2024ರ ಲೋಕಸಭೆ ಚುನಾವಣೆಗೆ ಮತ ಹಾಕುವುದು ಹೇಗೆ?
ಭಾರತದ ಭವಿಷ್ಯ ನಿರ್ಧಾರ ಮಾಡಲು ಭಾರತೀಯರು ಮತದಾನ ಮಾಡಲಿದ್ದಾರೆ. ಹೀಗಾಗಿ ಮತದಾನ ಮಾಡಲು ಶತಕೋಟಿ ಭಾರತೀಯರು ಸಜ್ಜಾಗಿದ್ದಾರೆ. ಭಾರತದ 544 ಲೋಕಸಭೆ ಕ್ಷೇತ್ರಗಳಿಗೆ 7 ಹಂತದಲ್ಲಿ ಮತದಾನ ನಡೆಯುತ್ತಿದ್ದು, ನಾಳೆ 2ನೇ ಹಂತದಲ್ಲಿ ವೋಟಿಂಗ್ ನಡೆಯಲಿದೆ. ಕರ್ನಾಟಕದ ಪಾಲಿಗೆ ಇದು ಮೊದಲನೇ ಹಂತವಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿ ಮತ ಹಾಕುತ್ತಿರುವವರಿಗೆ ಪ್ರಮುಖ ಮಾಹಿತಿ ಇಲ್ಲಿದೆ.
ಭಾರತವು ಜಾಗತಿಕ ಶಕ್ತಿಯಾಗಿ ಬೆಳೆದಿದೆ, ಇಡೀ ಪ್ರಪಂಚದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ಕೂಡ ನಮ್ಮದು. ಜನಸಂಖ್ಯೆ ವಿಚಾರದಲ್ಲೂ ಭಾರತವೇ ಈಗ ನಂಬರ್ 1 ಆಗಿದೆ. ಇಂತಿಪ್ಪ ಭಾರತದಲ್ಲಿ ಲೋಕಸಭೆ ಚುನಾವಣೆ ಎಂದರೆ ಅದು ಹಬ್ಬವೇ ಸರಿ. ಹೀಗೆ 2024ರ ಲೋಕಸಭೆ ಚುನಾವಣೆ ಕೂಡ ಹಬ್ಬದಂತೆ ಆಗುತ್ತಿದ್ದು, ಇದೀಗ ನಮ್ಮ ಕನ್ನಡಿಗರು ಕೂಡ ಮೊದಲ ಹಂತದಲ್ಲಿ ಮತ ಹಾಕಲು ಸಜ್ಜಾಗಿದ್ದಾರೆ. ಹಾಗಾದರೆ, ನೀವು ಮೊದಲನೇ ಬಾರಿಗೆ ವೋಟಿಂಗ್ ಮಾಡುತ್ತಿದ್ದರೆ ಏನೆಲ್ಲಾ ಗಮನಿಸಬೇಕು? ಮತ ಹಾಕಲು, ಯಾವೆಲ್ಲಾ ಹಂತಗಳು ಇವೆ? ಆ ಬಗ್ಗೆ ಮಾಹಿತಿ ತಿಳಿಯೋಣ ಮುಂದೆ ಓದಿ.

ಯಂತ್ರದಲ್ಲಿ ಮತ ಹಾಕುವುದು ಹೇಗೆ?
ಭಾರತದಲ್ಲಿ ಸಂವಿಧಾನ ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕು ನೀಡಿದೆ. ಮತದಾನದ ಹಕ್ಕು ದೊಡ್ಡ ಶಕ್ತಿಯಾಗಿದ್ದು ಒಂದು ದೇಶದ ಭವಿಷ್ಯ ಕಟ್ಟುವ ಶಕ್ತಿ ಹೊಂದಿದೆ. ಹೀಗಾಗಿ ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆ ಕೂಡ ಮತದಾನ ಮಾಡಲು ಅರ್ಹನಾಗಿರುತ್ತಾನೆ. ಹೀಗೆ ಮೊದಲ ಬಾರಿ ಮತ ಹಾಕುತ್ತಿರುವ ಜನರಿಗೆ ಇಲ್ಲಿದೆ ನೋಡಿ ಮಾಹಿತಿ. ನೀವು ಮೊದಲನೇ ಬಾರಿಗೆ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತ ಹಾಕುತ್ತಿದ್ದರೆ, ಈ ಹಂತಗಳನ್ನು ಮರೆಯದೇ ನೀವು ಫಾಲೋ ಮಾಡಿ.
1). ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನಿಮ್ಮ ವೋಟರ್ ಐಡಿ ಕಾರ್ಡ್‌ನಲ್ಲಿರುವ, ಇಪಿಐಸಿ (EPIC) ನಂಬರ್ ಅನ್ನ ಹಾಕಿ ನಿಮ್ಮ ಮತಗಟ್ಟೆ ಯಾವ ಪ್ರದೇಶದಲ್ಲಿ ಇದೆಯೆಂಬ ಮಾಹಿತಿ ತಿಳಿಯಿರಿ. ಆ ನಂತರ ನಿಮ್ಮ ಮತಗಟ್ಟೆ ಅಥವಾ ವೋಟಿಂಗ್ ಸೆಂಟರ್‌ಗೆ ತೆರಳಿ.

2). ಮತಗಟ್ಟೆಗೆ ನೀವು ಮತದಾನ ಮಾಡಲು ಹೋದಾಗ, ಚುನಾವಣಾ ಅಧಿಕಾರಿ ನಿಮ್ಮ ಗುರುತಿನ ಚೀಟಿ ಪರಿಶೀಲನೆ ಮಾಡುತ್ತಾರೆ. ಇದರ ಜೊತೆ ಮತಪಟ್ಟಿ ಅಥವಾ ಮತ ಹಾಕುವ ಭಾರತೀಯ ಪ್ರಜೆಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕುತ್ತಾರೆ. ಆ ಬಳಿಕ ಅವರು ನಿಮಗೆ ಮತದಾನ ಮಾಡಲು ಅನುವು ಮಾಡಿಕೊಡುತ್ತಾರೆ.
3). ನಿಮ್ಮ ಗುರುತಿನ ಚೀಟಿ ಹಾಗೂ ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರಿನ ಪರಿಶೀಲನೆಯ ಬಳಿಕ, ನಿಮ್ಮ ತೋರು ಬೆರಳಿಗೆ ಚುನಾವಣಾ ಅಧಿಕಾರಿಗಳು ಅಳಿಸಲಾಗದ ಇಂಕ್ ಹಾಕುತ್ತಾರೆ. ಆ ನಂತರ ನೀವು ಮತ ಹಾಕಲು ಒಂದು ಚೀಟಿ ನೀಡಿ, ನಂತರ ಅಲ್ಲೇ ಇರುವ ದಾಖಲಾತಿ ಪುಸ್ತಕದಲ್ಲಿ ಸಹಿ ಹಾಕಲು ಹೇಳುತ್ತಾರೆ.
4). ಮತದಾನ ಮಾಡುವ ಮೊದಲು ನೀವು ನಿಮ್ಮ ಕೈಗೆ ಕೊಟ್ಟಿದ್ದ ಚೀಟಿಯನ್ನು ನೀಡಿ, ನಿಮ್ಮ ತೋರು ಬೆರಳಿಗೆ ಹಾಕಿರುವ ಇಂಕ್ ಅನ್ನು ಮತ್ತೊಬ್ಬ ಅಧಿಕಾರಿಗೆ ತೋರಿಸಬೇಕು. ಆ ನಂತರ ಅವರು ನಿಮಗೆ ಮತಪೆಟ್ಟಿಗೆಗೆ ತೆರಳಲು ಅವಕಾಶ ಮಾಡಿಕೊಡುತ್ತಾರೆ. ಹೀಗೆ, ಎಲ್ಲಾ ಹಂತಗಳು ಮುಗಿದ ನಂತರ ನಿಮಗೆ ಮತದಾನ ಮಾಡಲು ಅವಕಾಶ ಸಿಗಲಿದೆ.
5). ಮತ ಹಾಕಲು ನೀವು ಮತಪೆಟ್ಟಿಗೆ ಬಳಿ ಹೋದಾಗ, ಎಲೆಕ್ಟ್ರಾನಿಕ್ ಮತ ಯಂತ್ರವು ನಿಮಗೆ ಕಾಣುತ್ತದೆ. ಅಲ್ಲಿ ನಿಮಗೆ ಮತ ಹಾಕಲು ಅರ್ಹ ಅಭ್ಯರ್ಥಿಗಳ ಪಟ್ಟಿ ಕಾಣಿಸುತ್ತೆ. ನಿಮ್ಮ ಆಯ್ಕೆಯ ಅಭ್ಯರ್ಥಿ ಹಾಗೂ ಅವರ ಪಕ್ಷ & ಅವರ ಚಿಹ್ನೆಯನ್ನ ಅಲ್ಲಿ ನೀಡಿರುತ್ತಾರೆ. ಅದರ ಮೇಲೆ ನೀವು ಬಟನ್ ಒತ್ತಿ ಮುಂದುವರಿಯಬೇಕು. ಆಗಲೇ, ನೀವು ಮತ ಹಾಕಿದ್ದಕ್ಕೆ ಸಾಕ್ಷಿಯಾಗಿ ಒಂದು ಬೀಪ್ ಸೌಂಡ್ ಬರಲಿದೆ.
-
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್








Click it and Unblock the Notifications