ಆರ್‌ಸಿಬಿ ತಂಡಕ್ಕೆ ವಿಲನ್ ಯಾರು? ಅನಿಲ್ ಕುಂಬ್ಳೆ ನೀಡಿದ್ದಾರೆ ಉತ್ತರ!
ಆರ್‌ಸಿಬಿ ತಂಡ ಇದುವರೆಗೂ ಕಪ್ ಗೆದ್ದೇ ಇಲ್ಲ, ಆದ್ರೂ ಅಭಿಮಾನಿಗಳು ಆರ್‌ಸಿಬಿ ಟೀಂ ಬೆನ್ನಿಗೆ ನಿಂತು ಬೆಂಬಲ ಕೊಡುತ್ತಿದ್ದಾರೆ. ಹೀಗಿದ್ರೂ ಆರ್‌ಸಿಬಿ 3 ಬಾರಿ ಐಪಿಎಲ್ ಟೂರ್ನಿ ಫೈನಲ್ ಹಂತಕ್ಕೆ ಹೋಗಿತ್ತು. ಅದ್ರಲ್ಲೂ 2009ರ, ಐಪಿಎಲ್ ಫೈನಲ್ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ತಂಡ ಇನ್ನೇನು ಐಪಿಎಲ್ ಕಪ್ ಗೆದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಸೋಲುಂಡಿತ್ತು. ಆದರೆ ಈ ರೀತಿ 2009ರಲ್ಲಿ ಆರ್‌ಸಿಬಿ ಕಪ್ ಸೋಲಲು ರಾಬಿನ್ ಉತ್ತಪ್ಪ ಕಾರಣ ಎನ್ನುವ ಸ್ಫೋಟಕ ಸತ್ಯವನ್ನು ಅನಿಲ್ ಕುಂಬ್ಳೆ ಬಯಲು ಮಾಡಿದ್ದಾರೆ!
2008ರಲ್ಲಿ ಐಪಿಎಲ್ ಟೂರ್ನಿ ಭಾರತದಲ್ಲಿ ಅದ್ಧೂರಿಯಾಗಿ ಆರಂಭ ಕಂಡಿತ್ತು. ಐಪಿಎಲ್ ಯಾವಾಗ ಶುರುವಾಯ್ತೋ ಆಗಲೇ ಕ್ರಿಕೆಟ್ ಜಗತ್ತಿಗೆ ಕೂಡ ಒಂದು ದೊಡ್ಡದಾದ ತಿರುವು ಸಿಕ್ಕಿದೆ. ಯಾಕಂದ್ರೆ ಐಪಿಎಲ್ ಟೂರ್ನಿ ಶುರುವಾದ ಬಳಿಕ ಜಾಗತಿಕ ಮಟ್ಟದಲ್ಲೂ ದೊಡ್ಡ ಬದಲಾವಣೆ ಆಗಿದೆ. ಅದ್ರಲ್ಲೂ ಭಾರತದಲ್ಲಿ ಇರುವ ಪ್ರತಿಭಾನ್ವಿತ ಯುವಕರಿಗೆ, ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷಗಳಿಂದ ಕಪ್ ಗೆದ್ದೇ ಇಲ್ಲ.

ಆರ್‌ಸಿಬಿ ಕಪ್ ಗೆದ್ದಿಲ್ಲ ಎಂಬುದು ಬೆಂಗಳೂರು ತಂಡದ ಕನ್ನಡಿಗ ಅಭಿಮಾನಿಗಳಿಗೆ ನೋವು ನೀಡುತ್ತಿದೆ. ಆದರೆ ಆರ್‌ಸಿಬಿಗೆ 2009ರಲ್ಲಿ ಕಪ್ ಗೆಲ್ಲುವ ಅವಕಾಶ ಇದ್ದರೂ ರಾಬಿನ್ ಉತ್ತಪ್ಪ ತಪ್ಪಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮಾತನ್ನ ಸ್ವತಃ ಆಗಿನ ಆರ್‌ಸಿಬಿ ಕ್ಯಾಪ್ಟನ್ ಅಂದ್ರೆ ಆರ್‌ಸಿಬಿ ಕ್ಯಾಪ್ಟನ್ ಆಗಿದ್ದ ಅನಿಲ್ ಕುಂಬ್ಳೆ ಹೇಳಿದ್ದಾರೆ. ಆ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಆರ್‌ಸಿಬಿ ಪಾಲಿಗೆ ಉತ್ತಪ್ಪ ವಿಲನ್?
ಆರ್‌ಸಿಬಿ ತಂಡಕ್ಕೆ ಕೋಟಿ ಕೋಟಿ ಕನ್ನಡಿಗರು ಫ್ಯಾನ್ಸ್ ಆಗಿ ಹೋಗಿದ್ದಾರೆ. ಅದ್ರಲ್ಲೂ ಆರ್‌ಸಿಬಿ ತಂಡವನ್ನ ಕನ್ನಡ ನಾಡು ಮಾತ್ರವಲ್ಲದೆ, ಭಾರತದ ಮೂಲೆ ಮೂಲೆಯಲ್ಲೂ ಬೆಂಬಲಿಸುತ್ತಾರೆ ಫ್ಯಾನ್ಸ್. ಹೀಗಾಗಿ ಆರ್‌ಸಿಬಿಗೆ ದೊಡ್ಡ ಮಟ್ಟದ ಅಭಿಮಾನಿಗಳ ಪಡೆ ಇದೆ ಹೀಗಿದ್ರೂ, ಆರ್‌ಸಿಬಿ ತಂಡ ಮಾತ್ರ ಈವರೆಗೆ ಐಪಿಎಲ್ ಕಪ್ ಗೆದ್ದಿಲ್ಲ ಯಾಕೆ ಗೊತ್ತಾ? 2009 ಐಪಿಎಲ್ ಫೈನಲ್‌ನಲ್ಲಿ, ಆರ್‌ಸಿಬಿ ಕೇವಲ 6 ರನ್ ಅಂತರದಲ್ಲಿ ಸೋತಿದ್ದು ಯಾರಿಂದ? ರಾಬಿನ್ ಉತ್ತಪ್ಪ ಪಾತ್ರ, ಈ ಪಂದ್ಯದಲ್ಲಿ ಏನಾಗಿತ್ತು? ಸ್ವತಃ ಅನಿಲ್ ಕುಂಬ್ಳೆ ಹೇಳಿರುವ ವಿಡಿಯೋ ಮುಂದೆ ಇದೆ ಅದನ್ನ ನೋಡಿ.
144 ರನ್ ಗಳಿಸಲು ಪರದಾಟ
ಕೇಳಿದ್ರಲ್ಲ, ಹೀಗೆ ಅನಿಲ್ ಕುಂಬ್ಳೆ ಅವರು ಇದೀಗ 2009ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಯಾಕೆ ಸೋತು ಹೋಯಿತು ಎಂಬುದನ್ನ ವಿವರಿಸಿದ್ದಾರೆ. ಆಗ ಹೈದರಾಬಾದ್ ತಂಡವನ್ನ 'ಡೆಕ್ಕನ್ ಚಾರ್ಜಸ್ ಹೈದರಾಬಾದ್' ಎಂದು ಕರೆಯಲಾಗುತ್ತಿತ್ತು. ಮೊದಲು ಬ್ಯಾಟಿಂಗ್‌ನ ಮಾಡಿದ್ದ ಡೆಕ್ಕನ್ ಚಾರ್ಜಸ್ ಹೈದರಾಬಾದ್ ತಂಡ 143 ರನ್‌ಗೆ 6 ವಿಕೆಟ್ ಕಳೆದುಕೊಂಡು ಆರ್‌ಸಿಬಿಗೆ 144 ರನ್‌ಗಳ ಗುರಿ ನೀಡಿತ್ತು. ಹೀಗಿದ್ದಾಗ ಆರ್‌ಸಿಬಿ ತಂಡ ಕೊನೆಯ ಓವರ್‌ಗೆ 15 ರನ್ ಗಳಿಸಬೇಕಿತ್ತು.
ಅಕಸ್ಮಾತ್ ಆರ್‌ಸಿಬಿ ಅಂದು 15 ರನ್ ಗಳಿಸಿದ್ದರೆ 2009 ರಲ್ಲಿಯೇ ಆರ್‌ಸಿಬಿ ಕಪ್ ಗೆಲ್ಲುತ್ತಿತ್ತು. ಆದರೆ ಅಂದು ರಾಬಿನ್ ಉತ್ತಪ್ಪ ಅವ್ರು ಸ್ಟ್ರೈಕ್‌ನಲ್ಲಿ ಇದ್ದು ಕೂಡ ರನ್ ಗಳಿಸದೆ ಪರದಾಡಿದ್ರು. ಆಗ ನನಗೆ, ಸ್ಟ್ರೈಕ್ ಕೊಡಿ ಎಂದು ಬೇಡಿದೆ. ಹೀಗೆ ನಾನು ಬೇಡಿದರೂ ರಾಬಿನ್ ಉತ್ತಪ್ಪ ಮಾತ್ರ ಮನಸ್ಸು ಮಾಡಲಿಲ್ಲ. ಇದು ಅಂದು ನಮ್ಮ ಆರ್‌ಸಿಬಿ ಸೋಲಿಗೆ ಕಾರಣವಾಗಿತ್ತು, ಎಂದಿದ್ದಾರೆ ಅನಿಲ್ ಕುಂಬ್ಳೆ ಅವರು.
ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗುತ್ತಾ?
2024ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ನೀರಸ ಪ್ರದರ್ಶನವನ್ನು ನೀಡುತ್ತಿದೆ. ಈಗಿನ ಪರಿಸ್ಥಿತಿ ನೋಡುತ್ತಿದ್ರೆ, ಆರ್‌ಸಿಬಿ ಪ್ಲೇಆಫ್ ಹಂತಕ್ಕೆ ಹೋಗಲು ಪವಾಡ ನಡೆಯಬೇಕು. ಯಾಕಂದ್ರೆ ಆರ್‌ಸಿಬಿ ಈಗಾಗಲೆ 9 ಪಂದ್ಯದಲ್ಲಿ 2 ಮ್ಯಾಚ್ ಮಾತ್ರ ಗೆದ್ದಿದೆ ಇನ್ನುಳಿದ 7 ಮ್ಯಾಚ್ ಸೋತಿದೆ. ಹೀಗಾಗಿ ಆರ್‌ಸಿಬಿ ಮುಂದಿನ 5 ಪಂದ್ಯದಲ್ಲೂ ಗೆಲ್ಲಬೇಕಿದೆ. ದೊಡ್ಡ ಅಂತರದಲ್ಲೇ ಗೆಲುವು ಸಾಧಿಸಬೇಕಿದೆ. ಆಗ ಅಂತಿಮವಾಗಿ 5 ಪಂದ್ಯ ಗೆದ್ದರೆ ಲೀಗ್ ಕೊನೆಗೆ ಒಟ್ಟು 7 ಪಂದ್ಯ ಗೆದ್ದಂತೆ ಆಗುತ್ತದೆ. ಈ ಮೂಲಕ, ಲೀಗ್ ಹಂತದಲ್ಲಿನ ಪಂದ್ಯಗಳು ಮುಗಿದಾಗ ಆರ್‌ಸಿಬಿ ತಂಡ ಒಟ್ಟು 14 ಅಂಕ ಪಡೆದಿರುತ್ತೆ. ಉಳಿದ ತಂಡಗಳು ಇವರಿಗಿಂತ ಹಿಂದೆ ಇರಬೇಕಾಗುತ್ತೆ. ಆದರೆ ಈ ಲೆಕ್ಕಾಚಾರದಲ್ಲಿ ಸ್ವಲ್ಪ ಎಡವಟ್ಟು ಉಂಟಾದರೂ ಕಷ್ಟ ಕಷ್ಟ.
ಕೊಹ್ಲಿ ವಿರೋಧಿಗಳ ಮಾತು ಏನು?
ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಗೆದ್ದಿದ್ದರೂ ಕೊಹ್ಲಿ ವಿರುದ್ಧವಾಗಿ, ಕೆಲವರು ಇದೀಗ ಮಾತನಾಡುತ್ತಿದ್ದಾರೆ. ಈ ವಿಚಾರ ದೊಡ್ಡ ಸದ್ದನ್ನು ಕೂಡ ಮಾಡುತ್ತಿದೆ. ಕೇವಲ 43 ಬಾಲ್ ಆಡಿ, ಭರ್ಜರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 51 ರನ್ ಗಳಿಸಿದರು. ಹೀಗಿದ್ದರೂ ವಿರಾಟ್ ಕೊಹ್ಲಿ, ಸ್ಲೋ ಬ್ಯಾಟಿಂಗ್ ಆಡಿದ್ದಾರೆ ಅಂತಾ ವಿರೋಧಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ವಿಚಾರದ ಕುರಿತಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದ್ದು. ವಿರಾಟ್ ಕೊಹ್ಲಿ ವಿರೋಧಿ ಗ್ಯಾಂಗ್, ವಿರಾಟ್ ಕೊಹ್ಲಿ ಕ್ರಿಕೆಟ್ ಅಲ್ಲ ಕುಂಟೆಬಿಲ್ಲೆ ಆಡಲಿ ಅಂತಾ ಪೋಸ್ಟ್ ಹಾಕುತ್ತಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವ ವಿರೋಧಿಗಳಿಗೆ, ಆರ್‌ಸಿಬಿ ಅಭಿಮಾನಿ ಬಳಗ ಕೂಡ ಚಳಿ ಬಿಡಿಸುತ್ತಿದೆ.
ಹೈದರಾಬಾದ್ ತಂಡಕ್ಕೆ ಸಂಕಷ್ಟ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ, ಸನ್‌ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ಸಂಕಷ್ಟಗಳನ್ನು ಎದುರಿಸಿ, ಇದೀಗ ಪ್ಲೇಆಫ್‌ಗೆ ಹೋಗುವುದು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ಆರ್‌ಸಿಬಿ ತಂಡದ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಹೇಗಂದ್ರೆ ಮುಂದಿನ ಎಲ್ಲಾ ಪಂದ್ಯಗಳನ್ನ ಗೆದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಕಮಾಲ್ ಮಾಡಬೇಕು. ಆ ಮೂಲಕ ಮುಂದಿನ ಹಂತಕ್ಕೆ ಹೋಗಲು ರಣತಂತ್ರ ಹೂಡಬೇಕಿದೆ. ಇದರಲ್ಲಿ ಒಂದಷ್ಟು ಸಣ್ಣ ಎಡವಟ್ಟು ನಡೆದರೂ ಆರ್‌ಸಿಬಿಗೆ ಮುಂದಿನ ಹಂತದ ಕನಸು ನನಸಾಗುವುದಿಲ್ಲ.












Click it and Unblock the Notifications