ಅದು ಸಾಧ್ಯವೇ? ಎಂಬ ಪ್ರಶ್ನೆಗಳು ಮೂಡುತ್ತವೆ' ಎಂದು ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿ.ಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಹೇಳಿದ್ದಾರೆ.

ಭಾರತ್ ಬಯೋಟೆಕ್ ಈಗಾಗಲೇ 10 ಮಿಲಿಯನ್ ಲಸಿಕೆಗಳನ್ನು ಉತ್ಪಾದಿಸಿದೆ. ಹೀಗಿದ್ದರೂ ಅದರ ಕೋವ್ಯಾಕ್ಸಿನ್ ಪ್ರಯೋಗ ಮುಂದುವರಿದಿದೆ. ಮುಂದಿನ ವರ್ಷದ ಮಧ್ಯಭಾಗದಲ್ಲಿ ಲಸಿಕೆಯ ಬಳಕೆ ಶುರುವಾಗುವ ನಿರೀಕ್ಷೆಯಿದೆ. ಪ್ರಸ್ತುತ ವಾರ್ಷಿಕವಾಗಿ 300 ಮಿಲಿಯನ್ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಅದರಲ್ಲಿ ಮೊದಲ ನೂರು ಮಿಲಿಯನ್ ಲಸಿಕೆಗಳು ಭಾರತಕ್ಕೆ ಮೀಸಲಿರಲಿದೆ. ಮುಂದೆ ಓದಿ.

ಅರ್ಧದಷ್ಟು ಜನರಿಗೂ ಸಾಲುವುದಿಲ್ಲ

ಅರ್ಧದಷ್ಟು ಜನರಿಗೂ ಸಾಲುವುದಿಲ್ಲ

ಮುಂದೆ ದೊಡ್ಡ ಸವಾಲು ಬರುವ ಸಾಧ್ಯತೆ ಇರುವುದರಿಂದ ಈಗಲೇ ನಾವು ಲಸಿಕೆಗಳನ್ನು ಉತ್ಪಾದಿಸುವ ಸಾಹಸಕ್ಕೆ ಕೈಹಾಕಿದ್ದೇವೆ. ಭಾರತದ ಮಟ್ಟಿಗೆ ಈ ಲಸಿಕೆಗಳು ತೀರಾ ಕಡಿಮೆ. ನೂರಾರು ಮಿಲಿಯನ್ ಲಸಿಕೆಗಳು ಭಾರತದ ಅರ್ಧದಷ್ಟು ಜನಸಂಖ್ಯೆಗೂ ಸಾಕಾಗುವುದಿಲ್ಲ ಎನ್ನುವುದೇ ನಮ್ಮ ಮುಂದೆ ಇರುವ ಬೃಹತ್ ಸವಾಲು ಎಂದು ಸುಚಿತ್ರಾ ತಿಳಿಸಿದ್ದಾರೆ.

ಲಸಿಕೆ ಪೂರೈಗೆ ವ್ಯವಸ್ಥೆ ಸುಧಾರಣೆ

ಲಸಿಕೆ ಪೂರೈಗೆ ವ್ಯವಸ್ಥೆ ಸುಧಾರಣೆ

ಇನ್ನೂ ಎರಡು ದೇಶಗಳು ಲಸಿಕೆಯ ಪ್ರಾಥಮಿಕ ಪೂರೈಕೆಯ ಒಪ್ಪಂದಕ್ಕೆ ತಮ್ಮೊಂದಿಗೆ ಸಹಿ ಹಾಕಿವೆ ಎಂದು ಅವರು ಹೇಳಿದ್ದಾರೆ. -20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಶೇಖರಿಸಿಡಬೇಕಾದ ಪೋಲಿಯೋ ಲಸಿಕೆಯು ಈಗ ಪರಿಣಾಮಕಾರಿಯಾಗಿ ದೇಶದ ಮೂಲೆ ಮೂಲೆಗೆ ಸರಬರಾಜು ಆಗುತ್ತಿದೆ. ಹಾಗೆಯೇ ಕೋವಿಡ್ ಲಸಿಕೆಯೂ ಲಭ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಪರಿಣಾಮಕಾರಿಯಾಗಬಲ್ಲದು

ಮತ್ತಷ್ಟು ಪರಿಣಾಮಕಾರಿಯಾಗಬಲ್ಲದು

ಭಾರತ್ ಬಯೋಟೆಕ್ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲು 60 ರಿಂದ 70 ಮಿಲಿಯನ್ ಡಾಲರ್ ಮೊತ್ತವನ್ನು ವಿನಿಯೋಗಿಸಿದೆ. ಇದುವರೆಗಿನ ಅದರ ಪ್ರಯೋಗದ ದತ್ತಾಂಶಗಳು ಕೋವ್ಯಾಕ್ಸಿನ್ ಲಸಿಕೆಯು ಶೇ 60ರಷ್ಟು ಪರಿಣಾಮಕಾರಿ ಎಂದು ತಿಳಿಸಿದೆ. ಇದು ಅಂತಿಮ ಮಾನವ ಪ್ರಯೋಗದಲ್ಲಿ ಮತ್ತಷ್ಟು ಸುಧಾರಿಸಬಹುದು ಎಂದು ತಿಳಿಸಿದ್ದಾರೆ.

ಅಮೆರಿಕದ ಕಂಪೆನಿ ಒಪ್ಪಂದ

ಅಮೆರಿಕದ ಕಂಪೆನಿ ಒಪ್ಪಂದ

ಈ ನಡುವೆ ಅಮೆರಿಕದ ಔಷಧ ಉತ್ಪಾದಕ ಸಂಸ್ಥೆ ಓಕುಗೆನ್ ಇಂಕ್, ಅಮೆರಿಕದ ಮಾರುಕಟ್ಟೆಗಾಗಿ ಭಾರತ್ ಬಯೋಟೆಕ್ ಲಸಿಕೆ ಜತೆ ಸಹಭಾಗಿತ್ವ ಪಡೆದುಕೊಂಡಿರುವುದಾಗಿ ತಿಳಿಸಿದೆ. ಕೋವ್ಯಾಕ್ಸಿನ್ ಲಸಿಕೆಯು ಸುರಕ್ಷಿತವಾಗಿದ್ದು, ಪ್ರಾಥಮಿಕ ಪ್ರಯೋಗಗಳಲ್ಲಿ ಸ್ವಯಂ ಸೇವಕರಲ್ಲಿನ ಪ್ರತಿರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಅಮೆರಿಕದಲ್ಲಿ ಲಸಿಕೆಯ ಕ್ಲಿನಿಕಲ್ ಅಭಿವೃದ್ಧಿ, ನೋಂದಣಿ ಮತ್ತು ಅಲ್ಲಿನ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಓಕುಗೆನ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+