ಭಾರತದಲ್ಲಿ ಕೊರೊನಾ ಇಳಿಕೆ: ಒಂದೇ ದಿನ 2,380 ಪಾಸಿಟಿವ್ ಕೇಸ್ ಪತ್ತೆ, ಸಕ್ರಿಯ ಪ್ರಕರಣ ಎಷ್ಟಿದೆ?
ನವದೆಹಲಿ, ಮೇ 06: ಭಾರತದಲ್ಲಿ ಕೆಲವು ದಿನಗಳ ಹಿಂದೆ ಇದ್ದ ಕೊರೊನಾ ಭೀತಿ ಮತ್ತೆ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಒಟ್ಟು 2,380 ಹೊಸ ಕೋವಿಡ್ -19 ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ ಈ ಹಿಂದೆ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದರು. ಪ್ರತಿನಿತ್ಯ 10ಸಾವಿರದಿಂದ 15ಸಾವಿರ ವರೆಗೆ ಪಾಸಿಟಿವ್ ಕೇಸ್‌ಗಳುವ ವರದಿಯಾಗುತ್ತಿದ್ದವು. ಇದೀಗ 2ಸಾವಿರ ಆಸುಪಾಸಿಗೆ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿವೆ. ಇದರಿಂದಾಗಿ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 30,041 ರಿಂದ 27,212 ಕ್ಕೆ ಇಳಿದಿದೆ ಎಂದು ತಿಳಿದು ಬಂದಿದೆ.

ಇನ್ನೂ ಹೊಸದಾಗಿ ಭಾನುವಾರ ಪತ್ತೆಯಾದ ಒಟ್ಟು 2,380 ಹೊಸ ಕೋವಿಡ್ ಪ್ರಕರಣಗಳಿಂದ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 49 ಕೋಟಿಗೆ (4,49,69,630) ಏರಿಕೆಯಾಗಿದೆ. ಕಳೆದ ಒಂದೇ ದಿನ ವಿವಿಧ ರಾಜ್ಯಗಳಲ್ಲಿ ಒಟ್ಟು ಕೊರೊನಾ ಚಿಕಿತ್ಸೆ ಫಲಕಾರಿಯಾಗದೇ 15 ರೋಗಿಗಳು ಮೃತಪಟ್ಟಿದ್ದಾರೆ. ಅದರಿಂದಾಗಿ ಒಟ್ಟು ಸಾವಿನ ಸಂಖ್ಯೆ 5,31,659 ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ (27,212) ಪೈಕಿ ಒಟ್ಟು 0.06 ಪ್ರತಿಶತ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇನ್ನು ದೇಶದಲ್ಲಿ ಕೊರೊನಾದಿಂದ ಮುಕ್ತವಾಗಿ ಚೇತರಿಸಿಕೊಳ್ಳುತ್ತಿರುವವ ರಾಷ್ಟ್ರೀಯ ದರವು 98.75 ಪ್ರತಿಶತದಷ್ಟು ದಾಖಲಾಗಿದೆ ಇದುವರೆಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,44,10,738 ತಲುಪಿದೆ. ಕೊರೊನಾ ಸಾವಿಗೀಡಾದವರ ಒಟ್ಟು ಪ್ರಮಾಣ ಶೇಕಡಾ 1.18 ರಷ್ಟು ಇದೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ಕರ್ನಾಟಕದಲ್ಲಿ ಕೊರೊನಾ ಇಳಿಕೆ
ಕರ್ನಾಟಕದಲ್ಲಿ ಸಹ ಕೊರೊನಾ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಕಳೆದ 24ಗಂಟೆಯಲ್ಲಿ ಹೊಸದಾಗಿ 87 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಇದರಿಂದ ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 680 ತಲುಪಿದೆ. ಒಂದೇ ದಿನ 157 ರೋಗಿಗಳು ಚೇತರಿಸಿಕೊಂಡಿದ್ದರಿಂದ ಇದುವರೆಗೆ ಒಟ್ಟು 40,46,159 ಮಂದಿ ಗುಣಮುಖರಾಗಿದ್ದಾರೆ. ಕಳೆದ ದಿನ ಎಲ್ಲಿಯೂ ಸಾವು ದಾಖಲಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ದೈನಂದಿನ ಕೋವಿಡ್ ವರದಿ ತಿಳಿಸಿದೆ.












Click it and Unblock the Notifications