Covid 19 Report: ಭಾರತದಲ್ಲಿ 10,542 ಪಾಸಿಟಿವ್ ಪ್ರಕರಣ ಪತ್ತೆ, ಎರಡೇ ದಿನದಲ್ಲಿ ಶೇ.38 ಏರಿಕೆ
ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಎರಡು ದಿನದಿಂದ ಕಡಿಮೆಯಾಗಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದೆ. ಬುಧವಾರ 10,542 ಹೆಚ್ಚು ಮಂದಿ ಕೋವಿಡ್ ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ಭಾರತವು ಬುಧವಾರ 10,000 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದು ಕಳೆದ ಎರಡು ದಿನಗಳಿಗಿಂತ ಶೇಕಡಾ 38 ಅಧಿಕ ಎಂಬುದು ಆತಂಕಕಾರಿ ವಿಷಯವಾಗಿದೆ. ಬಿಡುಗಡೆಯಾದ ಕೋವಿಡ್ ವರದಿ ನೋಡಿದರೆ ಹೊಸ ಪ್ರಕರಣಗಳಿಂದ ದೇಶದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 63,562 ತಲುಪಿದೆ.

ನೆನ್ನೆ ಮಂಗಳವಾರ 7,633 ಹೊಸ ಪ್ರಕರಣ ಹಾಗೂ ಸೋಮವಾರ 9,111 ಹೊಸ ಪಾಸಿಟಿವ್ ಕೇಸ್ ದಾಖಲಾಗಿದ್ದವು. ಅದಾದ ಬಳಿಕ ಮತ್ತೆ ಕೊರೊನಾ ಏರುಗತಿಯಲ್ಲಿ ಸಾಗುತ್ತಿರುವ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಒಂದೇ ದಿನಲ್ಲಿ ದೇಶಾದ್ಯಂತ 38 ಸಾವುಗಳು ದಾಖಲಾಗಿವೆ.
ಪಶ್ಚಿಮ ಬಂಗಾಳದಲ್ಲಿ ಮಾಸ್ಕ್ ಕಡ್ಡಾಯ
ಭಾರತಾದ್ಯಂತ ಕೊರೊನಾ ಸೋಂಕು ಆರ್ಭಟ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳ ಮಧ್ಯೆ, ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ಕೋವಿಡ್ 19 ಮಾರ್ಗಸೂಚಿ/ಸಲಹೆ ನೀಡಿದೆ. ಅದರ ಪ್ರಕಾರ ವಿಶೇಷವಾಗಿ ವೃದ್ಧರು, ಮಕ್ಕಳು, ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಜೊತೆಗೆ ಜನಸಂದಣಿ ಪ್ರದೇಶಗಳಲ್ಲಿನ ಜನರು ಕಡ್ಡಾಯವಾಗಿ ಮಾಸ್ಕ್‌ಧಾರಣೆ ಕಡ್ಡಾಯಗೊಳಿಸಿದೆ.
ಮಾಸ್ಕ್ ಕಡ್ಡಾಯದ ಜೊತೆಗೆ ಗುಂಪು ಸೇರುವುದನ್ನು ಸಾಧ್ಯವಾದರೆ ತಪ್ಪಿಸಿ. ವೈರಸ್ ಕೊಲ್ಲಲು ಜನರು ಆಗಾಗ್ಗೆ ಕೈ ತೊಳೆಯಬೇಕು. ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ಗಳನ್ನು ಎಲ್ಲರು ಬಳಸಬೇಕು ಎಂದು ಸರ್ಕಾರ ಸಲಹೆ ನೀಡಿದೆ.

ಕೊರನಾ ಮೂರನೇ ಡೋಸ್ (ಬೂಸ್ಟರ್) ತೆಗೆದುಕೊಳ್ಳದ ಕಾರಣ ಜನರಿಗೆ ಕೂಡಲೇ ಲಸಿಕೆ ಪಡೆಯುವಂತೆ ಸರ್ಕಾರ ನಿರ್ದೇಶಿಸಿದೆ. ಕೋವಿಡ್ ಪಾಸಿಟಿವ್ ಕಂಡು ಬಂದವರು ಒಂದು ವಾರ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಮನೆಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಬೇಕು. ಆರೋಗ್ಯ ಪರಿಸ್ಥಿತಿ ಹದಗೆಟ್ಟರೆ ಅಂತವರು ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಬೇಕು. ಸಾಧ್ಯವಾದರೆ ಆಸ್ಪತ್ರೆಗಳಲ್ಳೇ ಚಿಕಿತ್ಸೆ ಪಡೆಯುವಂತೆ ಹೇಳಲಾಗಿದೆ.
ಕರ್ನಾಟಕದಲ್ಲಿ ನೆನ್ನೆ 379 ಕೇಸ್ ಪತ್ತೆ
ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 379 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 2056ಕ್ಕೆ ತಲುಪಿದೆ. ಇದುವರೆಗೆ ಒಟ್ಟು 4040409 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸೋಂಕಿನಿಂದ ಒಂದೇ ದಿನ 3 ಮಂದಿ ಮೃತಪಟ್ಟಿದ್ದಾರೆ. ಈ ಕಾರಣಕ್ಕೆ ಒಟ್ಟು ಮೃತರ ಸಂಖ್ಯೆ 40,297ಕ್ಕ ಏರಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 16,634 ಕೋವಿಡ್ ತಪಾಸಣೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ವರದಿ ತಿಳಿಸಿದೆ.












Click it and Unblock the Notifications