Bengaluru Rent: ಬೆಂಗಳೂರು ದುಬಾರಿಯಲ್ಲ; ಹಣ - ಖರ್ಚು ಮ್ಯಾನೇಜ್ ಮಾಡಬೇಕಷ್ಟೇ ಎಂದ ಯುವತಿ, ಪೋಸ್ಟ್ ವೈರಲ್
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಜೀವನ ವೆಚ್ಚ ಹೆಚ್ಚುತ್ತಿದೆ ಎಂದು ಬಹಳಷ್ಟು ಜನ ದೂರುತ್ತಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆಗಳ ಬಾಡಿಗೆ ಬೆಲೆ ಹೆಚ್ಚಾಗಿರುವುದು ಹಾಗೂ ಜೀವನ ವೆಚ್ಚವೂ ಸಹ ಹೆಚ್ಚಾಗುತ್ತಿದೆ. ಆದರೆ, ಕೆಲವರು ಲಂಡನ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದಂತಹ ವಿದೇಶದ ನಗರಗಳಿಗೆ ಬೆಂಗಳೂರು ನಗರವನ್ನು ಹೋಲಿಕೆ ಮಾಡುತ್ತಿದ್ದಾರೆ. ಆದಾಗ್ಯೂ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಬೆಂಗಳೂರಿನಲ್ಲಿ ಅವರ ಮಾಸಿಕ ಬಜೆಟ್ ಲಂಡನ್‌ನಲ್ಲಿ ಅವರ ಬಾಡಿಗೆಯ ಅರ್ಧಕ್ಕಿಂತ ಕಡಿಮೆ ಎಂದು ಹೇಳಿಕೊಂಡಿದ್ದಾರೆ. ಅವರು ನೀಡಿರುವ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆದಿದೆ. ಲಂಡನ್‌ನಲ್ಲಿ ಮಾಸಿಕ ಬಾಡಿಗೆಯೇ 80,000 ರೂ ಇದೆ. ಆದರೆ ಬೆಂಗಳೂರಿನಲ್ಲಿ ನಾನು ಮನೆ ಬಾಡಿಗೆ 13,000 ರೂ. ಕೊಡುತ್ತೆನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ @thatpovgirl_ ಎನ್ನುವ ಖಾತೆಯಿಂದ ಯುವತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತನಿಷ್ಕಾ ಎನ್ನುವ ಹೆಸರಿನ ಯುವತಿಯು ರೀಲ್‌ವೊಂದನ್ನು ಶೇರ್ ಮಾಡಿದ್ದು ಅದರಲ್ಲಿ ಬೆಂಗಳೂರಿನಲ್ಲಿ ಎಷ್ಟು ವೆಚ್ಚ ಮಾಡುತ್ತಿದ್ದಾರೆ ಹಾಗೂ ಬೆಂಗಳೂರು ಬೇರೆ ನಗರಗಳಿಂತಲೂ ಯಾಕೆ ದುಬಾರಿಯಲ್ಲ ಎನ್ನುವುದನ್ನು ವಿವರಿಸಿದ್ದಾರೆ. ರೀಲ್‌ನಲ್ಲಿ ಅವರು ತಮ್ಮ ಮಾಸಿಕ ವೆಚ್ಚದ ವಿವರಗಳನ್ನು ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ಬಾಡಿಗೆಗೆ ಮಾತ್ರ 80,000 ಪಾವತಿಸುತ್ತಿದ್ದೆ ಎಂದಿದ್ದಾರೆ. ಲಂಡನ್‌ನಲ್ಲಿ ಕೇವಲ 80,000 ಬಾಡಿಗೆ ಪಾವತಿಸುವುದರಿಂದ ಮಾಸಿಕ 30,000 ನಲ್ಲಿ ವಾಸಿಸಲು ಪ್ರಾರಂಭಿಸಿದ್ದೇನೆ ಎಂದು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೋರಮಂಗಲ ಮತ್ತು HSR ಲೇಔಟ್ ಪ್ರದೇಶಗಳಲ್ಲಿ ಉತ್ತಮ ಗಾಳಿ ಇರುವ ಮನೆಗೆ 13,000 ಬಾಡಿಗೆ ನೀಡಿರುವುದು ದೊಡ್ಡ ವೆಚ್ಚವಾಗಿದೆ. 2,000 ಬಾಡಿಗೆ ಉಪಕರಣಗಳಿಗೆ, 4,000-5,000 ದಿನಸಿ ಸಾಮಾನುಗಳಿಗೆ ಮತ್ತು 2,000 ವರೆಗೆ ತಿಂಗಳಿಗೆ ಕೆಲವು ಬಾರಿ ಸ್ನೇಹಿತರೊಂದಿಗೆ ಹೊರಗೆ ಊಟ ಮಾಡಲು ಖರ್ಚು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಉತ್ತಮ ಏಕೆಂದರೆ ನಾನು ಕೋರಮಂಗಲ - ಎಚ್‌ಎಸ್‌ಆರ್ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ಎಲ್ಲವೂ ಅತ್ಯುತ್ತಮವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹೊರಗೆ ಹೋಗುವ ಬಹುತೇಕ ಸಂದರ್ಭಗಳಲ್ಲಿ ನಾನು ಮನೆಯಿಂದಲೇ ಊಟ ತೆಗೆದುಕೊಂಡು ಹೋಗುತ್ತೇನೆ.
Bengaluru Rent: ಕಾಫಿಗೆ ದುಬಾರಿ ವೆಚ್ಚ
ಇನ್ನು ಬೆಂಗಳೂರಿನಲ್ಲಿ ಯುವರಿಯು ಕಾಫಿಗೆ ದುಬಾರಿ ಮೊತ್ತದ ಹಣವನ್ನು ಖರ್ಚು ಮಾಡುತ್ತಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕರಿಂದ ಐದು ಸಾವಿರ ರೂಪಾಯಿಯನ್ನು ಕೇವಲ ಕಾಫಿಗೆ ಖರ್ಚು ಮಾಡುತ್ತಿದ್ದೇನೆ ಇದೊಂದೇ ದುಬಾರಿ ವೆಚ್ಚ ಅಂತ ಹೇಳಿದ್ದಾರೆ.













Click it and Unblock the Notifications