Diganth: ಸಮಂತಾ ಎದುರೇ ಪತ್ನಿ ಐಂದ್ರಿತಾ ಬಗ್ಗೆ ದೂರು ಹೇಳಿಕೊಂಡ ದಿಗಂತ್; ವೈರಲ್ ಆಯ್ತು ಚಾಕೊಲೇಟ್ ಹೀರೊ ವಿಡಿಯೋ
ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಚಾಕೊಲೇಟ್ ಹೀರೊ, ದೂದ್‌ಪೇಡ ಖ್ಯಾತಿಯ ದಿಗಂತ್ (Diganth) ಇದೀಗ ಟಾಲಿವುಡ್‌ನಲ್ಲೂ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ. ತೆಲುಗಿನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha) ಅಭಿನಯದ ಬಹುನಿರೀಕ್ಷಿತ ತೆಲುಗು ಸಿನಿಮಾ 'ಮಾ ಇಂಟಿ ಬಂಗಾರಂ' (Maa Inti Bangaaram) ಚಿತ್ರದಲ್ಲಿ ಸಮಂತಾ ಪತಿಯಾಗಿ ನಟಿಸಿರುವ ದಿಗಂತ್, ತಮ್ಮ ಅದ್ಭುತ ಅಭಿನಯದ ಮೂಲಕ ಈಗ ಇಡೀ ಸೌತ್ ಚಿತ್ರರಂಗದ ಗಮನ ಸೆಳೆದಿದ್ದಾರೆ.
ಸಿನಿಮಾದಲ್ಲಿ ದಿಗಂತ್ ಅವರ ಪರ್ಫೆಕ್ಟ್ ಹಸ್ಬೆಂಡ್ ಪಾತ್ರವನ್ನು ನೋಡಿ ಮಹಿಳಾ ಪ್ರೇಕ್ಷಕರಂತೂ "ಗಂಡ ಅಂದ್ರೆ ಇವರ ತರ ಇರಬೇಕು" ಎಂದು ಮನಸಾರೆ ಕೊಂಡಾಡುತ್ತಿದ್ದಾರೆ. ಆದರೆ, ಇದೇ ವಿಚಾರ ಈಗ ದಿಗಂತ್ ಅವರಿಗೆ ಮನೆಯಲ್ಲಿ ಹೊಸ ತಲೆನೋವು ತಂದಿಟ್ಟಿದೆ. ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಡೆದ ಸಕ್ಸಸ್ ಮೀಟ್‌ನಲ್ಲಿ ದಿಗಂತ್ ಅವರು ಸಮಂತಾ ಎದುರೇ ಪತ್ನಿ ಐಂದ್ರಿತಾ ರೈ (Aindrita Ray) ಬಗ್ಗೆ ಮಾಡಿರುವ ಕಾಮೆಂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

"ಮನೇಲಿ ಐಂದ್ರಿತಾ ನಿರೀಕ್ಷೆ ಜಾಸ್ತಿ ಆಗಿದೆ"
'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಖುಷಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ದಿಗಂತ್, ವೇದಿಕೆಯ ಮೇಲೆಯೇ ಪತ್ನಿ ಐಂದ್ರಿತಾ ಕಾಲೆಳೆದಿದ್ದಾರೆ. "ಮೊದಲನೆಯದಾಗಿ ನಮ್ಮ ನಿರ್ದೇಶಕರಿಗೆ (ನಂದಿನಿ ಮ್ಯಾಮ್) ಧನ್ಯವಾದಗಳು. ಥಿಯೇಟರ್‌ನಿಂದ ಹೊರಬರುತ್ತಿರುವ ಜನರೆಲ್ಲಾ 'ಗಂಡ ಅಂದ್ರೆ ಹೀಗಿರಬೇಕು' ಎಂದು ನನ್ನ ಪಾತ್ರವನ್ನು ಹೊಗಳುತ್ತಿದ್ದಾರೆ. ಎಲ್ಲವೂ ಚೆನ್ನಾಗಿದೆ, ಆದರೆ ಈ ಸಿನಿಮಾ ನೋಡಿದ ಮೇಲೆ ಮನೆಯಲ್ಲಿರುವ ನನ್ನ ನಿಜವಾದ ಹೆಂಡತಿ (ಐಂದ್ರಿತಾ ರೈ) ನನ್ನಿಂದ ತುಂಬಾ ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳಲು ಶುರು ಮಾಡುತ್ತಾಳೆ. ಅದೇ ನನಗೆ ಈಗ ದೊಡ್ಡ ಚಿಂತೆಯಾಗಿದೆ" ಎಂದು ದಿಗಂತ್ ನಗುತ್ತಾ ದೂರು ಹೇಳಿಕೊಂಡಿದ್ದಾರೆ. ದಿಗಂತ್ ಅವರ ಈ ಮಾತುಗಳನ್ನು ಕೇಳಿ ಪಕ್ಕದಲ್ಲೇ ಇದ್ದ ಸಮಂತಾ ಸೇರಿದಂತೆ ಇಡೀ ಚಿತ್ರತಂಡ ಜೋರಾಗಿ ನಕ್ಕಿದೆ.
After watching MIB, my wife at home is expecting too much from me.
— idlebrain.com (@idlebraindotcom) June 26, 2026
Hero Diganth#MaaIntiBangaaram Success Meet pic.twitter.com/phSkG7qq9y
ಟಾಲಿವುಡ್‌ನಲ್ಲಿ ದಿಗಂತ್ ಹೊಸ ಇನಿಂಗ್ಸ್
'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ಸಮಂತಾ ಮತ್ತು ದಿಗಂತ್ ಅವರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ದಿಗಂತ್ ಅವರು ನಿಭಾಯಿಸಿರುವ ಆದರ್ಶ ಪತಿಯ ಪಾತ್ರಕ್ಕೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡದ ನಂತರ ಈಗ ತೆಲುಗಿನಲ್ಲೂ ದಿಗಂತ್ ಅವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ.
ಇತ್ತ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಎಂದೇ ಹೆಸರಾಗಿರುವ ದಿಗಂತ್ ಮತ್ತು ಐಂದ್ರಿತಾ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈಗ ದಿಗಂತ್ ಅವರ ಈ ರಿಯಾಕ್ಷನ್ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು, "ಐಂದ್ರಿತಾ ಮೇಡಂ, ದಿಗಂತ್ ಅವರಿಗೆ ಮನೇಲಿ ಸರಿಯಾಗಿ ಕ್ಲಾಸ್ ತಗೊಳ್ಳಿ" ಎಂದು ತಮಾಷೆಯಾಗಿ ಕಾಲೆಳೆಯುತ್ತಿದ್ದಾರೆ.













Click it and Unblock the Notifications